ಬೆಳಗಾವಿ: ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿಗೆ ಅವಕಾಶ ನೀಡದ್ದಕ್ಕೆ ರೈತನೊಬ್ಬ ಭಾವುಕನಾದ ಘಟನೆ ನಗರದ ಹೊರ ವಲಯದ ಖಾಸಗಿ ರೆಸಾರ್ಟ್ನಲ್ಲಿ ಇಂದು ನಡೆಯಿತು.
ಪರಿಷತ್ ಚುನಾವಣೆ ಹಿನ್ನೆಲೆ ಖಾಸಗಿ ರೆಸಾರ್ಟ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಬಂದಿದ್ದರು. ಈ ವೇಳೆ ರೈತ ಮುಖಂಡ ರವಿ ಪಾಟೀಲ್, ಅಕಾಲಿಕ ಮಳೆಯಿಂದ ಭತ್ತದ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಮನವಿ ಮಾಡಲು ಬಂದಿದ್ದ. ಆದರೆ ಸಿಎಂ ಭೇಟಿಗೆ ಪೊಲೀಸರು ಅವಕಾಶ ನೀಡಲಿಲ್ಲ.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರೈತ, ಎಸಿಪಿ ನನ್ನನ್ನ ಹಿಡಿದು ತಳ್ಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತನ ಕಷ್ಟ ಕೇಳದ ಇವರು ಯಾವ ಸೀಮೆ ಸಿಎಂ? ಭತ್ತ ಬೆಳೆದ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಲು ಬಂದಿರುವೆ. ಪ್ರತಿಭಟನೆ ಮಾಡಲು 50 ಕಿಲೋಮೀಟರ್ ದೂರದಿಂದ ಬಂದಿಲ್ಲ ಎಂದು ರೈತ ಆಕ್ರೋಶ ವ್ಯಕ್ತಪಡಿಸಿದ್ದಾರೆ.