ಬೆಂಗಳೂರು: ಕಳೆದ ಕೆಲ ದಿನಗಳಿಂದ ಬೆಂಗಳೂರಲ್ಲಿ ಕಾಡ್ತಿದ್ದ ಬಹುದೊಡ್ಡ ಸಮಸ್ಯೆ ಅಂದ್ರೆ ಅದು ಬೆಡ್‌ ಸಮಸ್ಯೆ. ಈಗ ಕೊಂಚ ತಣ್ಣಗಾದಂತೆ ಕಾಣಿಸಿದ್ರೂ ಆವತ್ತು ಸಂಸದ ತೇಜಸ್ವಿ ಸೂರ್ಯ ಬಯಲಿಗೆಳೆದ್ರಲ್ಲಾ.. ಬೆಡ್‌ ಬ್ಲಾಕಿಂಗ್‌ನ ಸತ್ಯ.. ಅದ್ರ ಕಾವು ತಣ್ಣಗಾಗಿಲ್ಲ.. ಬೆಡ್ ಬ್ಲಾಕಿಂಗ್ ಪ್ರಕರಣದ ಇಂಚಿಂಚೂ ಜಾಲಾಡ್ತಿದೆ ಸಿಸಿಬಿ. ಯಾರೆಲ್ಲಾ ಇದ್ರಲ್ಲಿ ಇನ್ವಾಲ್ವ್‌ ಆಗಿದ್ದಾರೆ ಅನ್ನೋ ಬಗ್ಗೆ ಕಂಪ್ಲೀಟ್‌ ತನಿಖೆ ನಡೆಸ್ತಿದೆ.

8 ವಲಯದ ವಾರ್ ರೂಂ ಸಿಬ್ಬಂದಿ ಸೇರಿ ಒಟ್ಟು 150 ಜನರನ್ನ ತೀವ್ರ ವಿಚಾರಣೆಗೊಳಪಡಿಸಿದೆ ಸಿಸಿಬಿ. ಅದ್ರಲ್ಲೂ ಪ್ರಮುಖವಾಗಿ ಪ್ರಕರಣದಲ್ಲಿ 30ಕ್ಕೂ ಅಧಿಕ ವೈದ್ಯರ ವಿಚಾರಣೆ ನಡೆಸಿದ್ದಾರೆ ಪೊಲೀಸರು. ಈಗಾಗಲೇ 6ಕ್ಕೂ‌ ಹೆಚ್ಚು ಆಸ್ಪತ್ರೆಯ ಆಡಳಿತ ಮಂಡಳಿಯ ಸಿಬ್ಬಂದಿ ವಿಚಾರಣೆ ನಡೆದಿದೆ.

ಪ್ರಾಥಮಿಕ ತನಿಖೆಯಲ್ಲಿ 4 ಆಸ್ಪತ್ರೆಯ ಸಿಬ್ಬಂದಿ ದಂಧೆಯಲ್ಲಿ ಶಾಮೀಲಾಗಿರೋ ಶಂಕೆ ವ್ಯಕ್ತವಾಗಿದೆ. ಈ 4 ಆಸ್ಪತ್ರೆಗಳಲ್ಲಿ ಎಷ್ಟು ರೋಗಿಗಳು ದಾಖಲಾಗಿದ್ರು? ಹೇಗೆ ದಾಖಲಾದ್ರು? ಅವರ ಬಿಯು ನಂಬರ್ ಏನು? ಅವರ ವಿಳಾಸದ ಸಮೇತ ಪರಿಶೀಲನೆ ಮಾಡೋಕೆ ಸಿಸಿಬಿ ಮುಂದಾಗಿದ್ದು ರೋಗಿಗಳಿಗೆ ಸಂಬಂಧಪಟ್ಟ ಎಲ್ಲಾ ದಾಖಲಾತಿ ನೀಡುವಂತೆ ನೋಟಿಸ್​ ನೀಡಿದೆ.

