ಸಿರಿಗನ್ನಡ ಪ್ರೇಕ್ಷಕರಿಗೆ ಸಿರಿ ಸಿರಿ ಸಿನಿಮಾಗಳ ಸುಗ್ಗಿ. ಸೈಕ್ಲೋನ್ ಮಳೆ ರಾಜ್ಯಾದ್ಯಂತ ಸೈಕಲ್ ಹೊಡಿತಿರೋ ನಡುವೆಯೂ ಪ್ರೇಕ್ಷಕರನ್ನ ಕೊಡೆ ಹಿಡಿದು ಥಿಯೇಟರ್ನ ಕಡೆ ನಡೆದು ಬರುವಂತೆ ಮಾಡುತ್ತಿವೆ ಕನ್ನಡ ಸಿನಿಮಾಗಳು. ‘‘ಮುಗಿಲ್ ಪೇಟೆ’’.. ಮನುರಂಜನ್ ನಟನೆಯ ಮೂರನೇ ಸಿನಿಮಾ ಇದು. ಮುದ್ದಾದ ಹಾಡುಗಳು ಜಬರ್ದಸ್ತ್ ಟ್ರೈಲರ್ ನಿಂದ ಸದ್ದು ಮಾಡಿದ್ದ ಮುಗಿಲ್ ಪೇಟೆ ಪ್ರೇಕ್ಷಕರ ಮುಂದೆ ಬಂದು ನಿಂತಿದೆ.
ಮೆಗಾ ಜೂನಿಯರ್ ಕ್ರೇಜಿಸ್ಟಾರ್ ಮನುರಂಜನ್ ನಟನೆಯ ಮೂರನೇ ಸಿನಿಮಾ ‘‘ಮುಗಿಲ್ ಪೇಟೆ’’. ಹೊಳೆಯಂತೆ ಸುರಿಯುತ್ತಿರುವ ಮಳೆಯ ನಡುವೆಯೂ ಪ್ರೇಕ್ಷಕ ಸಮೂಹ ಮುಗಿಲ್ ಪೇಟೆ ಸಿನಿಮಾವನ್ನ ದೊಡ್ಡ ಮಟ್ಟಕ್ಕೆ ಥಿಯೇಟರ್ಗೆ ಬಂದು ಮುಗಿಲ್ ಪೇಟೆ ಸಿನಿಮಾವನ್ನ ಸ್ವಾಗತಿಸಿದ್ದಾರೆ.
ಎರಡು ವರ್ಷದಿಂದ ಶೂಟಿಂಗ್ ಅಡ್ಡದಲ್ಲಿ ಕಾಲ ಕಳೆದು ಭಾರಿ ನಿರೀಕ್ಷೆಯಿಂದ ಸಿನಿಮಾ ಮಾಡಿ ಪ್ರೇಕ್ಷಕರ ಮನಸಿನಲ್ಲಿ ನಿರೀಕ್ಷೆಯ ನೆಟ್ಟಿಯನ್ನ ಹಚ್ಚಿತ್ತು ಮುಗಿಲ್ ಪೇಟೆ ಸಿನಿಮಾ ತಂಡ.
ಕನಸುಗಾರ ವಿ.ರವಿಚಂದ್ರನ್ ಅವರ ಮೊದಲನೇ ಮಗ ಮನುರಂಜನ್ ಈಗ ತಾನೆ ಚಿತ್ರರಂಗದಲ್ಲಿ ಬೆಳೆಯುತ್ತಿರೋರು. ಒಬ್ಬ ಬಿಗ್ ಸ್ಟಾರ್ ಸಿನಿಮಾ ಓಪನಿಂಗ್ ಪಡೆದುಕೊಂಡ್ರೆ ಹೆಂಗಿರುತ್ತೋ ಹಂಗೆ ದೊಡ್ಡ ಮಟ್ಟಕ್ಕೆ ಮನು ಅವರ ಮುಗಿಲ್ ಪೇಟೆ ಪ್ರಾರಂಭವನ್ನ ಪಡೆದುಕೊಂಡಿದೆ.. ಮನುರಂಜನ್ ಅವರ ಸಹೋದರ ವಿಕ್ರಂ ಅವರೇ ಮುಂದೆ ನಿಂತು ಥಿಯೇಟರ್ ಸೆಟ್ ನೋಡ್ಕೊಂಡು ಸಿನಿಮಾ ಬಿಗ್ ಓಪನಿಂಗ್ ಪಡೆದುಕೊಳ್ಳಲು ಮುಂದಾಗಿದ್ದಾರೆ.
ಮುಗಿಲ್ ಪೇಟೆ ಒನ್ ಲೈನ್ ಸ್ಟೋರಿ ಏನು ?
