ಮುಷ್ತಾಕ್ ಅಲಿ ಫೈನಲ್; ಮಾಜಿ ಚಾಂಪಿಯನ್ ಕರ್ನಾಟಕಕ್ಕೆ ಒಲಿಯುತ್ತಾ 3ನೇ ಮುಷ್ತಾಕ್ ಅಲಿ ಕಿರೀಟ?


ದೇಶಿ ಕ್ರಿಕೆಟ್​ನ ಪ್ರತಿಷ್ಠಿತ ಟಿ20 ಟೂರ್ನಿ ಉಪಾಂತ್ಯಕ್ಕೆ ತಲುಪಿದೆ. ಇಂದಿನ ಫೈನಲ್​​ನಲ್ಲಿ ಹಾಲಿ & ಮಾಜಿ ಚಾಂಪಿಯನ್ಸ್​ ಮುಖಾಮುಖಿಯಾಗ್ತಿದ್ದು, ಸಾಂಪ್ರದಾಯಿಕ ಎದುರಾಳಿಗಳ ಕಾದಾಟ ಭಾರೀ ಕುತೂಹಲ ಮೂಡಿಸಿದೆ.

ದೇಶಿ ಕ್ರಿಕೆಟ್​ನ ಸಾಂಪ್ರದಾಯಿಕ ಎದುರಾಳಿಗಳ ಕಾದಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ದೆಹಲಿಯ ಅರುಣ್ ಜೇಟ್ಲಿ ಸೇಡಿಯಂನಲ್ಲಿ ಮನೀಶ್​ ಪಾಂಡೆ ನೇತೃತ್ವದ ಕರ್ನಾಟಕಕ್ಕೆ, ವಿಜಯ್ ಶಂಕರ್ ನೇತೃತ್ವದ ತಮಿಳುನಾಡು ಸವಾಲು ಎದುರಾಗ್ತಿದೆ. ಈ ಉಭಯ ತಂಡಗಳ ಮುಖಾಮುಖಿ ಹೈವೋಲ್ಟೇಜ್​ ಟಚ್ ಪಡೆದಿಕೊಂಡಿದ್ದಲ್ಲದೆ, ಹಲವು ವಿಚಾರಗಳಿಂದ ಕುತೂಹಲ ಹುಟ್ಟುಹಾಕಿದೆ.

ಇಂಟರ್​ನ್ಯಾಷನಲ್ ಸ್ಟಾರ್​ಗಳೇ ಪಂದ್ಯದ ಆಕರ್ಷಣೆ..!
ಯೆಸ್​..! ಮೇಲ್ನೋಟಕ್ಕೆ ಬಲಿಷ್ಠ ತಂಡಗಳಾಗಿ ಕಾಣಿಸುತ್ತಿರುವ ಉಭಯ ತಂಡಗಳಲ್ಲಿ ಇಂಟರ್​ನ್ಯಾಷನಲ್​​​​​​ ಸ್ಟಾರ್​​ಗಳೇ ಸೆಂಟರ್​​ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಕರ್ನಾಟಕ ಪರ ಮನೀಷ್​​​​ ಪಾಂಡೆ, ಕರುಣ್ ನಾಯರ್ ಇಂಟರ್​​ನ್ಯಾಷನಲ್ ಸ್ಟಾರ್​ಗಳಾಗಿದ್ರೆ, ವಿಜಯ್ ಶಂಕರ್, ಸಂದೀಪ್ ವಾರಿಯರ್​​​​​​​​​ ​ತಮಿಳುನಾಡಿನ ಅಂತಾರಾಷ್ಟ್ರೀಯ ಮಟ್ಟದ ಆಟಗಾರರಾಗಿದ್ದಾರೆ. ಹೀಗಾಗಿ ಇಂದಿನ ಪಂದ್ಯ ಭಾರೀ ಕುತೂಹಲ ಮೂಡಿಸಿದೆ.

