ಮುರುಘಾ ಶ್ರೀ ಪ್ರಕರಣ: ಇದೆಲ್ಲವೂ ‘ಮುರುಘೇಶನ ಲೀಲೆ’: ವಿಚಾರಣೆ ವೇಳೆ ಒಂದೇ ಉತ್ತರ ನೀಡುತ್ತಿರುವ ಬಸವರಾಜನ್ – murugha mutt seer pocso act case Basavarajan interrogation chitradurga news


​ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಬಸವರಾಜನ್ ಅವರನ್ನು ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ. ಆದ್ರೆ ವಿಚಾರಣೆ ವೇಳೆ ಬಸವರಾಜನ್ ಪೊಲೀಸರ ಪ್ರಶ್ನೆಗೆ ಒಂದೇ ಉತ್ತರ ನೀಡುತ್ತಿದ್ದಾನೆ.

ಮುರುಘಾ ಶ್ರೀ ಪ್ರಕರಣ: ಇದೆಲ್ಲವೂ 'ಮುರುಘೇಶನ ಲೀಲೆ': ವಿಚಾರಣೆ ವೇಳೆ ಒಂದೇ ಉತ್ತರ ನೀಡುತ್ತಿರುವ ಬಸವರಾಜನ್

ಪೊಲೀಸ್ ಕಸ್ಟಡಿಯಲ್ಲಿರುವ ಎಸ್​.ಕೆ.ಬಸವರಾಜನ್

ಚಿತ್ರದುರ್ಗ: ಜಿಲ್ಲೆಯ ಪ್ರಸಿದ್ಧ ಮಠವಾಗಿದ್ದ ಮುರುಘಾ ಮಠದಲ್ಲಿ ನಡೆಯಬಾರದಿದ್ದ ಅನಾಚಾರ ನಡೆದಿದೆ. ಮುರುಘಾಶ್ರೀ ವಿರುದ್ಧ ಎರಡು ಫೋಕ್ಸೋ ಪ್ರಕರಣಗಳು ದಾಖಲಾಗಿದ್ದು ಕಾವಿಧಾರಿಯ ಕಾಮರಾಕ್ಷಸತನವನ್ನ ಕಂಡು ಇಡೀ ರಾಜ್ಯ ಬೆಚ್ಚಿಬಿದ್ದಿದೆ. ಇಡೀ ಕಾವಿ ಕುಲವನ್ನೇ ಅನುಮಾನದಿಂದ ನೋಡುವಂತೆ ಮಾಡಿದೆ. ಇನ್ನು ಮುರುಘಾಶ್ರೀ ವಿರುದ್ಧ ಸುಳ್ಳು ದೂರು ದಾಖಲಿಸುವ ಪಿತೂರಿ ನಡೆದಿದೆ ಎಂಬ ದೂರಿನಲ್ಲಿ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ. ಬಸವರಾಜನ್ ಸಹ ಬಂಧಿಸಲಾಗಿದೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಎಸ್​.ಕೆ.ಬಸವರಾಜನ್​ ವಿಚಾರಣೆ ನಡೆದಿದ್ದು ವಿಚಾರಣೆ ವೇಳೆ ಬಸವರಾಜನ್ ಪೊಲೀಸರ ಪ್ರಶ್ನೆಗೆ ಒಂದೇ ಉತ್ತರ ನೀಡುತ್ತಿದ್ದಾನೆ.

​ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಬಸವರಾಜನ್ ಅವರನ್ನು ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ. ಆದ್ರೆ ವಿಚಾರಣೆ ವೇಳೆ ಬಸವರಾಜನ್ ಪೊಲೀಸರ ಪ್ರಶ್ನೆಗೆ ಒಂದೇ ಉತ್ತರ ನೀಡುತ್ತಿದ್ದಾನೆ. ಇದೆಲ್ಲವೂ ‘ಮುರುಘೇಶ ಮಾಡಿಸಿದ್ದು’ ಎನ್ನುತ್ತಿದ್ದಾನೆ. ಎಲ್ಲವೂ ‘ಮುರುಘೇಶನ ಲೀಲೆ’ ಎಂದು ಮಠದ ದೈವದ ಮೇಲೆ ಹೇಳುತ್ತಿದ್ದಾನೆ. ನಾನೇನು ಪಿತೂರಿ ಮಾಡಿಲ್ಲ ಎಂದಿದ್ದಾನೆ.

ನಾಳೆಗೆ ಎಸ್​.ಕೆ.ಬಸವರಾಜನ್ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ. ನವೆಂಬರ್​ 9ರಂದು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಮಠದ ಉಸ್ತುವಾರಿ ಬಸವಪ್ರಭುಶ್ರೀಗಳು ಎಸ್​.ಕೆ.ಬಸವರಾಜನ್​ ವಿರುದ್ಧ ದೂರು ನೀಡಿದ್ದರು.

ಸ್ವಾಮೀಜಿ ವಿರುದ್ಧ ಈಗಾಗಲೇ ಎರಡು ಪೋಕ್ಸೋ ಕೇಸ್ ದಾಖಲಾಗಿವೆ. ಈ ಎರಡು ಕೇಸ್ ಸಂಬಂಧ ಪೊಲೀಸರು ಸಂತ್ರಸ್ತರ ಬಾಲಕಿಯರ ಹೇಳಿಕೆಯನ್ನ ಪಡೆದುಕೊಂಡಿದ್ದಾರೆ. ಅಲ್ದೆ, ಎರಡು ಪೋಕ್ಸೋ ಕೇಸ್ ಪೈಕಿ ಮೊದಲನೇ ಪ್ರಕರಣ ಸಂಬಂಧ, ಮುರುಘಾ ಶ್ರೀ ಆಪ್ತ ಸಹಾಯಕ ಮಹಾಲಿಂಗಪ್ಪ, ಅಡುಗೆ ಭಟ್ಟ ಕರಿಬಸಪ್ಪ ಮತ್ತು, ಇನ್ನೊಬ್ಬ ಸಹಾಯಕ ಮಲ್ಲಿಕಾರ್ಜುನ ಹಾಗೂ ಆಫೀಸ್ ಬಾಯ್ ಪ್ರಜ್ವಲ್. ಈ ನಾಲ್ವರ ಹೇಳಿಕೆಗಳನ್ನ ಸಾಕ್ಷಿಯಾಗಿ ಪೊಲೀಸರು ಪಡೆದಿದ್ದಾರೆ. ಇದೀಗ ಇವರು ಪೊಲೀಸರ ಮುಂದೆ ಕೊಟ್ಟಿರೋ ಹೇಳಿಕೆಗಳೇ ಬೆಚ್ಚಿ ಬೀಳಿಸುತ್ತಿವೆ.

ಸಂತ್ರಸ್ತ ಬಾಲಕಿಯರು ಹೇಳಿದ್ದೇನು?

ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿರುವಂತೆ ಈ ಸ್ವಾಮಿಜಿ ಬಾಲಕಿಯರನ್ನ ಕರೆಸಿಕೊಳ್ಳಲು ಪ್ರತ್ಯೇಕ ಬಾಗಿಲನ್ನ ಬಳಸುತ್ತಿದ್ನಂತೆ. ತನ್ನ ಕಾಮದ ಚಪಲ ತೀರಿಸಿಕೊಳ್ಳಲು ದಿನಕೊಬ್ಬರಂತೆ, ವಾರಕ್ಕೊಬ್ಬರಂತೆ ಬಾಲಕಿಯರ ಹೆಸರುಗಳನ್ನ ಲಿಸ್ಟ್​ ಮಾಡಿಟ್ಟುಕೊಳ್ತಿದ್ನಂತೆ. ಈ ಲಿಸ್ಟ್​ಅನ್ನ ವಾರ್ಡನ್ ರಶ್ಮಿಗೆ ಕೊಟ್ಟು ತನಗೆ ಬೇಕೆನಿಸಿದಾಗ ಬಾಲಕಿಯರನ್ನ ಖಾಸಗಿ ರೂಮಿಗೆ ಕರೆಸಿಕೊಳ್ತಿದ್ನಂತೆ. ಹೀಗೆ 10ಕ್ಕೂ ಹೆಚ್ಚು ಬಾಲಕಿಯರಿಗೆ ನಾಲ್ಕೈದು ವರ್ಷದಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಅನ್ನೋದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿದೆ. ಇಷ್ಟೇ ಅಲ್ದೆ, ಮದ್ಯಪಾನ, ಕಾಮಪುರಾಣ, ಹೆದರಿಸಿ ಬೆದರಿಸೋ ದುಷ್ಟತನ ಈ ಸ್ವಾಮಿಗೆ ಇತ್ತು ಅನ್ನೋ ಸಂಗತಿಯೂ ಬಯಲಾಗಿತ್ತು. ಅದೇನಂದ್ರೆ ಈ ಕಾಡುಮೃಗದ ಕೊಠಡಿಗೆ ವಾರ್ಡನ್ ರಶ್ಮಿ ಬಾಲಕಿಯರನ್ನ ಬಲವಂತವಾಗಿ ತಳ್ಳುತ್ತಿದ್ಲಂತೆ. ಒಂದು ವೇಳೆ ಬಾಲಕಿಯರು ಕಾಮಕೂಪಕ್ಕೆ ಬೀಳಲು ನಿರಾಕರಿಸಿದ್ರೆ ಬೆದರಿಕೆ ಹಾಕೋದು, ಟಾರ್ಚರ್ ಕೊಡೋದು ಮಾಡುತ್ತಿದ್ಲಂತೆ.

ಇನ್ನು ಸ್ವಾಮೀಜಿ ಭಾನುವಾರ ಜನರಲ್ ರೂಮಿಗೆ ಬಂದ ಬಾಲಕಿಯರ ಪೈಕಿ ಇಬ್ಬರನ್ನ ಕಸ ಗುಡಿಸಲು ಕರೆಸಿಕೊಂಡು ಅವರ ಮೇಲೂ ದೌರ್ಜನ್ಯ ಎಸಗಿದ್ನಂತೆ. ಪಕ್ಕದಲ್ಲಿ ಕೂರಿಸಿಕೊಂಡು ಹಣ್ಣು, ಡ್ರೈಫ್ರೂಟ್ಸ್ ಕೊಡ್ತಿದ್ದ ಸ್ವಾಮೀಜಿ, ಹಣ್ಣು, ಚಾಕೊಲೇಟ್​ನಲ್ಲಿ ಮತ್ತು ಬರಿಸೋ ವಸ್ತು ಸೇರಿಸಿ ರೇಪ್ ಮಾಡಿದ್ನಂತೆ. ಅಷ್ಟೇ ಅಲ್ಲ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿಯರನ್ನೂ ತನ್ನ ಕಾಮದಾಟಕ್ಕೆ ಬಳಸಿಕೊಂಡಿದ್ನಂತೆ. ಜೊತೆ ಸ್ನಾನ ಮಾಡುತ್ತಿದ್ದಾಗ ಬೆನ್ನು ಉಜ್ಜಲು ಕರೆಸಿಕೊಳ್ತಿದ್ದ ಸ್ವಾಮೀಜಿ, ಬಾಲಕಿಯರೇನಾದ್ರೂ ಬೇಡವೆಂದು ಹೇಳಿದ್ರೆ ಚಾಕು ತೋರಿಸಿ ಬೆದರಿಸಿದ್ನಂತೆ. ಇದಕ್ಕೂ ಭಯಾನಕ ಅಂದ್ರೆ ಒಬ್ಬ ಬಾಲಕಿಗೆ ಈ ಸ್ವಾಮೀ ಅಬಾರ್ಷನ್‌ ಕೂಡಾ ಮಾಡಿಸಿದ್ದನಂತೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.