ಜೀವನ ಅನ್ನೋದು ಕನ್ಯಾಕುಮಾರಿಯಿಂದ ಭಾರತದ ಕಡೆ ನೋಡಿದ್ರೆ ಜೀವನ ತುಂಬನೇ ಇದೆ ಅನ್ಸುತೆ.. ಅದ್ರೆ ಕನ್ಯಾಕುಮಾರಿಯಿಂದ ಸಮುದ್ರದ ಕಡೆ ತಿರುಗಿ ನೋಡಿದ್ರೆ ಜೀವನ ಇಷ್ಟೆ ಅನ್ಸಿಬಿಡುತ್ತೆ.. ಯಾರೇ ಆಗ್ಲಿ ಅವರ್ ಅವರ ದೃಷ್ಟಿಯಲ್ಲಿ ಈ ಸೃಷ್ಟಿಯನ್ನ ನೋಡ್ತಾ ಇರ್ತಾರೆ.. ಅವರ್ ಅವರ ದೃಷ್ಟಿಯಲ್ಲಿ ಜೀವನ ನೋಡಿ ನಾವು ಕಂಡಿದ್ದೇ ಜೀವನ ಅನ್ಕೊಂಡು ಜೀವನದ ಸಂಬಂಧಗಳನ್ನ ಕ್ಷಣಿಕ ಘರ್ಷಣೆಯಲ್ಲಿ ಕಳೆದುಕೊಂಡು ಬಿಡ್ತಾರೆ.. ಈ ವಿಚಾರವನ್ನ ಇಟ್ಕೊಂಡು ಒಂದು ಕಥೆಯನ್ನ ಏಳೆದು ಪ್ರೇಕ್ಷಕರನ್ನ ‘‘ಮುಗಿಲ್ ಪೇಟೆ’’ಯಲ್ಲಿ ತಂದು ನಿಲ್ಲಿಸಿದ್ದಾರೆ ಭರತ್ ನವುಂದ.
ತನ್ನ ಪ್ರೀತಿಯನ್ನ ಹುಡ್ಕೊಂಡು ಹೋಗುವ ನಾಯಕ ಕುಂದಾಪುರ ಸಕಲೇಶಪುರ ಮಲೆನಾಡಿನ ಸುತ್ತಾ ಮುತ್ತಾ ಸುತ್ತುವಾಗ ವರ್ತಮಾನದ ಜೊತೆ ಭೂತಕಾಲ್ಲದಲ್ಲಿ ಆದ ಘಟನೆಯನ್ನ ನೆನಯುತ್ತಾ ಭವಿಷ್ಯವನ್ನ ಪ್ರೇಕ್ಷಕರೇ ಚಿಂತೆ ಮಾಡುವಂತ ಸಿನಿಮಾ ಮುಗಿಲ್ ಪೇಟೆ.. ತಂದೆ ತಾಯಿಯ ಪ್ರೀತಿಯನ್ನ ಕಳೆದುಕೊಂಡ ನಾಯಕ ತಂದೆ ತಾಯಿ ಪ್ರೀತಿಯನ್ನ ಗಳಿಸಿಕೊಳ್ಳವೋದ್ರಲ್ಲಿ ತನ್ನ ಪ್ರಿಯತಮೆಯ ಪ್ರೀತಿಯನ್ನ ಕಳೆದುಕೊಂಡು ಬಿಡ್ತಾನೆ.. ಆ ಪ್ರೀತಿಯನ್ನ ಯಾಕೆ ಕಳೆದುಕೊಂಡಿರುತ್ತಾನೆ ಹೇಗೆ ಪಡೆಯುತ್ತಾನೆ ಅನ್ನೋದೆ ಸಿನಿಮಾ ಕಥಾನಕ ಪ್ಲಸ್ ಮನಮೋಹಕ.
‘ಮುಗಿಲ್ ಪೇಟೆ’ಯಲ್ಲಿ ಯಾವ ಕಲಾವಿದರು ಅದ್ಭುತ?
