ಮುಗಿಯದ ಜಟಾಪಟಿ.. ಸಿಂಧೂರಿ ವಿರುದ್ಧ 100 ರೂ. ಮಾನನಷ್ಟ ಮೊಕದ್ದಮೆ ಕೇಸ್​​ ದಾಖಲಿಸಿದ ಶಾಸಕ

ಮುಗಿಯದ ಜಟಾಪಟಿ.. ಸಿಂಧೂರಿ ವಿರುದ್ಧ 100 ರೂ. ಮಾನನಷ್ಟ ಮೊಕದ್ದಮೆ ಕೇಸ್​​ ದಾಖಲಿಸಿದ ಶಾಸಕ

ಬೆಂಗಳೂರು: ಜೆಡಿಎಸ್ ಶಾಸಕ ಸಾ.ರಾ.ಮಹೇಶ್, ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ 100 ರೂಪಾಯಿ‌ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಸಾರ್ವಜನಿಕವಾಗಿ ಮಾನಹಾನಿ ಮಾಡಿದ ಆರೋಪದ ಮೇಲೆ ಮಾನ‌ಹಾನಿ ಮೊಕದ್ದಮೆ ಜೊತೆಗೆ ಹಕ್ಕುಚ್ಯುತಿ ಮಂಡನೆಗೂ ಸಾರಾ ಮಹೇಶ್ ನಿರ್ಧಾರ ಮಾಡಿದ್ದಾರೆ. ಚಾಮರಾಜನಗರ ಆಕ್ಸಿಜನ್ ಘಟನೆಯಲ್ಲಿ ಶಾಸಕರು ಕ್ಷಮೆ ನೀಡುವಂತೆ ರೋಹಿಣಿ ಸಿಂಧೂರಿ ಕೇಳಿದ್ರು. ನನ್ನ ಮೇಲೆ ಭೂಕಬಳಿಕೆ ಆರೋಪವನ್ನ ರೋಹಿಣಿ ಸಿಂಧೂರಿ ಮಾಡಿದ್ದರು. ಹತ್ತು ವರ್ಷಗಳ ಹಿಂದೆ ಸಾರಾ ಮಹೇಶ್ ಆಸ್ತಿಗಳ ಬಗ್ಗೆಯೂ ವಿಡಿಯೋ ವೈರಲ್ ಆಗಿತ್ತು. ಪತ್ನಿ ಹೆಸರಲ್ಲಿರುವ ಆಸ್ತಿಯ ಬಗ್ಗೆಯೂ ಮೂಡಾಗೆ ಪತ್ರಬರೆಯಲಾಗಿತ್ತು. ಈ ಎಲ್ಲಾ ವಿಚಾರಗಳಲ್ಲಿ ನನ್ನ ಮಾನಹಾನಿಯಾಗಿದೆ ಎಂದು ಸಾರಾ ಮಹೇಶ್ ಆರೋಪಿಸಿದ್ದಾರೆ.

ಬೆಂಗಳೂರು ಹಾಗೂ ಮೈಸೂರಲ್ಲಿ ಸಾರಾ ಮಹೇಶ್‌ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ ಅಂತಾ ನ್ಯೂಸ್​ಫಸ್ಟ್​ಗೆ ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ. ಅಲ್ಲದೇ ಅರ್ಜಿಯಲ್ಲಿ 100 ರೂಪಾಯಿ ಮಾನನಷ್ಟ ಪರಿಹಾರ ನೀಡುವಂತೆ ಅರ್ಜಿಯಲ್ಲಿ ತಿಳಿಸಿದ್ದಾರೆ.

The post ಮುಗಿಯದ ಜಟಾಪಟಿ.. ಸಿಂಧೂರಿ ವಿರುದ್ಧ 100 ರೂ. ಮಾನನಷ್ಟ ಮೊಕದ್ದಮೆ ಕೇಸ್​​ ದಾಖಲಿಸಿದ ಶಾಸಕ appeared first on News First Kannada.

Source: newsfirstlive.com

Source link