ಬೆಂಗಳೂರು: ಕೊರೊನಾ ಸಾಂಕ್ರಾಮಿಕದ ನಿರ್ವಹಣೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದು ಸದಾಶಿವನಗರದ  ತಮ್ಮ ನಿವಾಸದಲ್ಲಿ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಈ ವೇಳೆ ಅವರು ಬಿಜೆಪಿ ಅಜೆಂಡಾ ಬರೀ ಗುಳುಂ ಗುಳುಂ ಎಂದು ವ್ಯಂಗ್ಯವಾಡಿದರು.

ಇಂದು ನಮಗೆಲ್ಲ ನ್ಯಾಯಾಲಯದ ಮೇಲೆ ವಿಶ್ವಾಸ ಹೆಚ್ಚಾಗ್ತಿದೆ. ಹೈಕೋರ್ಟ್ ಕೂಡ ಸರ್ಕಾರ ತಮ್ಮ ತೀರ್ಮಾನ ನಿಧಾನ ಮಾಡಿದ್ದಕ್ಕೆ.. ಪಿ.ಐ.ಎಲ್ ಮೇಲೆ ನಿಮ್ಮ ಅನುಕೂಲಕ್ಕೆ ನೀವು ಮಾಡ್ತಿದ್ದೀರಿ ಅಂತ ಜಸ್ಟೀಸ್ ವೇಣುಗೋಪಾಲ ಗೌಡ್ರು ಹಾಗೂ ಕೇಶವನಾರಾಯಣ ಸೂಚನೆ ನೀಡಿರುವುದು ಹಾಗೂ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳನ್ನ ನೇಮಿಸಿರುವುದರಿಂದ ಈ ಸರ್ಕಾರದ ಮೇಲೆ ಸಂಪೂರ್ಣ ವಿಶ್ವಾಸ ಕಳೆದುಕೊಂಡಿರುವುದು ಎದ್ದು ಕಾಣ್ತಿದೆ ಎಂದು ಡಿಕೆಎಸ್​ ಹೇಳಿದ್ರು.

ಇದೇ ವೇಳೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪಗೆ ಸಲಹೆ ನೀಡಿದ ಅವರು, ನಿಮ್ಮ ಶ್ರಮ ನಮಗೆ ಗೊತ್ತಿದೆ.. ಆದರೆ ನಿಮ್ಮ ಕೈಯಲ್ಲಿ ಆಗ್ತಿಲ್ಲ. ಯಡಿಯೂರಪ್ಪನವರೇ ಇವತ್ತು ನಿಮಗೆ ಹೇಳ್ತಿದ್ದೀನಿ. ಮೆಡಿಕಲ್ ಕಾಲೇಜು ಆಡಳಿತ ಮಂಡಳಿಯವರನ್ನ ಕರೆದು ಮಾತಾಡಿ. ನಾನೂ ಬರ್ತೀನಿ ಮಾತಾಡಿ, ನಾನೇ ಕೇಳಿ ಕೊಳ್ತೀನಿ. ಅವರ ಬಳಿ ಎಲ್ಲಾ ವ್ಯವಸ್ಥೆ ಇದೆ. ನೀವು ಅವರಿಗೆ ದುಡ್ಡು ಕೊಟ್ಟು ಬಳಸಿಕೊಳ್ಳಿ ಎಂದರು.

ಪ್ರೈವೇಟ್ ಆಸ್ಪತ್ರೆಗೆ ಹೋದವರು ಬದುಕಿ ಬರ್ತಿದಾರೆ, ಆದರೆ ಸರ್ಕಾರಿ ಆಸ್ಪತ್ರೆಗೆ ಹೋದವರು ಸಾಯ್ತಿದ್ದಾರೆ. ಗವರ್ನಮೆಂಟ್ ಲೆಕ್ಕದಲ್ಲಿ ಹೋದವರೆಲ್ಲ ಹೆಣವಾಗಿ ಬರ್ತಿದ್ದಾರೆ. ಯಡಿಯೂರಪ್ಪನವರೇ ನಿಮಗೆ ಕೈಮುಗಿದು ಕೇಳ್ತೀನಿ. ಜೀವ ಉಳಿಸಿ, ನನ್ನ ಕ್ಷೇತ್ರದಲ್ಲೇ ದಿನ ಹತ್ಹತ್ತು ಜನ ಸಾಯ್ತಿದ್ದಾರೆ. ನಾನು ಹೇಳಿದ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರು ಹೋಗಿ ಮೀಟಿಂಗ್ ಮಾಡ್ತಿದಾರೆ. ನೈತಿಕ ಜವಾಬ್ದಾರಿ ತೆಗೆದುಕೊಳ್ಳಬೇಕು. ಸರ್ಕಾರವೇ ಕೊಲೆಗಡುಕರು ಅಂತ ಎಲ್ಲಾ ಮಾಧ್ಯಮಗಳಲ್ಲಿ ಬಂದಿದೆ. ಕೋರ್ಟ್ ಹಾಗೂ‌ ಮಾಧ್ಯಮಗಳ ಬಳಿ ಬೈಸಿಕೊಳ್ಳಬೇಕಾ..? ಎಂದು ಹರಿಹಾಯ್ದರು.

ಸಂದೀಪ್ ಪಾಟೀಲ್ ಅವರೇ ಬಿಜೆಪಿ ಕಾರ್ಯಕರ್ತರು ಯಾರ್ಯಾರು ಫೋನ್ ಮಾಡಿದಾರೆ ಅಂತ ಹೇಳಿ. ಎಲ್ಲಾ ತೆಗೆಸಿ, ಇಲ್ಲದಿದ್ದರೆ ನಾವೆಲ್ಲ ಮಾತಾಡ್ತೀವಿ. ಇಡೀ ಪಾರ್ಟಿ ಮಾತಾಡ್ತೀವಿ ಎಂದರು.

