ಮುದ್ದಾದ ನಗು ಬೀರಿದ ಆಯ್ರಾ; ಇಲ್ಲಿದೆ ರಾಧಿಕಾ ಪಂಡಿತ್ ಹಂಚಿಕೊಂಡ ಹೊಸ ಫೋಟೋ | Radhika Pandit Shares New photo with Ayra and Yatharv And gave caption Monday Blues


ಮುದ್ದಾದ ನಗು ಬೀರಿದ ಆಯ್ರಾ; ಇಲ್ಲಿದೆ ರಾಧಿಕಾ ಪಂಡಿತ್ ಹಂಚಿಕೊಂಡ ಹೊಸ ಫೋಟೋ

ರಾಧಿಕಾ ಪಂಡಿತ್-ಆಯ್ರಾ-ಯಥರ್ವ್​

ರಾಧಿಕಾ ಪಂಡಿತ್ ಸಂಪೂರ್ಣ ಸಮಯವನ್ನು ಮಕ್ಕಳಿಗಾಗಿ ಮೀಸಲಿಟ್ಟಿದ್ದಾರೆ. ಅವರು ಮಾಡುವ ಕೀಟಲೆ ಫೋಟೋಗಳನ್ನು ಆಗಾಗ ಶೇರ್ ಮಾಡಿಕೊಂಡು ಫ್ಯಾನ್ಸ್​ಗೆ ಖುಷಿ ನೀಡುತ್ತಾರೆ ರಾಧಿಕಾ.

ನಟಿ ರಾಧಿಕಾ ಪಂಡಿತ್ (Radhika Pandit) ಈಗ ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ನಟನೆಯಿಂದ ದೂರ ಉಳಿದಿರುವ ಅವರು, ಹೆಚ್ಚು ಸಮಯ  ಮಕ್ಕಳ ಆರೈಕೆಯಲ್ಲಿ ತೊಡಗಿದ್ದಾರೆ. ಮಕ್ಕಳ ಜತೆ ಕಳೆಯುತ್ತಿರುವ ಫೋಟೋಗಳನ್ನು ಹಂಚಿಕೊಂಡು ಅವರು ಸಂಭ್ರಮಿಸುತ್ತಾರೆ. ರಾಧಿಕಾ ಪಂಡಿತ್ ಹಂಚಿಕೊಳ್ಳುವ ಫೋಟೋಗಳು ಫ್ಯಾನ್ಸ್​ಗೆ ಸಖತ್ ಇಷ್ಟ. ಅವರ ಮಕ್ಕಳ ವಿಶೇಷ ಫೋಟೋ ಹಾಗೂ ವಿಡಿಯೋಗಳನ್ನು ರಾಧಿಕಾ ಪಂಡಿತ್ ಆಗಾಗ ಶೇರ್ ಮಾಡಿಕೊಳ್ಳುತ್ತಾರೆ. ಈಗ ರಾಧಿಕಾ ಪಂಡಿತ್ ಯಥರ್ವ್ ಹಾಗೂ ಆಯ್ರಾಳ ಹೊಸ ಫೋಟೋವನ್ನು ಅಪ್​ಲೋಡ್ ಮಾಡಿದ್ದಾರೆ. ಇದು ಸಖತ್ ವೈರಲ್ ಆಗಿದೆ. ಈ ಫೋಟೋಗೆ ಲಕ್ಷಾಂತರ ಮಂದಿ ಲೈಕ್ಸ್ ಒತ್ತಿದ್ದಾರೆ.

ರಾಧಿಕಾ ಹಾಗೂ ಯಶ್ ದಂಪತಿಗೆ ಆಯ್ರಾ ಹಾಗೂ ಯಥರ್ವ್​ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಇವರ ಮೇಲೆ ಈ ದಂಪತಿಗೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ, ಯಶ್ ಸಮಯ ಸಿಕ್ಕಾಗಲೆಲ್ಲ ಮಕ್ಕಳ ಜತೆ ಸಮಯ ಕಳೆಯೋಕೆ ಇಷ್ಟ ಪಡುತ್ತಾರೆ. ರಾಧಿಕಾ ಪಂಡಿತ್ ಸಂಪೂರ್ಣ ಸಮಯವನ್ನು ಮಕ್ಕಳಿಗಾಗಿ ಮೀಸಲಿಟ್ಟಿದ್ದಾರೆ. ಅವರು ಮಾಡುವ ಕೀಟಲೆ ಫೋಟೋಗಳನ್ನು ಆಗಾಗ ಶೇರ್ ಮಾಡಿಕೊಂಡು ಫ್ಯಾನ್ಸ್​ಗೆ ಖುಷಿ ನೀಡುತ್ತಾರೆ ರಾಧಿಕಾ. ಈಗ ಸೋಮವಾರದಂದು (ಮೇ 23) ರಾಧಿಕಾ ಪಂಡಿತ್ ಹೊಸ ಫೋಟೋ ಹಂಚಿಕೊಂಡಿದ್ದಾರೆ.

ಆಯ್ರಾ ಹಾಗೂ ಯಥರ್ವ್​ ಇಬ್ಬರೂ ನೀಲಿ ಬಣ್ಣದ ಉಡುಗೆ ತೊಟ್ಟಿದ್ದಾರೆ. ಆಯ್ರಾ ಕ್ಯಾಮೆರಾ ಎದುರು ಬಂದು ಪೋಸ್ ನೀಡಿದ್ದಾಳೆ. ಅವಳ ಸ್ಮೈಲ್ ಫ್ಯಾನ್ಸ್​ಗೆ ಸಖತ್ ಇಷ್ಟವಾಗಿದೆ. ಹಿಂಭಾಗದಲ್ಲಿ ಯಥರ್ವ್​ ಕಣ್ಣು ಮುಚ್ಚಿ ನಿಂತಿದ್ದಾನೆ. ಈ ಫೋಟೋಗೆ ರಾಧಿಕಾ ಪಂಡಿತ್ ಅವರು ‘ಮಂಡೇ ಬ್ಲ್ಯೂಸ್​’ ಎನ್ನುವ ಕ್ಯಾಪ್ಶನ್ ನೀಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಆಯ್ರಾ ಕ್ಯೂಟ್​ನೆಸ್ ಬಗ್ಗೆ ಸಂತಸ ಹೊರಹಾಕಿದ್ದಾರೆ.

2016ರಲ್ಲಿ ರಾಧಿಕಾ ಪಂಡಿತ್ ಅವರು ಯಶ್ ಜತೆ ವಿವಾಹ ಆದರು. ಆ ಬಳಿಕ ಅವರು ಚಿತ್ರರಂಗದಿಂದ ಒಂದು ಬ್ರೇಕ್ ತೆಗೆದುಕೊಂಡರು. 2019ರಲ್ಲಿ ತೆರೆಗೆ ಬಂದ ‘ಆದಿ ಲಕ್ಷ್ಮೀ ಪುರಾಣ’ ಸಿನಿಮಾದಲ್ಲಿ ನಟಿಸಿದರು ರಾಧಿಕಾ. ಆ ಬಳಿಕ ಅವರು ನಟನೆಗೆ ಮರಳಿಲ್ಲ. ಅವರು ಬೇಗ ನಟನೆಗೆ ಮರಳಲಿ ಎಂಬುದು ಅಭಿಮಾನಿಗಳ ಆಶಯ. ಸದ್ಯ, ಫ್ಯಾನ್ಸ್ ಯಶ್ ಮುಂದಿನ ಚಿತ್ರ ಯಾವುದು ಎನ್ನುವ ಕುತೂಹಲದಲ್ಲಿ ಇದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *