ಮೈಸೂರು: ಸಂಗೀತ ನಿರ್ದೇಶಕ ಹಂಸಲೇಖ ಅವರು ಪೇಜಾವರಶ್ರೀಗಳ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆ ಕುರಿತು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು ನಾದಬ್ರಹ್ಮ ಹಂಸಲೇಖರವರು ಕೆಲಸವಿಲ್ಲದೆ ಪ್ರಚಾರದ ಸಲುವಾಗಿ ಈ ರೀತಿಯ ಹೇಳಿಕೆಗಳನ್ನು ನೀಡಿರಬೇಕೆಂದಿದ್ದಾರೆ.
ನಗರದಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪೇಜಾವರಶ್ರೀಗಳು ದಲಿತರ ಕೇರಿಗೆ ಹೋಗಿದ್ದು ಅವರ ಮನಸ್ಸಿನಲ್ಲಿ ಮನೆ ಮಾಡಿರುವ ಸಂಕುಚಿತ ಬಾವನೆಗಳನ್ನು ತೊಡೆದು ಹಾಕಲು ಹೊರತು ಆಹಾರ ಪದ್ಧತಿಯನ್ನು ತಡೆದುಹಾಕಲು ಅಲ್ಲ. ಯಾವುದೇ ಸಂತನಾಗಿರಲಿ ಸಂನ್ಯಾಸಿಯಾಗಿರಲಿ ಅವರಿಗೆ ಅವರದ್ದೆಯಾದ ಆಹಾರ ಪದ್ಧತಿ ಇರುತ್ತದೆ. ಗುರುಗಳು ಈ ಹೊತ್ತಿನಲ್ಲಿ ಈ ಮಾತುಗಳನ್ನು ಯಾಕೆ ಪ್ರಸ್ತಾಪಿಸಿದರೋ ಗೊತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಪೇಜಾವರ ಶ್ರೀಗಳು ದಲಿತರ ಮನೆಯಲ್ಲಿ ಕೋಳಿ ತಿಂತಾರಾ? ಕುರಿ ರಕ್ತ ಕುಡಿತಾರಾ? ಹಂಸಲೇಖ ಪ್ರಶ್ನೆ
ಪ್ರತಿಯೊಬ್ಬರಿಗೂ ಅವರದ್ದೇ ಆದ ಆಹಾರ ಸ್ವೀಕರಿಸುವ ಹಕ್ಕು ಇದೆ. ಅದ್ರಲ್ಲೂ ಪೇಜಾವರ ಶ್ರೀಗಳು ಸನ್ಯಾಸಿಗಳು.. ಅವರಿಗೆ ಮಾಂಸಾಹಾರ ನಿಷಿದ್ಧ..ಅವರು ದಲಿತ ಕೇರಿಗೆ ಹೋಗಿದ್ದು ಸಮಾನತೆಗಾಗಿ.. ನಿಮಗೆ ರಾಜ್ಯದಲ್ಲಿ ಅಭಿಮಾನಿಗಳಿದ್ದರೆ, ಪೇಜಾವರ ಶ್ರೀಗಳಿಗೆ ಇಡೀ ರಾಷ್ಟ್ರಾದ್ಯಂತ ಅಭಿಮಾನಿಗಳಿದ್ದಾರೆ. ಅಂಥವರ ಬಗ್ಗೆ ಹಂಸಲೇಖ ಈ ರೀತಿ ಹೇಳಿಕೆ ನೀಡಿದ್ದು ಖಂಡನೀಯ.. ನಿಮಗೆ ಆಹಾರ ಸಮಾನತೆ ಬಗ್ಗೆ ಅಷ್ಟು ಕಾಳಜಿ ಇದ್ದರೆ ನಿಮ್ಮ ಮನೆಗೆ ಇಸ್ಲಾಂ ಸ್ನೇಹಿತರಿಗೆ ಆಹ್ವಾನ ನೀಡಿ ಹಂದಿ ಮಾಂಸದ ಊಟವನ್ನು ನೀಡಿರಿ ಆಗ ನಿಮಗೆ ಗೊತ್ತಾಗುತ್ತದೆ. ಇಸ್ಲಾಂನಲ್ಲಿ ಹಂದಿ ಮಾಂಸ ಸೇವನೆ ನಿಷಿದ್ಧವಿದೆ. ಹೀಗಾಗಿ ಆಹಾರ ಪದ್ಧತಿಯ ಕುರಿತು ಅಸಂಬದ್ಧವಾಗಿ ಮಾತನಾಡುವ ಗೀಳು ಇವರಿಗ್ಯಾಕೆ ಅಂಟಿತು. ಸದ್ಯಕ್ಕೆ ಇವರಿಗೆ ಇಂಡಸ್ಟ್ರಿಯಲ್ಲಿ ಯಾವ ಕೆಲಸಗಳು ಇಲ್ಲ. ಇಂತಹ ಹೇಳಿಕೆಗಳನ್ನು ನೀಡಿ ಪ್ರಗತಿಪರರಂತೆ ಗುರುತಿಸಿಕೊಂಡು ಅವರು ಪ್ರಚಾರಗಳಿಸೋ ಹಪಾಹಪಿಗೆ ಬಿದ್ದಿದ್ದಾರೆ ಅನ್ನಿಸುತ್ತೆ. ಹಾಗಾಗಿ ಇನ್ಮುಂದೆ ಈ ರೀತಿಯ ಹೇಳಿಕೆಗಳನ್ನು ನೀಡುವ ಮೊದಲು ಸ್ವಲ್ಪ ಯೋಚನೆ ಮಾಡೋದು ಅಗತ್ಯ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಇದನ್ನೂ ಓದಿ:ಹಂಸಲೇಖ ಟೀಕೆ; ಹೊಗಳಿಕೆಗಾಗಿ ಮಾಡ್ತಿಲ್ಲ..ತೆಗಳಿದ್ರೂ ಕಾರ್ಯ ನಿಲ್ಲಲ್ಲ-ಪೇಜಾವರ ಶ್ರೀ
ಇದನ್ನೂ ಓದಿ:ದಲಿತರ ಮನೆಯಲ್ಲಿ ಪೇಜಾವರ ಶ್ರೀ ಕೋಳಿ ತಿಂತಾರಾ ಹೇಳಿಕೆ; ಕ್ಷಮೆ ಕೇಳಿದ ಹಂಸಲೇಖ