ಮುರುಘಾ ಶ್ರೀಗಳ ಮತ್ತಷ್ಟು ಕಾಮಕೂಟ ಬಿಚ್ಚಿಟ್ಟ ಆಪ್ತರು: ಅಡುಗೆಭಟ್ಟ, ಸಹಾಯಕ, ಆಫೀಸ್ ಬಾಯ್ ಹೇಳಿಕೆ ಇಲ್ಲಿದೆ – Chitradurga murugha sharana Close aide reveals His Swamiji harassment to Students


ಮುರುಘಾಶ್ರೀ ವಿರುದ್ಧ ತನಿಖಾಧಿಕಾರಿ ಡಿವೈಎಸ್ಪಿ ಅನಿಲ್ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಚಾರ್ಜ್ ಶೀಟ್ ನಲ್ಲಿ ಮುರುಘಾಶ್ರೀ ಆಪ್ತರಿಂದ ಮಹತ್ವದ ಹೇಳಿಕೆ ದಾಖಲು ಮಾಡಿದ್ದಾರೆ. ಖಾಕಿ ಮುಂದೆ ಆಪ್ತರು ಮುರುಘಾ ಸ್ವಾಮಿ ಕಾಮದಾಟವನ್ನು ಬಿಚ್ಚಿಟ್ಟಿದ್ದಾರೆ.ಅಡುಗೆಭಟ್ಟ, ಸಹಾಯಕ, ಆಫೀಸ್ ಬಾಯ್ ಹೇಳಿಕೆ ಇಲ್ಲಿದೆ.

ಮುರುಘಾ ಶ್ರೀಗಳ ಮತ್ತಷ್ಟು ಕಾಮಕೂಟ ಬಿಚ್ಚಿಟ್ಟ ಆಪ್ತರು: ಅಡುಗೆಭಟ್ಟ, ಸಹಾಯಕ, ಆಫೀಸ್ ಬಾಯ್ ಹೇಳಿಕೆ ಇಲ್ಲಿದೆ

ಮುರಘಾ ಮಠ ಸ್ವಾಮಿಜಿ

ಚಿತ್ರದುರ್ಗ: ಮಧ್ಯ ಕರ್ನಾಟಕದ ದೇವತಾ ಮನುಷ್ಯ. ಬಡವರ ಪಾಲಿಗೆ ಕರುಣಾಮಯಿ ಎಂದು ಕರೆಯಿಸಿಕೊಳ್ಳುತ್ತಿದ್ದ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ (shivamurthy murugha sharana) ಕಾಮಾಯಣ ಇದೀಗ ಒಂದೊಂದಾಗಿ ಬಯಲಾಗಿದೆ. ತಾನು ಸಂತ ಅಂತ ಹೇಳಿಕೊಂಡು ಸಮಾಜ ಸೇವೆಯ ಮುಖವಾಡ ಧರಿಸಿದ್ದ ಕೀಚಕ ಕಾವಿಯ ಗುಟ್ಟು ರಟ್ಟಾಗೇ ಬಿಟ್ಟಿದೆ. ಸಂತ್ರಸ್ತ ಬಾಲಕಿಯರು ಕಾಮಿಸ್ವಾಮಿ ಅಸಲಿ ಮುಖವನ್ನು ಪೊಲೀಸರೆದುರು ಬಿಚ್ಚಿಟ್ಟಿದ್ದಾರೆ. ಈಗ ಪೊಲೀಸರು ಚಾರ್ಜ್ ಶೀಟ್ ನಲ್ಲಿ ಮುರುಘಾಶ್ರೀ(Muruga Mutt Shree) ಆಪ್ತರಿಂದ ಮಹತ್ವದ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ. ಆಪ್ತರು ಖಾಕಿ ಮುಂದೆ ಮುರುಘಾ ಸ್ವಾಮಿಯ ಬಗ್ಗೆ ಏನೆಲ್ಲಾ ಹೇಳಿದ್ದಾರೆ ಎನ್ನುವ ಪಿನ್ ಟು ಪಿನ್​ ಮಾಹಿತಿ ಈ ಕೆಳಗಿನಂತಿದೆ ನೋಡಿ.

