ಡಿಂಪಲ್ ಕ್ವೀನ್ ರಚಿತಾ ರಾಮ್ ಅಜಯ್ ರಾವ್ ಅಭಿನಯದ ಲವ್ ಯೂ ರಚ್ಚು ಚಿತ್ರದ ಮುದ್ದು ನೀನು ಎಂಬ ರೊಮ್ಯಾಂಟಿಕ್ ಸಾಗ್ ರಿಲೀಸ್ ಆಗಿದೆ. ಹಾಡಿನಲ್ಲಿ ರಚಿತ ರಾಮ್ ಸಖತ್ ಕ್ಯೂಟ್ ಅಂಡ್ ರೋಮ್ಯಾಂಟಿಕ್ ಆಗಿ ಕಾಣಿಸಿದ್ದಾರೆ.
ಐ ಲವ್ ಯೂ ಚಿತ್ರದ ನಂತ್ರ ಮತ್ತೆ ರಚ್ಚು ಲವ್ ಯೂ ರಚ್ಚು ಚಿತ್ರದಲ್ಲಿ ಸಖತ್ ಬೋಲ್ಡ್ ಅಂಡ್ ಬ್ಯೂಟಿ ಪುಲ್ ಆಗಿ ಕಾಣಿಸಿದ್ದು, ಮತ್ತೊಮ್ಮೆ ಬೆಡ್ ರೂಮ್ ಸೀನ್ ನಲ್ಲಿ ಕಾಣಿಸಿ ಪಡ್ಡೆಗಳ ಹಾರ್ಟ್ ಬೀಟ್ ಹೆಚ್ಚಿಸಿದ್ದಾರೆ ರಚ್ಚು..
ಮಣಿಕಾಂತ್ ಕದ್ರಿ ಸಂಗೀತಕ್ಕೆ ನಾಗಾರ್ಜುನ್ ಶರ್ಮಾ ಸಾಹಿತ್ಯದ ಈ ಹಾಡಿಗೆ ಸಿದ್ ಶ್ರೀರಾಮ್ ಹಾಡಿದ್ದು ಹಾಡಿನ ಪವರ್ ಮತ್ತಷ್ಟು ಹೆಚ್ಚಿದೆ..
ಯಾಕಂದ್ರೆ ಸಿದ್ ಶ್ರೀ ರಾಮ್ ಈ ಹಿಂದೆ ಹಾಡಿರುವ ಕನ್ನಡದ ಹಾಡುಗಳು ದೊಡ್ಡ ಮಟ್ಟದಲ್ಲಿ ಗೆದ್ದಿದ್ದು, ಈಗ ಈ ಹಾಡು ಗೆಲ್ಲುವ ಸೂಚನೆ ಸಿಕ್ಕಿದೆ.. ಲವ್ ಯೂ ರಚ್ಚು ಪಕ್ಕಾ ಲವ್ ಸ್ಟೋರಿ ಸಿನಿಮಾವಾಗಿದ್ದು ಚಿತ್ರಕ್ಕೆ ಶಂಕರ್ ರಾಜ್ ಎಸ್ ಆಕ್ಷನ್ ಕಟ್ ಹೇಳಿದ್ದಾರೆ..
ಗುರುದೇಶ್ ಪಾಂಡೆ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಡಿಸೆಂಬರ್ ನಲ್ಲಿ ರಿಲೀಸ್ ಮಾಡಲು ನಿರ್ಮಾಪಕ ಗುರುದೇಶ್ ಪಾಂಡೆ ತಯಾರಿ ಮಾಡ್ಕೋಳ್ತಿದ್ದಾರೆ.
The post ‘ಮುದ್ದು ನೀನು, ಎದೆಯ ಸದ್ದು ನೀನು’ ರಚ್ಚು ಸಿಕ್ಕಾಪಟ್ಟೆ ಹಾಟ್..ಫ್ಯಾನ್ಸ್ ಹಾರ್ಟ್ ಟೈಟ್ appeared first on News First Kannada.