ಮುಸ್ಲಿಂ ಮಹಿಳೆಯರನ್ನ ಬಿಜೆಪಿಯಿಂದ ದೂರ ಮಾಡಲು ಹೀಗ್​ ಮಾಡ್ತಿದ್ದಾರೆ -ಹಿಜಾಬ್ ಬಗ್ಗೆ ಮೋದಿ ಪರೋಕ್ಷ ಮಾತು


ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ 58 ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆಯಿಂದ ಮತದಾನ ನಡೆಯುತ್ತಿದೆ. ಈ ನಡುವೆ ಉತ್ತರ ಪ್ರದೇಶದ ಸಹರಾನ್ಪುರ್ ಪ್ರದೇಶದಲ್ಲಿ ಪ್ರಧಾನಿ ಮೋದಿ ಅವರು ಪ್ರಚಾರ ಕಾರ್ಯವನ್ನು ನಡೆಸಿದ್ದಾರೆ.

ಇತ್ತ ಕರ್ನಾಟಕದಲ್ಲಿ ಆರಂಭವಾದ ಹಿಜಾಬ್​ ವಿವಾದ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಹಿಜಾಬ್​ಗೆ ಬೆಂಬಲ ನೀಡಿ ಹಲವು ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಈ ನಡುವೆ ತಮ್ಮ ಭಾಷಣದಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರ ಕುರಿತು ಪ್ರಸ್ತಾಪ ಮಾಡಿರೋ ಪ್ರಧಾನಿಗಳು, ಪರೋಕ್ಷವಾಗಿ ವಿಪಕ್ಷಗಳಿಗೆ ಟಾಂಗ್ ತಿಳಿಸಿದ್ದಾರೆ.

ಮುಸ್ಲಿಂ ಸಮುದಾಯದ ಮಹಿಳೆಯರ ಭಾಷಣದಲ್ಲಿ ಪ್ರಸ್ತಾಪಿಸಿದ ಮೋದಿ, ಮುಸ್ಲಿಂ ಸಹೋದರಿಯರು-ಹೆಣ್ಣುಮಕ್ಕಳು ನಮ್ಮ ಸ್ಪಷ್ಟ ಉದ್ದೇಶಗಳನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ನಾವು ತ್ರಿವಳಿ ತಲಾಕ್‌ನಿಂದ ಅವರನ್ನು ಮುಕ್ತಗೊಳಿಸಿ ರಕ್ಷಣೆ ನೀಡಿದ್ದೇವೆ. ಆದ್ದರಿಂದಲೇ ಮುಸ್ಲಿಂ ಮಹಿಳೆಯರು ಬಿಜೆಪಿಗೆ ಬೆಂಬಲ ನೀಡಿದ್ದರು. ಆದರೆ ತಮ್ಮ ಮಗಳು ‘ಮೋದಿ-ಮೋದಿ’ ಎಂದು ಹೇಳುತ್ತಿದ್ದಾಗ ಈ ‘ಗುತ್ತಿಗೆದಾರ’ರು ಚಡಪಡಿಸಿದ್ದರು. ಕೆಲವರು ಮುಸ್ಲಿಂ ಸಹೋದರಿಗೆ ಮೋಸ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಪ್ರತಿ ಸಂತ್ರಸ್ತ ಮುಸ್ಲಿಂ ಮಹಿಳೆಯೊಂದಿಗೆ ನಿಂತಿದೆ. ಆದರೆ ಈ ಜನರು ಮುಸ್ಲಿಂ ಸಹೋದರಿಯರನ್ನು ಮೋಸಗೊಳಿಸುತ್ತಿದ್ದಾರೆ. ಇದರಿಂದ ಮುಸ್ಲಿಂ ಹೆಣ್ಣುಮಕ್ಕಳ ಜೀವನ ಯಾವಾಗಲೂ ಹಿಂದೆ ಇರುತ್ತದೆ.ಅವರಿಗೆ ಮೋಸ ಮಾಡಲು ಹೊಸ ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪಶ್ಚಿಮ ಉತ್ತರ ಪ್ರದೇಶದ ಕೆಲವು ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ಚಳಿಯ ನಡುವೆಯೂ ಬೆಳಂಬೆಳಗ್ಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಿದ್ದಾರೆ ಎಂದು ನನಗೆ ಖುಷಿಯಾಗಿದೆ. ಈ ಎಲ್ಲ ಮತದಾರರನ್ನು ನಾನು ಪ್ರಶಂಸಿಸುತ್ತೇನೆ. ಉತ್ತರ ಪ್ರದೇಶದ ಜನತೆಗೆ ಪರಿವಾರ ವಾದದ ಪಕ್ಷವು ಹುಸಿ ಭರವಸೆಗಳನ್ನು ನೀಡುತ್ತಿದ್ದು, ಯಾರಾದರೂ ದೊಡ್ಡ ಭರವಸೆ ನೀಡುತ್ತಿದ್ದರೇ ಎಂದರೇ ಅವರು ಈ ಹಿಂದೆ ನೀಡಿದ್ದ ಭರವಸೆ ನೆನಪಿಸಿಕೊಳ್ಳಬೇಕು. ಈ ಹಿಂದೆ ಅವರು ವಿದ್ಯುತ್ ನೀಡುವ ಭರವಸೆ ನೀಡಿದ್ದರು.

ಆದರೆ ಉತ್ತರ ಪ್ರದೇಶವನ್ನು ಕತ್ತಲೆಯಲ್ಲಿ ಇರಿಸಿದರು. ಆದರೆ ಅವರು ವಾಸಿಸೋ ಜಿಲ್ಲೆಗಳಿಗೆ ಮಾತ್ರ ಅನುಕೂಲ ಮಾಡಿಕೊಂಡಿದ್ದರು. ಇತರ ಜಿಲ್ಲೆಗಳನ್ನು ಮರೆತುಬಿಟ್ಟಿದ್ದರು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು.

The post ಮುಸ್ಲಿಂ ಮಹಿಳೆಯರನ್ನ ಬಿಜೆಪಿಯಿಂದ ದೂರ ಮಾಡಲು ಹೀಗ್​ ಮಾಡ್ತಿದ್ದಾರೆ -ಹಿಜಾಬ್ ಬಗ್ಗೆ ಮೋದಿ ಪರೋಕ್ಷ ಮಾತು appeared first on News First Kannada.

News First Live Kannada


Leave a Reply

Your email address will not be published.