ಮುರುಘಾ ಶರಣರಿಗೆ ಇಂದು ಜೈಲಾ? ಬೇಲಾ? ಕೋರ್ಟ್​ನಲ್ಲಿಂದು ಶಿವಮೂರ್ತಿ ಶರಣರ ಜಾಮೀನು ಅರ್ಜಿ ವಿಚಾರಣೆ | Bail application hearing of Shivamurthy Sharan in court today


ಕೋರ್ಟ್​ನಲ್ಲಿಂದು ಶ್ರೀಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಮುರುಘಾ ಶರಣರಿಗೆ ಇಂದು ಜೈಲಾ? ಬೇಲಾ? ನಿರ್ಧಾರವಾಗಲಿದೆ.

ಮುರುಘಾ ಶರಣರಿಗೆ ಇಂದು ಜೈಲಾ? ಬೇಲಾ? ಕೋರ್ಟ್​ನಲ್ಲಿಂದು ಶಿವಮೂರ್ತಿ ಶರಣರ ಜಾಮೀನು ಅರ್ಜಿ ವಿಚಾರಣೆ

ಶಿವಮೂರ್ತಿ ಶರಣ

ಚಿತ್ರದುರ್ಗ: ಪೋಕ್ಸೋ ಕೇಸ್​ನಲ್ಲಿ ಮುರುಘಾಶ್ರೀಗಳ ಬಂಧನ ಪ್ರಕರಣ ಸಂಬಂಧ ಮುರುಘಾಶ್ರೀಗಳ ಪೊಲೀಸ್ ಕಸ್ಟಡಿ ಇಂದಿಗೆ ಮುಕ್ತಾಯವಾಗಲಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಚಿತ್ರದುರ್ಗ ನ್ಯಾಯಾಲಯಕ್ಕೆ ಮುರುಘಾಶ್ರೀಯನ್ನು ಪೊಲೀಸರು ಹಾಜರುಪಡಿಸಲಿದ್ದಾರೆ. ಕೋರ್ಟ್​ನಲ್ಲಿಂದು ಶ್ರೀಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಮುರುಘಾ ಶರಣರಿಗೆ ಇಂದು ಜೈಲಾ? ಬೇಲಾ? ನಿರ್ಧಾರವಾಗಲಿದೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಮುರುಘಾಶ್ರೀ ಮೂರು ರಾತ್ರಿ ಡಿವೈಎಸ್ಪಿ ಕಚೇರಿಯಲ್ಲಿ ಕಳೆದಿದ್ದಾರೆ. ತನಿಖಾಧಿಕಾರಿ ಡಿವೈಎಸ್ಪಿ ಅನಿಲ್ ಕುಮಾರ್ ನೇತೃತ್ವದಲ್ಲಿ ವಿಚಾರಣೆ ಮಾಡಿದರು. ಚಿತ್ರದುರ್ಗ ಜಿಲ್ಲಾ 2ನೇ ಅಪರ ಮತ್ತು ಸತ್ರ ನ್ಯಾಯಾಲಯದಲ್ಲಿ ಇಂದು ಪ್ರಕರಣ 3ನೇ ಆರೋಪಿ ಮುರುಘಾಮಠದ ಉತ್ತರಾಧಿಕಾರಿ(ಬಾಲಪರಾಧಿ) ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ.