Tv9 Exclusive: ಅತ್ಯಾಚಾರದ ನಂತರ ಮದ್ಯ ಸೇವಿಸಿ ಗಹಗಹಿಸಿ ನಗುತ್ತಿದ್ದ ಶಿವಮೂರ್ತಿ ಮುರುಘಾ ಶರಣ: ಚಾರ್ಜ್​ಶೀಟ್​ನಲ್ಲಿ ಉಲ್ಲೇಖ

ಪೊಲೀಸರು ಮುರುಘಾಶ್ರೀ ಸಹಾಯಕ ಮಹಾಲಿಂಗ ಹೇಳಿಕೆ

ಕೆಲ ಸಲ ಬೆಡ್ ಶೀಟ್ ಮೇಲೆ ಕಲೆಗಳು ಆಗಿರುತ್ತಿದ್ದವು. ಸ್ವಚ್ಛವಾಗಿ ತೊಳೆಯುವಂತೆ ಮುರುಘಾಶ್ರೀ ಹೇಳುತ್ತಿದ್ದರು. ಹಗಲಿನಲ್ಲಿ ಆಗಾಗ್ಗೆ ರಶ್ಮಿ ಮಕ್ಕಳೊಂದಿಗೆ ಬರುತ್ತಿದ್ದಳು. ಕೆಲ ಸಲ ರಾತ್ರಿ ವೇಳೆ ಬಾಲಕಿಯರು ಹಿಂಬಾಗಿಲಿನಿಂದ ಮುರುಘಾಶ್ರೀ ರೂಮಿಗೆ ಹೋಗುತ್ತಿದ್ದರು. ಹೀಗೆ ಮಠದಲ್ಲಿ ಜನರು ಮಾತನಾಡಿಕೊಳ್ಳುತ್ತಿದ್ದರು ಎಂದು ಮುರುಘಾಶ್ರೀ ಸಹಾಯಕ ಮಹಾಲಿಂಗ ಪೊಲೀಸರೆದುರು ತಮ್ಮ ಹೇಳಿಕೆಯಲ್ಲಿ ಮುರುಘಾ ಕಾಮಕೂಪವನ್ನು ಬಿಚ್ಚಿಟ್ಟಿದ್ದಾರೆ.

ಅಡುಗೆಭಟ್ಟ ಕರಿಬಸ್ಸಪ್ಪ ಹೇಳಿಕೆ ದಾಖಲು

ರಶ್ಮಿ ಮತ್ತು ಮಕ್ಕಳು ಮುರುಘಾಶ್ರೀ ರೂಮಿಗೆ ಹೋದಾಗ ನನಗೆ ಬಿಟ್ಟುಕೊಳ್ಳುತ್ತಿರಲಿಲ್ಲ. ಸುಮಾರು ಗಂಟೆಗಳ ಬಳಿಕ ರಶ್ಮಿ ಮತ್ತು ಮಕ್ಕಳು ಹೊರಬರುತ್ತಿದ್ದರು. ಹಾಸ್ಟೆಲ್ ಬಾಲಕಿಯರನ್ನು ರೂಮಿಗೆ ಕರೆಸಿಕೊಳ್ಳುತ್ತಾರೆಂದು ಮಠಕ್ಕೆ ಬರುವ ಜನ ಮಾತಾಡುತ್ತಿದ್ದರು, ನಮಗೂ ಸಹ ಕೆಲವೊಮ್ಮೆ ಅನುಮಾನ ಬರುತ್ತಿತ್ತು. ನಾವು ಬಾಯಿಬಿಟ್ಟರೆ ಕೆಲಸ ಬಿಡಿಸುತ್ತಾರೆಂಬ ಭಯವಿತ್ತು. ಹಾಸ್ಟೆಲ್ ನ ಇಬ್ಬರು ಬಾಲಕಿಯರ ಮೇಲೆ ದೌರ್ಜನ್ಯ ಮಾಡಿದ್ದಾರೆಂದು ಮಠದಲ್ಲಿ ಮಾತಾಡುತ್ತಿದ್ದರು. ಬಟ್ಟೆಯಲ್ಲಿ ಕಲೆ ಉಳಿಯದಂತೆ ಸ್ವಚ್ಛ ತೊಳೆಯಿರಿ ಎಂದು ಮುರುಘಾಶ್ರೀ ಹೇಳುತ್ತಿದ್ದರು ಎಂದು ಅಡುಗೆಭಟ್ಟ ಕರಿಬಸ್ಸಪ್ಪ ಹೇಳಿಕೆ ನೀಡಿದ್ದಾರೆ.

Tv9 Exclusive | ಮಕ್ಕಳಿಗೆ ಮತ್ತಿನ ಔಷಧಿ, ಶಾಪ ಕೊಡುವುದಾಗಿ ಬೆದರಿಸಿ ಅತ್ಯಾಚಾರ; ಶಿವಮೂರ್ತಿ ಮುರುಘಾ ಶರಣನ ಹಿಡಿತದಲ್ಲಿ ನರಳಿದ್ದ ಮಕ್ಕಳು

