ಚಿತ್ರದುರ್ಗ:  ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯಿಂದ ಸಾಕಷ್ಟು ಮಂದಿ ಸೋಂಕಿಗೀಡಾಗ್ತಿದ್ದಾರೆ. ಹೀಗಾಗಿ ಮಹಾಮಾರಿ ವಿರುದ್ಧ ಹೋರಾಟಕ್ಕೆ ಈಗ ಮಠಮಾನ್ಯಗಳು ಕೂಡ ಕೈಜೋಡಿಸುತ್ತಿವೆ. ಮುರುಘಾ ಮಠದಿಂದ ಕೊರೊನಾ ಸೋಂಕಿತರಿಗೆ ಉಚಿತ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ.

ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಮುರುಘಾಮಠದ SJM ಇಂಗ್ಲಿಷ್ ಶಾಲೆಯಲ್ಲಿ, 50 ಬೆಡ್ ವ್ಯವಸ್ಥೆಯುಳ್ಳ ಕೋವಿಡ್ ಕೇರ್ ಸೆಂಟರ್ ತಲೆ ಎತ್ತಿದೆ. ಕೊರೊನಾ ಸೋಂಕಿತರು ಗುಣಮುಖರಾಗುವವರೆಗೂ ಇಲ್ಲಿ ಉಚಿತ ಊಟ-ತಿಂಡಿ ವ್ಯವಸ್ಥೆ ಇರಲಿದೆ.  ಜೊತೆಗೆ ಸೋಂಕಿತರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲು ತೀರ್ಮಾನ ಮಾಡಲಾಗಿದೆ.

ಜಿಲ್ಲಾಡಳಿತ ಮತ್ತಷ್ಟು ಸಿಬ್ಬಂದಿಯನ್ನು ನೀಡಿದರೆ ಇನ್ನಷ್ಟು ಬೆಡ್ ಹೆಚ್ಚಿಸಲು ನಿರ್ಧರಿಸಲಾಗಿದೆ.

The post ಮುರುಘಾಮಠದ ಶಾಲೆಯಲ್ಲಿ ತಲೆ ಎತ್ತಿದ ಉಚಿತ ಕೋವಿಡ್​ ಕೇರ್​ ಸೆಂಟರ್ appeared first on News First Kannada.

Source: newsfirstlive.com

Source link