ವಾರ್ ರೂಂನ ಸಿಬ್ಬಂದಿಯೊಂದಿಗೆ ಆಸ್ಪತ್ರೆಯ ಕೆಲ ಸಿಬ್ಬಂದಿ ಕೂಡ ಶಾಮಿಲಾಗಿರೋ ಶಂಕೆ ವ್ಯಕ್ತವಾಗಿದೆ. ಸಿಸಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ 30ಕ್ಕೂ ಹೆಚ್ಚು ಜನರ ವಿಚಾರಣೆ ನಡೆದಿದ್ದು ವಾರ್ ರೂಂಗೆ ಬಂದಿದ್ದವರನ್ನ ಕರೆಸಿ ಸಿಸಿಬಿ ವಿಚಾರಣೆ ನಡೆಸ್ತಿದೆ. ಆಸ್ಪತ್ರೆಗಳ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್​​​ಗಳ ಮೇಲೆ ತೀವ್ರ ಅನುಮಾನ ವ್ಯಕ್ತವಾಗಿದ್ದು ಬಂಧನ ಆಗಿರೋ ಆರೋಪಿಗಳ ಪೈಕಿ ಮಾರ್ಕೆಟಿಂಗ್ ಸಿಬ್ಬಂದಿಯೂ ಇದ್ದಾರೆ. ಸಪ್ತಗಿರಿ ಆಸ್ಪತ್ರೆಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಂಥೋನಿ ಈಗಾಗ್ಲೇ ಅರೆಸ್ಟ್ ಆಗಿದ್ದಾನೆ. ಇನ್ನೂ ಕೆಲ‌ ಆಸ್ಪತ್ರೆಯ ಮಾರ್ಕೆಟಿಂಗ್ ಟೀಂ ಶಾಮೀಲಾಗಿರೋ ಸಾಧ್ಯತೆ ಇದೆ. ಇದುವರೆಗೂ 8 ಆರೋಪಿಗಳನ್ನು ಅರೆಸ್ಟ್ ಮಾಡ್ಲಾಗಿದ್ದು ಇನ್ನಿಬ್ಬರು ವೈದ್ಯರಿಗೆ ಕೋವಿಡ್‌ ಪಾಸಿಟಿವ್ ಆಗಿದ್ದು, ನೆಗೆಟಿವ್ ಆದ ಬಳಿಕ‌ ಅರೆಸ್ಟ್ ಮಾಡಲು ಸಿಸಿಬಿ ಸಿದ್ದವಾಗಿದೆ. ಬಂಧಿತ ಆರೋಪಿಗಳ ಮೊಬೈಲ್ ಸೀಜ್ ಮಾಡಿ ಎಫ್​ಎಸ್​ಎಲ್​​ಗೆ ರವಾನೆ ಮಾಡ್ಲಾಗಿದೆ.

ಆರೋಪಿಗಳ ಮೊಬೈಲ್‌ ರಿಟ್ರೀವ್‌ ಆದ ಬಳಿಕ ಮತ್ತಷ್ಟು ಸುಳಿವು, ಮತ್ತಷ್ಟು ಆರೋಪಿಗಳ ಕಳ್ಳಾಟ ಬಯಲಾಗೋದು ಗ್ಯಾರಂಟಿ. ಬೆಡ್‌ ಬ್ಲಾಕ್‌ ಮಾಡಿ ಅಮಾಯಕರ ಜೀವ ತೆಗೆದವರ ಬಣ್ಣ ಬಯಲಾಗ್ಲೇಬೇಕಿದೆ.

ಸಂದೇಶ್‌, ನ್ಯೂಸ್‌ಫಸ್ಟ್‌, ಬೆಂಗಳೂರು

The post ಮುಗಿಯದ ಬೆಡ್ ಬ್ಲಾಕಿಂಗ್ ದಂಧೆಯ ಕರ್ಮಕಾಂಡ.. ಪ್ರಕರಣದ ಬೆನ್ನು ಹತ್ತಿದ ಸಿಸಿಬಿ appeared first on News First Kannada.

Source: newsfirstlive.com

Source link