ಚಾಮರಾಜನಗರ: ಮುಸುಕಿನ ಜೋಳದ ಒಳಗೆ ಅಕ್ರಮವಾಗಿ ಮದ್ಯ ಸಂಗ್ರಹಿಸಿದ್ದ ಆರೋಪಿಯನ್ನು ಬಂಧಿಸಿ 56 ಸಾವಿರ ರೂಪಾಯಿ ಮೌಲ್ಯದ ವಿವಿಧ ಕಂಪನಿಗಳ ಮದ್ಯವನ್ನು ವಶಪಡಿಸಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮದ್ಯಯ್ಯನಹುಂಡಿಯಲ್ಲಿ ನಡೆದಿದೆ.

ಇಲ್ಲಿನ ಗೌಡರಕಟ್ಟೆ ಹತ್ತಿರ ಮುಸುಕಿನ ಜೋಳದ ಹಸಿಕಡ್ಡಿಯ ಒಳಗೆ ಮದ್ಯ ಸಂಗ್ರಹಿಸಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗುಂಡ್ಲುಪೇಟೆ ಪೊಲೀಸರು 146 ಲೀಟರ್ ಮದ್ಯ ವಶಪಡಿಸಿಕೊಂಡು ಆರೋಪಿ ಕೇರಳ ಮೂಲದ ರಂಜಿತ್ ರಾಮ್ ಮುರಳೀಧರನ್ ಎಂಬಾತನನ್ನು ಬಂಧಿಸಿದ್ದಾರೆ.

The post ಮುಸುಕಿನ ಜೋಳದ ಒಳಗೆ 146 ಲೀಟರ್ ಮದ್ಯ ಬಚ್ಚಿಟ್ಟಿದ್ದ ಆರೋಪಿ ಅಂದರ್ appeared first on News First Kannada.

Source: newsfirstlive.com

Source link