ಮುರುಘಾಶ್ರೀ ಪುರುಷತ್ವ ಪರೀಕ್ಷೆಯಲ್ಲಿ ಪಾಸ್: ಲೈಂಗಿಕವಾಗಿ ಸಮರ್ಥರಾಗಿದ್ದಾರೆ- ಜಿಲ್ಲಾಸ್ಪತ್ರೆ ಮೂಲಗಳು – Chitradurga Muruga shri Pocso case: Murgha shri manhood test pass


ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಡಾ. ಶಿವಾಚಾರ್ಯ ಶಿವಮೂರ್ತಿ ಮುರುಘಾ ಶ್ರೀಗಳಿಗೆ ಪರೀಕ್ಷೆ ಮಾಡಲಾಗಿತ್ತು.

ಮುರುಘಾಶ್ರೀ ಪುರುಷತ್ವ ಪರೀಕ್ಷೆಯಲ್ಲಿ ಪಾಸ್: ಲೈಂಗಿಕವಾಗಿ ಸಮರ್ಥರಾಗಿದ್ದಾರೆ- ಜಿಲ್ಲಾಸ್ಪತ್ರೆ ಮೂಲಗಳು

ಮುರುಘಾ ಶರಣರು

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಡಾ. ಶಿವಾಚಾರ್ಯ ಶಿವಮೂರ್ತಿ ಮುರುಘಾ ಶ್ರೀಗಳಿಗೆ ನಿನ್ನೆ (ನ. 4) ಸಂಜೆ 5 ಗಂಟೆಯಿಂದ 2 ಗಂಟೆಗಳಕಾಲ ಪುರುಷತ್ವ ಪರೀಕ್ಷೆ ಮಾಡಲಾಗಿತ್ತು. ಈಗ ಪರೀಕ್ಷೆಯ ವರದಿ ಬಂದಿದ್ದು ಮುರುಘಾಶ್ರೀ ಲೈಗಿಂಕವಾಗಿ ಸಮರ್ಥರಾಗಿದ್ದಾರೆಂದು ಜಿಲ್ಲಾಸ್ಪತ್ರೆಯ ಮೂಲಗಳಿಂದ ಟಿವಿ9ಗೆ ಸಿಕ್ಕಿದೆ. ಹಾಗೇ ಇಂದು (ನ. 5) ಬೆಳಿಗ್ಗೆ 10:30 ರಿಂದ ಸುಮಾರು 2 ತಾಸು ಕಾಲ ಮುರುಘಾಮಠದಲ್ಲಿ ಪೊಲೀಸರು ಸ್ಥಳ ಮಹಜರು ಮಾಡಿದರು. ಈ ಸಮಯದಲ್ಲಿ ಮುರುಘಾಶ್ರೀ ಕಚೇರಿ, ಬೆಡ್ ರೂಮ್, ಬಾತ್ ರೂಮ್​ಗೆ ತೆರಳಿ ಸ್ಥಳ ಮಹಜರು ನಡೆಸಲಾಯಿತು. ಸ್ಥಳ ಮಹಜರು ವೇಳೆ ಮುರುಘಾಶ್ರೀ ಬಟ್ಟೆ ಸೇರಿ ಇತರೆ ವಸ್ತುಗಳನ್ನು ವಶಕ್ಕೆ ಪಡೆದ ಪೊಲೀಸರು 2 ಬ್ಯಾಗ್​ಗಳಲ್ಲಿ ತೆಗೆದುಕೊಂಡು ಹೋದರು.

ಮುರುಘಾಶ್ರೀಗಳನ್ನು ಮೂರು ದಿನಗಳಲ್ಲಿ ಸುಮಾರು 12ಕ್ಕೂ ಹೆಚ್ಚು ತಾಸುಗಳ ಕಾಲ ವಿಚಾರಣೆ ನಡೆಸಲಾಗಿದೆ. ಈ ವೇಳೆ ಎಸ್ಪಿ ಕೆ. ಪರಶುರಾಮ್, ಸಿಪಿಐ ಬಾಲಚಂದ್ರ ನಾಯ್ಕ್ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