ಮುಸ್ಲಿಮರೆಲ್ಲ ನನ್ನ ಬ್ರದರ್ಸ್
ಇದೇ ವೇಳೆ ಸಂಸದ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ ಶಿವಕುಮಾರ್, ಬರೀ ಮುಸ್ಲಿಮರ ಹೆಸರು ಓದ್ತಾ ಇದಾನಲ್ಲ ಆ ತೇಜಸ್ವಿ ಸೂರ್ಯ. ಮುಸ್ಲಿಮರೆಲ್ಲ ನನ್ನ ಬ್ರದರ್ಸ್. ಅವರು ಪಂಕ್ಚರ್ ಹಾಕಲಿಲ್ಲ ಅಂದರೆ ಇವರ ಗಾಡಿ ಓಡಲ್ಲ. ತೇಜಸ್ವಿ ಮನೆಯವರು ಯಾರಾದರೂ ಪಂಕ್ಚರ್ ಹಾಕ್ತಾರಾ? ನಾವು ಮುಸ್ಲಿಮರ ಜೊತೆ ಬಾಳ್ತೀವಿ, ಅವರ ಜೊತೆ ಸಾಯ್ತೀವಿ. ಯಾರೂ ಅಂತರ್ಜಾತಿ ವಿವಾಹ ಆಗಲ್ವಾ? ಸಿಎಂ ಮನೆಯಲ್ಲಿ ಅಂತರ್ಜಾತಿ ವಿವಾಹ ಆಗಿಲ್ವಾ? ಕೇಂದ್ರ ಸಚಿವರ ಮನೆಯಲ್ಲಿ ಅಂತರ್ಜಾತಿ ವಿವಾಹ ಆಗಿಲ್ವಾ? ಎಂದು ಪ್ರಶ್ನಿಸಿದ್ರು.

ತೇಜಸ್ವಿ ಸೂರ್ಯ ಸೇರಿದಂತೆ ಆ ಟೀಮ್​ನ ಎಲ್ರೂ ಅರೆಸ್ಟ್ ಆಗಬೇಕು
ಅಶೋಕ್ ಅಲ್ಲೆಲ್ಲೋ ನಾಲ್ಕು ಎಕರೆ ಜಾಗ ನೋಡಿ ಹೆಣ ಸುಡುಸ್ತಾ ಇರೋದೊಂದು ಒಳ್ಳೆ ಕೆಲಸ ಮಾಡಿದಾರೆ. ಅವರಿಗೆ ಒಂದು‌ ಪ್ರೈಜ್ ಕೊಡಿಸೋಣ. ಎಂಪಿ ತೇಜಸ್ವಿ ಸೂರ್ಯ ಸೇರಿದಂತೆ ಆ ಟೀಮ್​ನ ಎಲ್ರೂ ಅರೆಸ್ಟ್ ಆಗಬೇಕು. ಅವರ ಜೊತೆ ಇರೋ ಕಾರ್ಯಕರ್ತರೇ ಇದಾರೆ. ನಾನು ಹಿಂದೆ ಹೇಳಿದ್ದೆ.. ಅಮಾವಾಸ್ಯೆ ಗಿರಾಕಿ ಇವನು.. ಒನ್ ಟೈಂ ಕ್ರಾಪ್ ಅವನು ಅಂತ ಹರಿಹಾಯ್ದರು

ಪಬ್ಲಿಕ್ ಅಕೌಂಟ್ ಕಮಿಟಿ ಚೇರ್ಮನ್ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಿದ್ದೀನಿ, ಆಡಿಟ್ ಮಾಡಲಿಕ್ಕೆ ಹೇಳಿದ್ದೀನಿ. ಸ್ಪೀಕರ್ ಅವರೇ ನೀವು ಅವಕಾಶ ಕೊಡಿ. ಇದು ದುಡ್ಡು ಹೊಡೆಯೋದಲ್ಲ, ಜೀವ ಉಳಿಸೋದು. ನೀವು ಹೆಚ್​​.ಕೆ ಪಾಟೀಲರಿಗೆ ಅವಕಾಶ ಕೊಡಲಿಲ್ಲ. ಈಗ ಅವಕಾಶ ಕೊಡಿ, ಬ್ಲಾಕ್ ಮಾಡಬೇಡಿ. ಬಿಬಿಎಂಪಿಯವರು ಚೆನ್ನಾಗಿ ಕೆಲಸ ಮಾಡ್ತಿದ್ದವರ ಡಿಮಾರಲೈಸ್ ಮಾಡಿದ್ರಲ್ಲ ಅಂತ ಡಿ.ಕೆ ಶಿವಕುಮಾರ್ ಕಿಡಿ ಕಾರಿದ್ರು.

The post ‘ಮುಸ್ಲಿಮರೆಲ್ಲ ನನ್ನ ಬ್ರದರ್ಸ್, ಅವ್ರು ಪಂಕ್ಚರ್ ಹಾಕ್ಲಿಲ್ಲ ಅಂದ್ರೆ ಇವ್ರ ಗಾಡಿ ಓಡಲ್ಲ’ -ತೇಜಸ್ವಿ ವಿರುದ್ಧ ಡಿಕೆಎಸ್​ ವಾಗ್ದಾಳಿ appeared first on News First Kannada.

Source: newsfirstlive.com

Source link