ಮುಸ್ಲಿಮರ ಪ್ರಾರ್ಥನಾ ಸ್ಥಳದಲ್ಲಿ ಹಿಂದೂಗಳ ವಿರುದ್ಧ ಮಾತು ಕೇಳಿಬಂದಿದ್ದು ಗಂಗಾವತಿ ಬಳಿಯ ಒಂದು ಕ್ಯಾಂಪ್​ನಲ್ಲಿ  | Anti Hindu conversation overheard at a camp area near Gangavati, police deployed ARBಈ ಲಕ್ಷ್ಮಿ ಕ್ಯಾಂಪನ್ನೇ ತೆಗೆದುಕೊಳ್ಳಿ. ಇಲ್ಲಿನ ಜನಸಂಖ್ಯೆ 300 ಕ್ಕಿಂತ ಕಡಿಮೆ ಇದ್ದೀತು. ಆದರೂ ಜನ ಹಿಂದೂ-ಮುಸ್ಲಿಂ ವೈಷಮ್ಯದ ಬಗ್ಗೆ ಮಾತಾಡುತ್ತಾರೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಹಿಂದೂ ಕತ್ತು ಕುಯ್ಯಬೇಕು ಅಂತ ಮಾತಾಡಲಾಗಿದೆಯಂತೆ.

TV9kannada Web Team


| Edited By: Arun Belly

Jun 01, 2022 | 8:09 PM
Koppal: ವಿಡಿಯೋನಲ್ಲಿ ನಿಮಗೆ ಕಾಣುತ್ತಿರೋದು ಕೊಪ್ಪಳ ಜಿಲ್ಲೆ ಗಂಗಾವತಿ ಪಟ್ಟಣದ ಹೊರವಲಯದಲ್ಲಿರುವ ಲಕ್ಷ್ಮಿ ಕ್ಯಾಂಪ್ (Laxmi Camp). ಕ್ಯಾಂಪ್ ಪ್ರದೇಶಗಳು ಸಾಮಾನ್ಯವಾಗಿ ಚಿಕ್ಕವು. ನೀವು ರಾಯಚೂರು (Raichur) ಮತ್ತು ಕೊಪ್ಪಳ (Koppal) ಜಿಲ್ಲೆಗಳಿಗೆ ಹೋದರೆ ಇಂಥ ಹಲವಾರು ಕ್ಯಾಂಪ್ ಗಳನ್ನು ಕಾಣಬಹುದು. ಸಿರವಾರ ಕ್ಯಾಂಪ್, ವಡ್ಡರಹಟ್ಟಿ ಕ್ಯಾಂಪ್, ಯರಮರಸ್ ಕ್ಯಾಂಪ್ ಹೀಗೆ. ಸರಿ ಈ ಲಕ್ಷ್ಮಿ ಕ್ಯಾಂಪ್ ಯಾಕೆ ಸುದ್ದಿಯಲ್ಲಿದೆ ಅಂದರೆ ಮುಸ್ಲಿಮರ ಗುಂಪೊಂದು ತಾವು ಮಾಡಿಕೊಂಡಿದ್ದ ಪ್ರಾರ್ಥನಾ ಸ್ಥಳದಲ್ಲಿ ನಮಾಜ ಮಾಡುವಾಗ ಹಿಂದೂಗಳ ವಿರುದ್ಧ ಮಾತುಗಳು ಕೇಳಿಬಂದಿವೆ. ಬೀಗ ಜಡಿಯಲ್ಪಟ್ಟಿರುವ ಈ ಸ್ಥಳದಲ್ಲೇ ಮುಸಲ್ಮಾನರು ಪ್ರಾರ್ಥನೆ ಸಲ್ಲಿಸುತ್ತಾರೆ ಅಂತ ಗೊತ್ತಾಗಿದೆ. ಹಾಗಾಗಿ, ಗಂಗಾವತಿ ತಾಲ್ಲೂಕು ಆಡಳಿತ ಮುಂಜಾಗ್ರತೆ ಕ್ರಮವಾಗಿ ಪೋಲಿಸರನ್ನು ನಿಯೋಜಿಸಿದೆ.

2022-23 ಶೈಕ್ಷಣಿಕ ವರ್ಷಕ್ಕಾಗಿ ಶಾಲಾ ಕಾಲೇಜುಗಳು ಪುನರಾರಂಭಗೊಂಡಿವೆ ಮತ್ತು ಮಕ್ಕಳು ಶಾಲೆಗಳಲ್ಲಿ ಹಾಗೂ ಯುವಕ, ಯುವತಿಯರು ಕಾಲೇಜಿನ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಆದರೆ, ಮಂದಿರ-ಮಸೀದಿಯ ವಿವಾದಗಳು ಮಾತ್ರ ನಿಲ್ಲುತ್ತಿಲ್ಲ. ಮಂಗಳೂರು ವಿವಿ ಕಾಲೇಜೊಂದರಲ್ಲಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು, ಹಿಜಾಬ್ ಧರಿಸಿಯೇ ಕಾಲೇಜ್ ಗೆ ಹೋಗುತ್ತಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ಆಕ್ಷೇಪಣೆ ವ್ಯಕ್ತಪಡಿಸಿದಾಗ ಅವರು ಹೋಗಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿದ್ದಾರೆ. ಕೋರ್ಟ್ ಆದೇಶವನ್ನು ಯಾವ ಅಧಿಕಾರಿ ತಾನೆ ಉಲ್ಲಂಘಿಸಿ ಅಂತ ಹೇಳುವುದು ಸಾಧ್ಯ?

ಈ ಲಕ್ಷ್ಮಿ ಕ್ಯಾಂಪನ್ನೇ ತೆಗೆದುಕೊಳ್ಳಿ. ಇಲ್ಲಿನ ಜನಸಂಖ್ಯೆ 300 ಕ್ಕಿಂತ ಕಡಿಮೆ ಇದ್ದೀತು. ಆದರೂ ಜನ ಹಿಂದೂ-ಮುಸ್ಲಿಂ ವೈಷಮ್ಯದ ಬಗ್ಗೆ ಮಾತಾಡುತ್ತಾರೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಹಿಂದೂ ಕತ್ತು ಕುಯ್ಯಬೇಕು ಅಂತ ಮಾತಾಡಲಾಗಿದೆಯಂತೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Kannada


Leave a Reply

Your email address will not be published. Required fields are marked *