ಮುಸ್ಲಿಂ ಯುವಕರಿಗೆ ತರಬೇತಿ ನೀಡಲು ಲವ್-ಜಿಹಾದ್ ಟ್ರೇನಿಂಗ್ ಸೆಂಟರ್ ಗಳನ್ನು ತೆರೆಯಲಾಗಿದೆ: ಪ್ರಮೋದ್ ಮುತಾಲಿಕ್ | Love Jihad training centres have come up for Muslim youth to traps Hindu girls says Pramod Muthalik ARB


ಚಿಕ್ಕೋಡಿ: ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಅವರು ಅವರು ಪುನಃ ಲವ್-ಜಿಹಾದ್ (Love-Jihad) ಅಂಶವನ್ನು ಪ್ರಸ್ತಾಪಿಸಿ ಅದು ಈಗಲೂ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಹೇಳಿದರು. ಶನಿವಾರದಂದು ಚಿಕ್ಕೋಡಿಯಲ್ಲಿ ಟಿವಿ ಕನ್ನಡ ವಾಹಿನಿಯ ವರದಿಗಾರರೊಂದಿಗೆ ಮಾತಾಡಿದ ಅವರು ಲವ್-ಜಿಹಾದ್ ಪ್ರಕರಣಗಳ ಬಗ್ಗೆ ಖುದ್ದು ತಮಗೆ ಪ್ರತಿನಿತ್ಯ 10-15 ಕರೆಗಳು ಬರುತ್ತವೆ ಮತ್ತು ಬೇರೆ ಬೇರೆ ಜಿಲ್ಲೆಗಳಲ್ಲಿರುವ ತಮ್ಮ ಕಾರ್ಯಕರ್ತರಿಗೆ ಬರುವ ಕರೆಗಳನ್ನು ಗಣನೆಗೆ ತೆಗೆದುಕೊಂಡರೆ ದಿನಂಪ್ರತಿ ಸಾವಿರಾರು ಪ್ರಕರಣಗಳನ್ನು ಶ್ರೀರಾಮಸೇನೆ (Sri Rama Sene) ಹ್ಯಾಂಡಲ್ ಮಾಡುತ್ತಿದೆ ಎಂದು ಅವರು ಹೇಳಿದರು. ಕಳೆದ 25 ವರ್ಷಗಳಿಂದ ತಮ್ಮ ಸಂಘಟನೆ ಲವ್-ಜಿಹಾದ್ ಬಗ್ಗೆ ಹಿಂದೂಗಳಲ್ಲಿ ಜಾಗೃತಿ ಮೂಡಿಸುತ್ತಾ ಅದರ ವಿರುದ್ಧ ಹೋರಾಡುತ್ತಿದೆ. ಹಿಂದೆ ಬಜರಂಗ ದಳದ ಕಾರ್ಯಕರ್ತನಾಗಿದ್ದಾಗ ಲವ್-ಜಿಹಾದ್ ಪದವನ್ನು ತಾವೇ ಸೃಷ್ಟಿಮಾಡಿ ಅದರ ಕುರಿತು ಪುಸ್ತಕವನ್ನು ಬಿಡುಗಡೆ ಮಾಡಿದ್ದನ್ನು ಮುತಾಲಿಕ್ ಸ್ಮರಿಸಿಕೊಂಡರು.

ಆಗ ಲವ್-ಜಿಹಾದ್ ಬಗ್ಗೆ ಮಾತಾಡಿದಾಗ ತಮ್ಮನ್ನು ಲೇವಡಿ ಮಾಡಲಾಗಿತ್ತು, ಆದರೆ ಸದರಿ ವಿಷಯ ಈಗ ಸರ್ವೋಚ್ಛ ನ್ಯಾಯಾಲಯವನ್ನೂ ತಲುಪಿದೆ. ಕೇರಳದಲ್ಲಿ ಪ್ರಾರಂಭಗೊಂಡ ಇದು ಇಡೀ ದೇಶವನ್ನು ವ್ಯಾಪಿಸಿದೆ. ಮೂರು ರಾಜ್ಯಗಳಲ್ಲಿ ಈಗಾಗಲೇ ಲವ್-ಜಿಹಾದ್ ವಿರುದ್ಧ ಕಾನೂನು ರಚಿಸಲಾಗಿದೆ ಎಂದು ಮುತಾಲಿಕ್ ಹೇಳಿದರು.

ಹಿಂದೂ ಹುಡುಗಿಯರನ್ನು ಆಕರ್ಷಿಸಿ, ಮತಾಂತರ ಮಾಡಿ ಮದುವೆಯಾಗುವ ಮೂಲಕ ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿ ಇಸ್ಲಾಂ ಧರ್ಮವನ್ನು ಪ್ರತಿಷ್ಠಾಪಿಸಲು ಒಂದು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಅವರು ಹೇಳಿದರು.

ಹಿಂದೂಗಳು ತಾಯಿ ಸ್ವರೂಪದಲ್ಲಿ ಕಾಣುವ ಗೋವು ಮತ್ತು ಮಹಿಳೆಯರನ್ನು ಅವರು ಅಪಮಾನ ಮಾಡುತ್ತಿದ್ದಾರೆ. ನಮ್ಮ ಭೂಮಿತಾಯಿಯನ್ನು ತುಂಡರಿಸಿ ಅವರಿಗೆ ಒಂದು ಭಾಗವನ್ನು ಕೊಟ್ಟಾಗಿದೆ. ಆಘಾತಕಾರಿ ಸಂಗತಿಯೇನೆಂದರೆ, ಲವ್-ಜಿಹಾದ್ ಗಾಗಿ ಮುಸ್ಲಿಂ ಯುವಕರಿಗೆ ತರಬೇತಿ ನೀಡಲಾಗುತ್ತಿದೆ. ಅದಕ್ಕೆಂದೇ ಹಲವಾರು ಟ್ರೇನಿಂಗ್ ಸೆಂಟರ್ ಗಳು ಕೇರಳನಲ್ಲಿ ತಲೆಯೆತ್ತಿವೆ ಎಂದು ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

TV9 Kannada


Leave a Reply

Your email address will not be published.