ಬೆಂಗಳೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್​​ ನಡುವಿನ ಕಿತ್ತಾಟ ಮುಂದುವರಿದಿದೆ. ಇದೀಗ ರೋಹಿಣಿ ಸಿಂಧೂರಿ ಎತ್ತಿರುವ ಪ್ರಶ್ನೆಗಳಿಗೆ ಶಿಲ್ಪಾ ನಾಗ್​​ ಸುದೀರ್ಘ ಪತ್ರಿಕಾ ಹೇಳಿಕೆಯನ್ನ ಬಿಡುಗಡೆ ಮಾಡಿದ್ದಾರೆ.

ನಿನ್ನೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಶಿಲ್ಪಾ ನಾಗ್​ ಅವರ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು. ಈ ಪ್ರಕಟಣೆಯಲ್ಲಿ ತಮ್ಮ ಮೇಲಿನ ಆರೋಪ ನಿರಾಧಾರ ಎಂದಿದ್ದ ಅವರು, ಶಿಲ್ಪಾ ನಾಗ್​ ಅವರ ಕಾರ್ಯವೈಖರಿಯನ್ನ ಪ್ರಶ್ನೆ ಮಾಡಿದ್ದರು. ಸಿಂಧೂರಿ ಅವರ ಈ ಪತ್ರಿಕಾ ಹೇಳಿಕೆಗೆ ಪ್ರತಿಯಾಗಿ ಶಿಲ್ಪಾ ನಾಗ್ ಇದೀಗ ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದ್ದಾರೆ.

ಡಿಸಿಗೆ ಶಿಲ್ಪಾ ಪ್ರತ್ಯುತ್ತರ
ಉತ್ತರ 1 : ಡಿಸಿಯಿಂದ ಮಾನಸಿಕವಾಗಿ ಅನುಭವಿಸುತ್ತಿದ್ದ ಚಿತ್ರಹಿಂಸೆ ನಿಜ
ಉತ್ತರ 2 : ಜಿಲ್ಲಾಧಿಕಾರಿ ಕೋವಿಡ್ ಸಭೆಗಳಿಗೆ ಆಗಿಂದ್ದಾಗೆ ಹಾಜರಾಗಿದ್ದೇನೆ
ಉತ್ತರ 3 : ಕೆಲವು ಬಾರಿ ಡಿಸಿ ಸಭೆಗೆ ನೋಡಲ್ ಅಧಿಕಾರಿಗಳಿಂದ ಮಾಹಿತಿ ನೀಡಿದ್ದೇನೆ
ಉತ್ತರ 4 : ಪಾಲಿಕೆಯ ಅಂಕಿ-ಅಂಶ, ಮಾಹಿತಿಗಳಿಗೆ ಅಂಕಿತ ಹಾಕಿಯೇ ಸಲ್ಲಿಕೆ ಮಾಡಲಾಗಿದೆ
ಉತ್ತರ 5 : ಕೋವಿಡ್​ ಕೇಸ್​​ಗಳ ಬಗ್ಗೆ ವಾರ್​​ ರೂಂನಿಂದಲೇ ಡಿಸಿಗೆ ನೇರ ಮಾಹಿತಿ ನೀಡಿದ್ದೇನೆ
ಉತ್ತರ 6 : ಆಯುಕ್ತರ ಸಹಿ ಲಭ್ಯವಿಲ್ಲದಿದ್ದಾಗ ಹೆಚ್ಚುವರಿ ಆಯುಕ್ತರಿರುತ್ತಾರೆ
ಉತ್ತರ 7 : 9 ಕಡೆ ಕೋವಿಡ್ ಆರೈಕೆ ಕೇಂದ್ರಗಳು, 1122 ಹಾಸಿಗೆ ಸೌಲಭ್ಯವಿದೆ
ಉತ್ತರ 8 : ಆರೈಕೆ ಕೇಂದ್ರಗಳ ನಿರ್ವಹಣೆಗೆ ಸಿಬ್ಬಂದಿ, ಔಷಧಿ, ಉಪಕರಣವಿದೆ
ಉತ್ತರ 9 : ಪಾಲಿಕೆ ಪ್ರಾರಂಭಿಸಿರುವ ಕಾರ್ಯಗಳಿಗೆ ಜಿಲ್ಲಾಡಳಿತ ಸಾಮಾಗ್ರಿ ನೀಡಿಲ್ಲ
ಉತ್ತರ 10 : ಆರೈಕೆ ಕೇಂದ್ರಗಳಲ್ಲಿ ಸಿಎಸ್‌ಆರ್ ಅಡಿಯಲ್ಲಿ ಸ್ವೀಕೃತಿ ಸಾಮಗ್ರಿಗಳ ಬಳಕೆ
ಉತ್ತರ 11 : ಸದರಿ ಆರೈಕೆ ಕೇಂದ್ರಗಳಿಗೆ ಜಿಲ್ಲಾಡಳಿತದಿಂದ ಸಿಬ್ಬಂದಿ ಒದಗಿಸಿಲ್ಲ
ಉತ್ತರ 12 : ಆರೈಕೆ ಕೇಂದ್ರದ ವೆಚ್ಛವೆಲ್ಲ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಭರಿಸಿದೆ
ಉತ್ತರ 13 : ಸೋಂಕು ನಿವಾರಣ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ
ಉತ್ತರ 14 : ನಾನು ಜಿಲ್ಲಾಡಳಿತದ ವಿರುದ್ಧ ಯಾವುದೇ ರೀತಿ ಹೇಳಿಕೆ ನೀಡಿರುವುದಿಲ್ಲ
ಉತ್ತರ 15 : ಸುದ್ದಿಗೋಷ್ಠಿಯಲ್ಲಿ ನೀಡಿದ ಅಂಕಿ-ಅಂಶಗಳು ಪೂರ್ಣ ಸತ್ಯದಿಂದ ಕೂಡಿದೆ

The post ಮುಗಿಯದ ಕಿತ್ತಾಟ.. ರೋಹಿಣಿ ಸಿಂಧೂರಿ ಪ್ರಶ್ನೆಗೆ ಉತ್ತರ ಕೊಟ್ಟ ಶಿಲ್ಪಾ ನಾಗ್ appeared first on News First Kannada.

Source: newsfirstlive.com

Source link