ಫೈನಲ್ಸ್​​ನಲ್ಲಿ ನಡೆಯಲಿದೆ ಐಪಿಎಲ್ ಸ್ಟಾರ್ಸ್​ ಫೈಟ್​..!
ಜಸ್ಟ್​ ಇಂಟರ್​​ನ್ಯಾಷನಲ್ ಸ್ಟಾರ್​ಗಳ ಮುಖಾಮುಖಿ ಮಾತ್ರವೇ ಆಗ್ತಿಲ್ಲ. ಐಪಿಎಲ್ ಸ್ಟಾರ್​ಗಳ ಮುಖಾಮುಖಿಗೂ ಇಂದಿನ ಫೈನಲ್​ ಮ್ಯಾಚ್​ ಸಾಕ್ಷಿಯಾಗ್ತಿದೆ. ಹೌದು..! ತಮಿಳುನಾಡಿನ ತಂಡದಲ್ಲಿ ಹರಿ ನಿಶಾಂತ್​, ಜಗದೀಶನ್​, ಸಾಯಿ ಕಿಶೋರ್ ಚೆನ್ನೈ ತಂಡದ ಅಂಗವಾಗಿದ್ದರೆ, ಮುರುಗನ್ ಅಶ್ವಿನ್, ಶಾರೂಖ್ ಖಾನ್ ಪಂಜಾಬ್ ಕಿಂಗ್ಸ್​ ಪರ ಆಡಿರುವ ಐಪಿಎಲ್ ಸ್ಟಾರ್ಸ್ ಆಗಿದ್ದಾರೆ. ಇನ್ನೂ ಕರ್ನಾಟಕ ತಂಡದಲ್ಲಿ ಕೆ.ಸಿ ಕಾರಿಯಪ್ಪ, ಪ್ರವೀಣ್ ದುಬೆ, ಶ್ರೇಯಸ್​ ಗೋಪಾಲ್, ಜಗದೀಶನ್ ಸುಚಿತ್ IPL​​ನಲ್ಲಿ ಮಿಂಚಿರುವ ಪ್ರತಿಭೆಗಳಾಗಿದ್ದಾರೆ ಅನ್ನೋದು ಮರೆಯುವಂತಿಲ್ಲ.

ಮನೀಷ್​​, ವಿಜಯ್ ಶಂಕರ್​ ನಾಯಕತ್ವಕ್ಕೆ ಪ್ರತಿಷ್ಠೆಯ ಕಣ.!
ಹೌದು..! 2018-19, 2019-20ನೇ ಸಾಲಿನಲ್ಲಿ ಮನೀಷ್​​​​ ಪಾಂಡೆ ನೇತೃತ್ವದಲ್ಲಿ ಗೆದ್ದು ಬ್ಯಾಕ್ ಟು ಬ್ಯಾಕ್ ಚಾಂಪಿಯನ್​​ ಆಗಿದ್ದ ಕರ್ನಾಟಕ, ಕಳೆದ ಸಾಲಿನಲ್ಲಿ ಕರುಣ್ ನಾಯರ್ ನೇತೃತ್ವದಲ್ಲಿ ಮುಗ್ಗರಿಸಿತ್ತು. ಆದರೀಗ ಮತ್ತೆ ನಾಯಕನ ಜವಾಬ್ದಾರಿ ವಹಿಸಿಕೊಂಡಿರುವ ಮನೀಷ್​ ಪಾಂಡೆಗೆ ಮೂರನೇ ಬಾರಿ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿಸುವ ಸವಾಲು ಎದುರಾಗಿದೆ. ಇನ್ನೂ ಕಳೆದ ಆವೃತ್ತಿಯಲ್ಲಿ ದಿನೇಶ್​ ಕಾರ್ತಿಕ್ ನಾಯಕತ್ವದಲ್ಲಿ ಚಾಂಪಿಯನ್ ಆಗಿದ್ದ ತಮಿಳುನಾಡಿಗೆ, ಈಗ ವಿಜಯ್ ಶಂಕರ್ ಮುಂದಾಳತ್ವ ವಹಿಸಿಕೊಂಡಿದ್ದು, ಚಾಂಪಿಯನ್ ಪಟ್ಟ ಉಳಿಸಿಕೊಳ್ಳೋದು ಪ್ರತಿಷ್ಠೆಯಾಗಿದೆ.

ಒಟ್ಟಿನಲ್ಲಿ ಉಭಯ ತಂಡಗಳಲ್ಲಿ ಘಟಾನುಘಟಿ ಆಟಗಾರರ ಜೊತೆ ಯಂಗ್ ಟ್ಯಾಲೆಂಟೆಡ್​​​​​​​ ಆಟಗಾರರೇ ಇದ್ದು, ಯಾರಿಗೆ ಪ್ರತಿಷ್ಠಿತ ಸೈಯದ್​ ಮುಷ್ತಾಕ್ ಅಲಿ ಟ್ರೋಫಿ ಒಲಿಯುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

 

News First Live Kannada


Leave a Reply

Your email address will not be published. Required fields are marked *