ಪೊಲೀಸರು ನಿನ್ನೆ ಮಠಕ್ಕೆ ಸ್ವಾಮೀಜಿಯನ್ನ ಕರೆದೊಯ್ದು ಸ್ಥಳ ಮಹಜರು ಮಾಡಿದರು. ಇಂದು ಶ್ರೀಗಳ ನಾಲ್ಕನೇ ದಿನದ ಕಸ್ಟಡಿ ಅಂತ್ಯ ಹಿನ್ನೆಲೆ 11 ಗಂಟೆಗೆ ಶ್ರೀಗಳ ಕಸ್ಟಡಿ ಮುಗಿಯಲಿದ್ದು, ಅಷ್ಟರಲ್ಲಿ  ಶ್ರೀಗಳನ್ನ ಮತ್ತೊಂದು ರೌಂಡ್ ವಿಚಾರಣೆ ಸಾಧ್ಯತೆ ಇದೆ. ಈಗಾಗಲೇ ಇಷ್ಟು ದಿನದ ತನಿಖಾ‌ ವರದಿಯನ್ನ ನ್ಯಾಯಾಲಯಕ್ಕೆ ಸಲ್ಲಿಸಲಿರುವ ಪೊಲೀಸರು, ಪ್ರಾಥಮಿಕ ತನಿಖಾ ವರದಿ ಸಮೇತ ಶ್ರೀಗಳನ್ನ ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ. ಶ್ರೀಗಳಿಗೆ ನ್ಯಾಯಾಂಗ ಬಂಧನವಾದ್ರೆ ಜಾಮೀನು ಅರ್ಜಿ‌ ವಿಚಾರಣೆ ನಡೆಯಲಿದ್ದು, ಜಾಮೀನು ಅರ್ಜಿ‌ ವಿಚಾರಣೆ ವೇಳೆ ಪಿ.ಪಿ ಆಕ್ಷೇಪಣೆ ಸಾಧ್ಯತೆಯಿದೆ. ಇಂದು ಕೋರ್ಟ್​ನಲ್ಲಿ  ಸ್ವಾಮೀಜಿಗಳ ಭವಿಷ್ಯ ನಿರ್ಧಾರವಾಗಲಿದೆ.

ಇಂದು ಮಹಾಂತ ರುದ್ರಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ವಿವಾಹ:

ಮುರುಘಾಶ್ರೀ ಪೋಕ್ಸೋ ಕೇಸ್​ನಲ್ಲಿ ಪೊಲೀಸರ ವಶದಲ್ಲಿರುವ ಹಿನ್ನೆಲೆ ಈ ಬಾರಿ ಹೆಬ್ಬಾಳ ಶ್ರೀಗಳ ನೇತೃತ್ವದಲ್ಲೇ ಕಲ್ಯಾಣ ಮಹೋತ್ಸವ ನಡೆಯಲಿದೆ. ಪ್ರತಿ ತಿಂಗಳು 5ರಂದು ನಡೆಯುವ ಉಚಿತ ಸಾಮೂಹಿಕ ವಿವಾಹವನ್ನು ಇಂದು ಮಹಾಂತ ರುದ್ರಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ. ಮುರುಘಾ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಸಾಮೂಹಿಕ ವಿವಾಹ, ಈ ಬಾರಿ 7 ಜೋಡಿಗಳಿಗೆ ಕಲ್ಯಾಣ ಮಹೋತ್ಸವ ನಡೆಯಲಿದೆ. ಒಟ್ಟು 10 ಜೋಡಿ ಸಾಮೂಹಿಕ ವಿವಾಹಕ್ಕೆ ಬುಕ್ಕಿಂಗ್ ಮಾಡಿದ್ದರು. ಶ್ರೀಗಳು ಇಲ್ಲದ ಕಾರಣ 3 ಜೋಡಿಗಳು ಬುಕ್ಕಿಂಗ್ ವಾಪಸ್ ಪಡೆದಿದ್ದಾರೆ. ಮಠದ ಹಿಂಭಾಗದಲ್ಲಿರುವ ಅನುಭವ ಮಂಟಪದಲ್ಲಿ ಉಚಿತ ವಿವಾಹ ನಡೆಯಲಿದ್ದು, 32 ವರ್ಷದಿಂದ ಮಠದಲ್ಲಿ ಕಲ್ಯಾಣ ಮಹೋತ್ಸವ ನಡೆದುಕೊಂಡು ಬರುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

TV9 Kannada


Leave a Reply

Your email address will not be published.