ಮೈಸೂರು: ಮುಡಾ ಆಯುಕ್ತ ನಟೇಶ್ ವಿರುದ್ಧ ಮತ್ತೊಂದು ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಮುಡಾ ದಲ್ಲಿ ಬರೋಬ್ಬರಿ 100 ಕೋಟಿ ಅವ್ಯವಹಾರ ನಡೆಸಿದ್ದಾರೆ ಅಂತಾ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಂ ಗಂಭೀರ ಆರೋಪ ಮಾಡಿದ್ದಾರೆ.

ರೈತರಿಗೆ ಪರಿಹಾರ, ಕಾಮಗಾರಿಯಲ್ಲಿ ಹಣವನ್ನ ಅಧಿಕಾರಿಗಳು ನುಂಗಿದ್ದಾರೆ. ಇದರಲ್ಲಿ ಡಾ.ಡಿ.ಬಿ. ನಟೇಶ್ ಅವರದ್ದೂ ನೇರ ಪಾಲಿದೆ. ಹೀಗಾಗಿ ಆಯುಕ್ತ ನಟೇಶ್ ಅಮಾನತು ಮಾಡಬೇಕು ಎಂದು ಕೆ.ಶಿವರಾಂ ಆಗ್ರಹ ಮಾಡಿದ್ದಾರೆ.

ಅಲ್ಲದೇ ಮುಡಾದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆಗೆ ಆಗಬೇಕು. ಈ ಸಂಬಂಧ ಜುಲೈ 5 ರಂದು ಮುಡಾ ಮುಂದೆ ಧರಣಿ ಸತ್ಯಾಗ್ರಹ ಮಾಡೋದಾಗಿ ಎಚ್ಚರಿಕೆಯನ್ನ ನೀಡಿದ್ದಾರೆ. ಆಯುಕ್ತರ ನಿರ್ಲಕ್ಷ್ಯದಿಂದಾಗಿ ಸರ್ಕಾರ ಮುಡಾ ಬಜೆಟ್‌ ತಿರಸ್ಕರಿಸಿದೆ. 12,092 ಕೋಟಿ ಪರಿಹಾರ ರೈತರಿಗೆ ಬಾಕಿ ಉಳಿಸಿಕೊಂಡಿದೆ. 674 ಕೋಟಿ ಬಜೆಟ್ ಮಂಡಿಸಿದೆ. ಬಜೆಟ್ ಮಂಡನೆಯಲ್ಲಿ ಬಾರಿ ಅಸಮತೋಲನ ಇದೆ. ಮುಡಾ ತನ್ನ ವ್ಯಾಪ್ತಿ ಮೀರಿ ಕೆಲಸ ಮಾಡಿದೆ. ಮುಡಾ ವಿರುದ್ಧ ಸಮಗ್ರ ತನಿಖೆಯಾಗಬೇಕಿದೆ ಎಂದು ಗುಡುಗಿದ್ದಾರೆ.

The post ಮುಡಾ ಆಯುಕ್ತ ನಟೇಶ್ ವಿರುದ್ಧ ₹100 ಕೋಟಿ ಅವ್ಯವಹಾರ ಆರೋಪ; ಸಿಬಿಐ ತನಿಖೆಗೆ ಆಗ್ರಹ appeared first on News First Kannada.

Source: newsfirstlive.com

Source link