
ಸಿದ್ದರಾಮಯ್ಯ
ಕೇವಲ ಮುಸ್ಲಿಮರು ಅಷ್ಟೇ ಗೋಮಾಂಸವನ್ನು ತಿನ್ನುವುದಿಲ್ಲ, ಹಿಂದೂಗಳು ಸಹ ಗೋಮಾಂಸ ತಿನ್ನುತ್ತಾರೆ ಎಂದು ತುಮಕೂರಿನಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ತುಮಕೂರು: ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಮಾಡಿದೆ. ಕೇವಲ ಮುಸ್ಲಿಮರು ಅಷ್ಟೇ ಗೋಮಾಂಸವನ್ನು ತಿನ್ನುವುದಿಲ್ಲ, ಹಿಂದೂಗಳು ಸಹ ಗೋಮಾಂಸ ತಿನ್ನುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ತುಮಕೂರಿನಲ್ಲಿ ನಡೆದ ಜಿಲ್ಲಾ ಅಲ್ಪಸಂಖ್ಯಾತರ ಬೃಹತ್ ಸಮಾವೇಶ (Convention)ದಲ್ಲಿ ಮಾತನಾಡಿದ ಅವರು, ಗೋಮಾಂಸ (Beef) ತಿನ್ನುವ ಬಗ್ಗೆ ಸದನದಲ್ಲಿ ನಾನು ಪ್ರಶ್ನೆ ಮಾಡಿದ್ದೇನೆ. ಹಾಗಾದ್ರೆ ನೀನು ಗೋಮಾಂಸ ತಿಂತಿಯಾ ಅಂತ ಪ್ರಶ್ನಿಸಿದ್ದರು. ಈವರೆಗೂ ತಿಂದಿಲ್ಲ, ತಿನ್ನಬೇಕು ಎನ್ನಿಸಿದರೆ ತಿನ್ನುವೆ. ನೀನು ಯಾರು ಕೇಳೋಕೆ ಅಂತ ಉತ್ತರ ಕೊಟ್ಟೆ ಎಂದು ಹೇಳಿದರು.
ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಇದೆ. ಕೆಲ ಧರ್ಮಗಳಲ್ಲಿ ಅವರದ್ದೇ ಆದ ಆಚಾರ-ವಿಚಾರ ಇರುತ್ತದೆ. ನಮ್ಮ ಧರ್ಮದ ಬಗ್ಗೆ ನಿಷ್ಠೆ ಮತ್ತು ಪರ ಧರ್ಮವನ್ನು ಗೌರವಿಸಬೇಕು. ಯಾವುದನ್ನೂ ಭೇದ ಭಾವ ಮಾಡಬಾರದು. ಯಾರೂ ಸಹ ಸಂವಿಧಾನ ವಿರುದ್ಧವಾಗಿ ನಡೆದುಕೊಳ್ಳಬಾರದು. ಸಮಾಜ ಒಡೆಯುವ ಕೆಲಸ RSS ಮಾಡುತ್ತಿದೆ. ಇಂಥವರಿಗೆ ಅಧಿಕಾರ ಸಿಕ್ಕರೆ ಸಂವಿಧಾನವನ್ನೇ ತೆಗೆಯುತ್ತಾರೆ. ಬಿಜೆಪಿ ಸಂವಿಧಾನವನ್ನ ಒಡೆಯುವ ಕೆಲಸ ಮಾಡುತ್ತಿದೆ ಎಂದರು.
ಮೊದಲು ನಾವೆಲ್ಲಾ ಭಾರತೀಯರು
ಯಾರು ಯಾವುದೇ ಧರ್ಮಕ್ಕೆ ಸೇರಿದರೂ ಮೊದಲು ನಾವೆಲ್ಲಾ ಭಾರತೀಯರು. ನಮ್ಮ ಭಾರತೀಯ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶಯಿದೆ. ಜಾತಿ-ಧರ್ಮದ ವ್ಯವಸ್ಥೆಯಲ್ಲಿ ಹುಟ್ಟಿದ್ದೇವೆ. ನಾವೆಲ್ಲೆರು ಮೊದಲು ಮನುಷ್ಯರಾಗಿ ಬದುಕಬೇಕು ಎಂದು ಸಿದ್ದರಾಮಯ್ಯ ಹೇಳಿದರು.