ಕಥನಾಯಕ ರಾಜು ಆಗಿ ಮನುರಂಜನ್ ಕಾಣಿಸಿಕೊಂಡಿದ್ದಾರೆ.. ಒಬ್ಬ ಮಾಸ್ ಆಂಡ್ ಕ್ಲಾಸ್ ನಾಯಕನಾಗಿ ಎಂಟರ್ಫ್ಯಾಮಿಲಿ ಆಡಿಯೆನ್ಸ್ಗೆ ಇಷ್ಟವಾಗೋ ರೀತಿ ಮನುರಂಜನ್ ಕಾಣಿಸಿಕೊಂಡಿದ್ದಾರೆ ಅಚ್ಚುಕಟ್ಟಾಗಿಯೇ ಅಭಿನಯಿಸಿದ್ದಾರೆ.. ಇನ್ನು ಕಥಾ ನಾಯಕಿ ಅಪೇಕ್ಷಾ ಅಲಿಯಾಸ್ ಅಪ್ಪಿ ಪಾತ್ರದಾರಿ ಕಯಾದು.. ಇವ್ರು ಸ್ಯಾಂಡಲ್ವುಡ್ಗೆ ಮೊದಲ ಎಂಟ್ರಿಯಾದ್ರು ಕನ್ನಡದ ಮುದ್ದು ಮನೆಮಗಳಂತೆ ಅಂದ ಚೆಂದವಾಗಿ ಅಭಿನಯಿಸಿದ್ದಾರೆ.
ಹೀರೋ ಹೀರೋಯಿನ್ ಪಾತ್ರಗಳನ್ನ ಬಿಟ್ಟು ಹೇಳೋದಾದ್ರೆ ಪೋಷಕ ಪಾತ್ರದಲ್ಲಿ ತಾರಾಮ್ಮ ಹಾಗೂ ಅವಿನಾಶ್ ಪಾತ್ರಗಳಿಗೆ ಜೀವ ತುಂಬಿದ್ದಾರೆ.. ರಂಗಾಯಣ ರಘು ಸಿಕ್ಕ ಪಾತ್ರವನ್ನ ಕಾಮಿಡಿ ಪ್ಲಸ್ ಸಿರಿಯಸ್ ಎರಡನ್ನ ಅಚ್ಚುಕಟ್ಟಾಗಿ ಕುಂದಾಪುರ ಭಾಷಿಯಲ್ಲಿ ನಿಭಾಯಿಸಿದ್ದಾರೆ.. ಮನುರಂಜನ್ ಸ್ನೇಹಿತ ಪಾತ್ರದಾರಿಗಳು ಸಿಕ್ಕ ಚಾನ್ಸ್ ಅನ್ನು ಸೂಕ್ತವಾಗಿ ಬಳಸಿಕೊಂಡಿದ್ದಾರೆ.. ಮುಗಿಲ್ ಪೇಟೆ ಎಲ್ಲಾ ಪಾತ್ರದಾರಿಗಳ ಜೊತೆಗೆ ಸಾಧು ಕೋಕಿಲಾ ಅವರ ಕಾಮಿಡಿ ಹೇಳ್ಲೇ ಬೇಕು.. 18 ಗೆಟಪ್ನಲ್ಲಿ ಸಾಧು ಮಹಾರಾಜ್ ಕಾಮಿಡಿ ಹೊಳೆಯನ್ನೇ ಹರಿಸಿದ್ದಾರೆ.
ಕ್ಯಾಮೆರಾ ವರ್ಕ್ ಸೂಪರ್.. ಮ್ಯೂಸಿಕ್ ಬೊಂಬಾಟ್
ಮುಗಿಲ್ ಪೇಟೆ ಸಿನಿಮಾದ ಶೂಟಿಂಗ್ ಸಕಲೇಶ ಪುರ , ಕುಂದಾಪುರ , ಮರವಂತೆ , ಮುಗಿಲ್ ಪೇಟೆ ಸುತ್ತಾಮುತ್ತಾ ಸುಂದರ ಸ್ಥಳಗಳಲ್ಲಿ ಚಿತ್ರೀಸಲಾಗಿದೆ.. ಇನ್ನು ಶ್ರೀಧರ್ ವಿ ಸಂಭ್ರಮ್ ಅವರ ಮ್ಯೂಸಿಕ್ ಪ್ಲಸ್ ಬ್ಯಾಕ್ ಗ್ರೌಂಡ್ ಬೊಂಬಾಟ್ ಆಗಿದೆ. ಮೊದಲನೇ ದಿನ ಅದ್ಧೂರಿಯಾಗಿ ಸಿಗುತ್ತಿರುವ ರೆಸ್ಪಾನ್ಸ್ ಕಂಡು ನಾಯಕ ನಟ ಮನುರಂಜನ್ ಪುಳಕಿತರಾಗಿದ್ದಾರೆ. ಒಟ್ಟಾರೆಯಾಗಿ ಮುಗಿಲ್ ಪೇಟೆ ಸಿನಿಮಾ ಅದ್ಧೂರಿ ಓಪನಿಂಗ್ ಪಡೆದುಕೊಂಡಿದ್ದು ಕೊಟ್ಟ ದುಡ್ಡಿ ಮೋಸ ಇಲ್ಲ ಗುರು ಅನ್ನೋ ಅಭಿಪ್ರಾಯವನ್ನ ಗಿಟ್ಟಿಸಿಕೊಳ್ತಿದೆ.