 1. ಮಠದ ಅಡುಗೆ ಸಹಾಯಕಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ದೂರು ಹಿನ್ನೆಲೆ. ಮಠದ ಕೆಲ ನೌಕರರ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದೀರಂತೆ ?
  ಮುರುಘಾಶ್ರೀ: ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಸಾಹೇಬರೇ ಎಂದು ಉತ್ತರಿಸಿದ್ದಾರೆ.
 2. ಲೇಡಿ ವಾರ್ಡನ್ ಮೂಲಕ ಮಕ್ಕಳನ್ನು ಸರದಿಯಂತೆ ಬೆಡ್ ರೂಮ್​ಗೆ ಕರೆಸುತ್ತಿದ್ದಿರಂತೆ ?
  ಮುರುಘಾಶ್ರೀ: ಯಾವುದೇ ಮಕ್ಕಳ ಮೇಲೆ ದೌರ್ಜನ್ಯ ಮಾಡಿಲ್ಲ ಸಾಹೇಬರೆ ಎಂದು ಉತ್ತರಿಸಿದ್ದಾರೆ.
 3. ಮಠದ ಬಳಿ ಪತ್ತೆಯಾದ ಮಕ್ಕಳಿಗೆ ನೀವೆ ಜನ್ಮದಾತರಂತೆ?
  ಮುರುಘಾಶ್ರೀ: ಸಾಹೇಬರೆ ನನ್ನ ವಿರುದ್ದ ಇಲ್ಲ ಸಲ್ಲದ ಆರೋಪ ಹೊರಸಲಾಗುತ್ತಿದೆ ಎಲ್ಲಾ ಸುಳ್ಳು ಎಂದು ತಿರಸ್ಕರಿಸಿದರು.‘
 4. ವಿನಾಕಾರಣ ಇಂಥ ಗಂಭೀರ ಆರೋಪ ಬರಲು ಸಾಧ್ಯವೇ?
  ಮುರುಘಾಶ್ರೀ: ಮಠದ ಆಸ್ತಿ, ಅಧಿಕಾರಕ್ಕಾಗಿ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಏಕ ಸದಸ್ಯ ಟ್ರಸ್ಟಿ ಆಗಿರುವ ಕಾರಣ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. “ನನ್ನ ಕಥೆ ಮುಗಿಯಲಿ” ಎಂಬುದು ನನ್ನ ವಿರೋಧಿಗಳ ಉದ್ದೇಶವಾಗಿದ್ದು ಸುಳ್ಳು ದೂರು ದಾಖಲಿಸಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
 5. ಸೇಬು, ಚಾಕೋಲೇಟ್ ನೀಡಿ ಮಕ್ಕಳನ್ನು ಕರೆಸಿಕೊಳ್ಳುವ ಆರೋಪ ?
  ಮುರುಘಾಶ್ರೀ: ಭೇಟಿಗೆ ಬಂದ ಭಕ್ತರಿಗೆ ನಮ್ಮ ಬಳಿಯಿದ್ದ ಹಣ್ಣು, ಕಲ್ಲು ಸಕ್ಕರೆ ನೀಡುವ ಪದ್ಧತಿಯಿದೆ ಆದರೆ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಸುಳ್ಳು.
 6.  ಸೇಬು, ಚಾಕೋಲೇಟ್ ತಿಂದ ಬಳಿಕ ಮಕ್ಕಳಿಗೆ ಮತ್ತು ಬರುತ್ತಿತ್ತು ನಿಜವೇ?
  ಮುರುಘಾಶ್ರೀ: ಇವೆಲ್ಲಾ ಸುಳ್ಳು ಆರೋಪ ಸಾಹೇಬರೇ ನನ್ನ ವಿರುದ್ಧದ ಷಡ್ಯಂತ್ರ ನಡೆದಿದೆ. ಕೂಲಂಕುಷ ತನಿಖೆ ಮಾಡಿ ಷಡ್ಯಂತ್ರವು ಬಯಲಾಗುತ್ತದೆ ಸಾಹೇಬ್ರೆ ಎಂದಿದ್ದಾರೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಮಠದಲ್ಲಿ ಸ್ಥಳ ಮಹಜರು ಬಳಿಕ ಪೊಲೀಸರು ಮತ್ತೆ ಮೆಡಿಕಲ್‌ ಚಕ್​ಅಪ್ ಮಾಡಿಸಿ ಡಿವೈಎಸ್ಪಿ ಕಚೇರಿಗೆ ಕರೆದುಕೊಂಡು ಹೋದರು. ಕೆಲ ಹೊತ್ತು ವಿಶ್ರಾಂತಿ ಬಳಿಕ ಮಧ್ಯಾಹ್ನದ ಊಟಕ್ಕೆ ಚಪಾತಿ ನೀಡಲಾಗಿದೆ. ಬಳಿಕ ಮದ್ಯಾನ 3:30ಕ್ಕೆ ಪೊಲೀಸರು ಮುರುಘಾಶ್ರೀಗಳನ್ನು ಕೋರ್ಟ್​ಗೆ ಕರೆತಂದರು. 4ಗಂಟೆಗೆ ಜಡ್ಜ್ ಎದುರು ಹಾಜರು ಪಡಿಸಿದಾಗ 1ನೇ ಫೋಕ್ಸೋ ಕೇಸಲ್ಲಿ ನವೆಂಬರ್ 3ರಂದು ನೀಡಿದ್ದ ಆದೇಶವನ್ನೇ ಪಾಲಿಸುವಂತೆ ಸೂಚನೆ ನೀಡಿದರು. ನವೆಂಬರ್ 8 ರವರೆಗೆ ನ್ಯಾಯಾಂಗ ಬಂಧನ ಆದೇಶ ಹಿನ್ನೆಲೆ ಜಿಲ್ಲಾ ಕಾರಾಗೃಹಕ್ಕೆ ಮುರುಘಾಶ್ರೀಗಳನ್ನು ಪೊಲೀಸರು ಕರೆತಂದರು.

ಒಟ್ಟಾರೆಯಾಗಿ ಚಿತ್ರದುರ್ಗದ ಮುರುಘಾಮಠದ ಮುರುಘಾಶ್ರೀ ವಿರುದ್ಧ ಗಂಭೀರ ಪ್ರಕರಣಗಳು ದಾಖಲಾಗಿವೆ. ಹೀಗಾಗಿ, ಪೊಲೀಸರು ಬಂಧನದಲ್ಲಿರುವ ಮುರುಘಾಶ್ರೀ ಬಾಡಿ ವಾರೆಂಟ್ ಪಡೆದು ಮೂರು ದಿನ ವಿಚಾರಣೆ ನಡೆಸಿದ್ದಾರೆ. ಇನ್ನುಳಿದ ಆರೋಪಿಗಳನ್ನು ಪೊಲೀಸ್​ರ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ. ಮುರುಘಾಶ್ರೀಗೆ ಸದ್ಯಕ್ಕೆ ಜೈಲೇ ಗತಿ ಆಗಿದ್ದು ಇನ್ನೇನು ಕಾದಿದೆಯೋ ಕಾದು ನೋಡಬೇಕಿದೆ‌.

ವರದಿ-ಬಸವರಾಜ ಮುದನೂರ್ tv9 ಚಿತ್ರದುರ್ಗ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.