ತಲೆ ಬಾಚ್ಕೊಳೊ, ಪೌಡ್ರ್​​​ ಹಾಕೊಳೋ ಅನ್ನೋ ಕಾಲವಿತ್ತು. ಈಗ ಸ್ವಲ್ಪ ಮುಖ ಮುಚ್ಕೊಳಿ, ಲಸಿಕೆ ಚುಚ್ಕೊಳಿ.. ಜಸ್ಟ್​ ಒನ್ ಆಸ್ಕು.. ಪ್ಲೀಸ್​ ವೇರ್ ಮಾಸ್ಕು ಅಂತಿದ್ದಾರೆ ಕನ್ನಡದ ಕಲಾವಿದರು.

ಹೌದು. ದೇಶದಲ್ಲಿ ಕೊರೊನಾ ಎರಡನೇ ಅಲೆ ತಗ್ಗಿದೆ. ಹಾಗಂತ ನಾವು ಮೈ ಮರೆಯೋ ಹಾಗಿಲ್ಲ. ಮಾಸ್ಕ್ ಹಾಕ್ಬೇಕು, ಸಾಮಾಜಿಕ ಅಂತರ ಕಾಪಾಡಬೇಕು.,ವ್ಯಾಕ್ಸಿನ್ ಪಡೆದು ಮುನ್ನೆಚ್ಚರಿಕೆ ವಹಿಸಬೇಕು ಅಂತ ಜಾಗೃತಿ ಮೂಡಿಸಲು ಕರ್ನಾಟಕ ಪಲ್ಮನಾಜಿಸ್ಟ್​​ಗಳ ಅಸೋಸಿಯೇಷನ್​ ಒಂದು ವಿಭಿನ್ನ ಪ್ರಯತ್ನ ಮಾಡಿದೆ. ಕೇಳುಗರು ಪದೇ ಪೇ ಗುನುಗುವಂಥ ಱಪ್  ಹಾಡೊಂದರ ಮೂಲಕ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸುತ್ತಿದೆ.

ರಾಜೇಶ್​ ರಾಮಸ್ವಾಮಿ ಈ ಸಾಂಗ್​ಗೆ ಲಿರಿಕ್ಸ್​ ಬರೆದಿದ್ದಾರೆ. ದೀಪಕ್​ ಅಲೆಕ್ಸಾಂಡರ್​​ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಜೇಶ್​ ಹಾಗೂ ದೀಪಕ್ ಜೊತೆಗೆ ಱಪರ್ ಸುಮುಖ ಹಾಡಿಗೆ ದನಿಯಾಗಿದ್ದಾರೆ. ಹಿರಿಯ ನಟ ಸಾಯಿ ಕುಮಾರ್, ಅಲೋಕ್ ಬಾಬು, ಅಯ್ಯೋ ಶ್ರದ್ಧಾ, ಸುಹಾನಾ ಸೈಯದ್​, ಅಶ್ವಿತಿ ಶೆಟ್ಟಿ, ಅದ್ವಿತಿ ಶೆಟ್ಟಿ, ಸೋನು ವೇಣುಗೋಪಾಲ್ ಮುಂತಾದ ಕಲಾವಿದರ ಜೊತೆಗೆ ಹಲವು ವೈದ್ಯರು ಹಾಡಿನಲ್ಲಿ ಕಾಣಿಸಿಕೊಂಡು ಕೊರೊನಾ ಜಾಗೃತಿ ಮೂಡಿಸಿದ್ದಾರೆ.

ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಈ ಹಾಡಿನ ವಿಡಿಯೋವನ್ನ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಮುಚ್ಕೋಳಿ + ಮತ್ತೆ ಮರೀಬೇಡಿ ಲಸಿಕೆ ಚುಚ್ಕೋಳಿ ಅಂತ ಟ್ವೀಟ್ ಮಾಡಿದ್ದಾರೆ.

 

The post ಮುಚ್ಕೊಳಿ, ಲಸಿಕೆ ಚುಚ್ಕೊಳಿ.. ಈ ಸಾಂಗ್ ಹಾಡ್ತಾ ಕೊರೊನಾದಿಂದ ಕಾಪಾಡ್ಕೊಳಿ appeared first on News First Kannada.

Source: newsfirstlive.com

Source link