ಮುದ್ದಿನ ‘ಸನ್ನಿ’ ಸಾವು; ಗೃಹ ಸಚಿವ ಬೊಮ್ಮಾಯಿ ಕುಟುಂಬಸ್ಥರ ಕಣ್ಣೀರು

ಮುದ್ದಿನ ‘ಸನ್ನಿ’ ಸಾವು; ಗೃಹ ಸಚಿವ ಬೊಮ್ಮಾಯಿ ಕುಟುಂಬಸ್ಥರ ಕಣ್ಣೀರು

ಬೆಂಗಳೂರು: ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಕುಟುಂಬದ ನೆಚ್ಚಿನ ನಾಯಿ ಸನ್ನಿ ವಯೋಸಹಜವಾಗಿ ನಿಧನವಾಗಿದೆ. ಗೃಹ ಸಚಿವರ ಮನೆಗೆ ಯಾರೇ ಬಂದ್ರೂ ಅವರೊಂದಿಗೆ ಬೆರೆಯುತ್ತಿದ್ದ ಸನ್ನಿ ಅಂದ್ರೆ ಎಲ್ಲರಿಗೂ ಪಂಚಪ್ರಾಣ. ಅಂಥ  ನೆಚ್ಚಿನ ನಾಯಿಯನ್ನು ಕಳೆದುಕೊಂಡ ಗೃಹ ಸಚಿವರ ಕುಟುಂಬ ತೀವ್ರ ದುಃಖ ತಪ್ತವಾಗಿದೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಅವರ ಪತ್ನಿ ಮತ್ತು ಕುಟುಂಬ ಸದಸ್ಯರು ಸಂಪ್ರದಾಯ ಬದ್ಧವಾಗಿ ಸನ್ನಿಗೆ ಅಂತಿಮ ವಿದಾಯ ಹೇಳಿದ್ದಾರೆ. ತಮ್ಮ ಕುಟುಂಬದ ಒಬ್ಬ ಸದಸ್ಯನಂತೆಯೇ ಇದ್ದ ಸನ್ನಿ ಸಾವಿನಿಂದಾಗಿ ಬಸವರಾಜ್ ಬೊಮ್ಮಾಯಿ ಮತ್ತು ಅವರ ಕುಟುಂಬಸ್ಥರು ತೀವ್ರ ದುಃಖತಪ್ತರಾಗಿ ಕಣ್ಣಿರು ಹಾಕಿದ್ದಾರೆ.

ಇನ್ನು ತಮ್ಮ ನೆಚ್ಚಿನ ನಾಯಿ ಬಗ್ಗೆ ಟ್ವೀಟ್ ಮಾಡಿರುವ ಗೃಹ ಸಚಿವರು, ಇಂದು ನಮ್ಮ ಮನೆಯ ಮುದ್ದಿನ ನಾಯಿ “ಸನ್ನಿ” ವಯೋಸಹಜ ದಿಂದ ಸಾವನ್ನಪ್ಪಿದ್ದು ತೀವ್ರ ದುಃಖ ತಂದಿದ್ದು ಕುಟುಂಬದ ಓರ್ವ ಸದಸ್ಯನನ್ನು ಕಳೆದುಕೊಂಡಂತಾಗಿದೆ. ಮನೆಯ ಹಾಗೂ ಮನೆಗೆ ಬರುವ ಎಲ್ಲರೊಂದಿಗೆ ಅತ್ಯಂತ ಪ್ರೀತಿಯಿಂದ ಬೆರೆಯುತ್ತಿತ್ತು. ಓಂ ಶಾಂತಿಃ. ಅಂತ ಬರೆದಿದ್ದಾರೆ.

 

 

The post ಮುದ್ದಿನ ‘ಸನ್ನಿ’ ಸಾವು; ಗೃಹ ಸಚಿವ ಬೊಮ್ಮಾಯಿ ಕುಟುಂಬಸ್ಥರ ಕಣ್ಣೀರು appeared first on News First Kannada.

Source: newsfirstlive.com

Source link