ಮುರುಘಾಶ್ರೀ ಆಫೀಸ್ ಬಾಯ್ ಪ್ರಜ್ವಲ್ ಹೇಳಿಕೆ

ಮುರುಘಾಶ್ರೀ ಕೆಲ ಬಾಲಕಿಯರನ್ನು ರೂಮಿಗೆ ಕರೆಸಿಕೊಳ್ಳುತ್ತಿದ್ದರು. ಬೆಡ್ ರೂಮ್ ನಲ್ಲಿ ಕೆಲಸವಿದೆ ಎಂದು ಕರೆಸಿಕೊಳ್ಳುತ್ತಿದ್ದರು. ಸಂತ್ರಸ್ತ ಬಾಲಕಿಯರಿಬ್ಬರನ್ನು ಬೆಡ್ ರೂಮಿಗೆ ಕರೆಸಿದ್ದು ನನಗೆ ಗೊತ್ತಿದೆ. ಆದರೆ, ರೂಮಿನಲ್ಲಿ ಏನು ನಡೆದಿದೆ ನನಗೆ ಗೊತ್ತಿಲ್ಲ ಎಂದು ಮುರುಘಾಶ್ರೀ ಆಫೀಸ್ ಬಾಯ್ ಪ್ರಜ್ವಲ್ ಪೊಲೀಸರೆದುರು ತಮ್ಮ ಹೇಳಿಕೆ ದಾಖಲಿಸಿದ್ದಾರೆ ಎನ್ನುವ ಅಂಶ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಕಾಮಕೂಟಕ್ಕೆ ಲೇಡಿ ವಾರ್ಡನ್​ ರಶ್ಮಿಯೇ ಸಾಥ್​

ಮುರುಘಾ ಶ್ರೀಗಳ ಕಾವಿ ಕಾಮ ಕೂಪದಲ್ಲಿ ಸರಿ ಸುಮಾರು 10ಕ್ಕೂ ಬಾಲಕಿಯರು ನರಳಾಡಿದ್ದಾರಂತೆ. ನಾಲ್ಕೈದು ವರ್ಷಗಳಿಂದ ಮುಗ್ಧ ಬಾಲಕಿಯರ ಮೇಲೆ ಈ ಸ್ವಾಮೀಜಿ ಲೈಂಗಿಕ ದೌರ್ಜನ್ಯ ಎಸಗಿದ್ದಾನಂತೆ. ಇಷ್ಟೇ ಅಲ್ಲ ನಶೆ ಏರಿಸಿಕೊಂಡು ಬಾಲಕಿಯರ ಜತೆ ರಾಕ್ಷಸನ ರೀತಿ ವರ್ತನೆ ಮಾಡುತ್ತಿದ್ನಂತೆ. ಅಚ್ಚರಿ ವಿಷಯ ಏನಂದ್ರೆ ಒಬ್ಬ ಬಾಲಕಿಗೆ ಈ ಕಾಮಿ ಸ್ವಾಮಿ ಅಬಾರ್ಷನ್​ ಮಾಡಿಸಿದ್ದ ಬಗ್ಗೆ ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಮಾಡಲಾಗಿದೆ. ಶ್ರೀಗಳ ಈ ಕಾಮಕೂಟಕ್ಕೆ ಲೇಡಿ ವಾರ್ಡನ್​ ರಶ್ಮಿಯೇ ಸಾಥ್​ ಕೊಡ್ತಿದ್ದಳಂತೆ..

ಚಾರ್ಜ್​ಶೀಟ್​​ನಿಂದಾಗಿ ಮುರುಘಾ ಶ್ರೀಗಳ ವಿರುದ್ಧ ಭಯಾನಕ ವಿಕೃತ ಸತ್ಯಗಳು ಒಂದೊಂದಾಗಿ ಬಯಲಾಗಿವೆ. ಹೀಗಾಗಿ ಮುರುಘಾ ಶ್ರೀಗಳಿಗೆ ಸಂಕಷ್ಟದ ಸಂಕೋಲೆ ಇನ್ನಷ್ಟು ಬಿಗಿಯಾಗ್ತಿದೆ.

ಒಟ್ಟಾರೆ ಸಂತನಂತೆ ಪೋಜು ಕೊಡ್ತಿದ್ದವನ ನಿಜ ಬಣ್ಣವನ್ನ ಬಾಲಕಿಯರು ಹಾಗೂ ಅವರ ಆಪ್ತರು ಎಳೆ ಎಳೆಯಾಗಿ ಕಳಚಿದ್ದಾರೆ. ಇದೀಗ ಪೋಕ್ಸೋ, ಅಟ್ರಾಸಿಟಿ, ಧಾರ್ಮಿಕ ಸಂಸ್ಥೆಗಳ ದುರುಪಯೋಗ ಸೇರಿದಂತೆ ಸಾಲು ಸಾಲು ಕಾಯ್ದೆ ಅಡಿ ಕೇಸ್ ದಾಖಲಾಗಿದ್ದು.. ಈ ಕಾಮ ಕ್ರಿಮಿಗೆ ತಕ್ಕ ಶಿಕ್ಷೆಯಾಗೊಂದೇ ಬಾಕಿ ಇದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.