ನಟ ರಾಕ್ಷಸ ಡಾಲಿ ಧನಂಜಯ ನಟಿಸಲಿರುವ ‘ಹೆಡ್​ ಬುಷ್’​ ಸಿನಿಮಾ ಕಳೆದ ಆಗಸ್ಟ್​​​ನಿಂದ ಬಹಳಷ್ಟು ಸುದ್ದಿಯಲ್ಲಿದೆ. ಬೆಂಗಳೂರಿನ ಮೊದಲ ಕುಖ್ಯಾತ ಡಾನ್​ ಎಂ.ಪಿ ಜಯರಾಜ್​ ಕಥೆಯನ್ನಾಧಾರಿಸಿ ಮಾಡ್ತಿರುವ ಸಿನಿಮಾ ಇದಾಗಿದ್ದು, ಇನ್ನೂ ಮುಹೂರ್ತ ಆಗದೇ ಸದ್ದಿಲ್ಲದೇ ಮೊದಲ ಹಂತದ ಶೂಟಿಂಗ್​ ಮುಗಿಸಿದೆ. ಹೌದು.. ಯುವ ನಿರ್ದೇಶಕ ಶೂನ್ಯ ಆ್ಯಕ್ಷನ್​ ಕಟ್​ ಹೇಳ್ತಿರುವ ‘ಹೆಡ್​ ಬುಷ್’​ ಮುಹೂರ್ತಕ್ಕೂ ಮುನ್ನವೇ ಈಗಾಗಲೇ ಫಸ್ಟ್​ ಶೆಡ್ಯೂಲ್​ ಚಿತ್ರೀಕರಣ ಮುಗಿಸಿದೆ.

ಡಾಲಿ ಧನಂಜಯ ಅವರ ಬಾಲ್ಯದ ಪಾತ್ರವನ್ನ ಬಾಲ ನಟ ಆಕಾಶ್​​ ನಿರ್ವಹಿಸಿದ್ದು, ಆ ಭಾಗದ ಚಿತ್ರೀಕರಣವನ್ನ ಮುಗಿಸಿದೆ ಚಿತ್ರತಂಡ. ಇದಲ್ಲದೇ, ಧನಂಜಯ ಅವರ ಟೀನೇಜ್​​ ಪೋರ್ಷನ್ಸ್​​ ಶೂಟ್​ ಕೂಡ ಮೊದಲ ಹಂತದ ಶೂಟಿಂಗ್​ನಲ್ಲೇ ಮಾಡಲಾಗಿದೆ. 60ರ ದಶಕಕ್ಕೆ ಹೊಂದಿಕೊಳ್ಳುವಂತೆ ಗುಟ್ಟಹಳ್ಳಿಯಲ್ಲಿ ಮೊದಲ ಭಾಗದ ಚಿತ್ರೀಕರಣ ನಡೆದಿದೆ.

ಇದೊಂದು ಗ್ಯಾಂಗ್​ಸ್ಟರ್​​ ಡ್ರಾಮಾ ಆಗಿದ್ದು, 60-70ರ ದಶಕದ ಕಥೆಯನ್ನ ಹೇಳ್ತಿರುವ ಈ ಸಿನಿಮಾದ ಶೂಟಿಂಗ್​ಗೆ ಲೊಕೇಷನ್​ಗಳದ್ದೇ ದೊಡ್ಡ ತಲೆ ನೋವು ಅಂತಿದೆ ಚಿತ್ರತಂಡ. ಸಿನಿಮಾದ ಕಥೆಗೆ ಸೂಕ್ತವಾದ ಲೊಕೇಷನ್​​ ಸಿಗದೇ ಹೋದಲ್ಲಿ, ಸೆಟ್​ ಹಾಕಿಯೇ ಚಿತ್ರೀಕರಣ ಮಾಡಬೇಕು ಅನ್ನೋದು ಇಡೀ ಹೆಡ್​ ಬುಷ್​ ಚಿತ್ರತಂಡದ ನಿರ್ಧಾರ ಅಂತ ನಿರ್ದೇಶಕ ಶೂನ್ಯ ನ್ಯೂಸ್​​ ಫಸ್ಟ್​ ಜೊತೆ ಹಂಚಿಕೊಂಡಿದ್ದಾರೆ. ಇದೇ ಸಂದರ್ಭ ತಮಗೆ ಸಿನಿಮಾ ಮೇಕಿಂಗ್​ ಬಗ್ಗೆ ಸಾಕಷ್ಟು ಮಾಹಿತಿ ನೀಡಿ ತಾವು ಒಬ್ಬ ನಿರ್ದೇಶಕರಾಗುವಂತೆ ಮಾಡಿದ ಡಾ.ಶ್ರೀಪತಿ ಅವರನ್ನ ನೆನಪಿಸಿಕೊಂಡಿದ್ದಾರೆ.

ನಟ ಡಾಲಿ ಧನಂಜಯ ಮೊದಲ ಹಂತದ ಚಿತ್ರೀಕರಣದಲ್ಲಿ ಪಾಲ್ಗೊಂಡಿರಲಿಲ್ಲ. ಲಾಕ್​ಡೌನ್​​ ಓಪನ್​ ಆದಾಕ್ಷಣ ಮತ್ತೆ ಶೂಟಿಂಗ್​ ಶುರು ಮಾಡುವುದಾಗಿ ಶೂನ್ಯ ತಿಳಿಸಿದ್ದಾರೆ. ಎರಡನೇ ಹಂತದ ಚಿತ್ರೀಕರಣದಲ್ಲಿ ಡಾಲಿ ಧನಂಜಯ ಇರಲಿದ್ದು, ಇದಕ್ಕಾಗಿ ತಮ್ಮ ದೇಹವನ್ನ ಬಹಳಷ್ಟು ದಂಡಿಸುತ್ತಿದ್ದಾರೆ. ಇನ್ನು ಕಳೆದ ವರ್ಷ ಧನಂಜಯ ಹುಟ್ಟುಹಬ್ಬದ ದಿನ ಬಿಡುಗಡೆಯಾದ ಚಿತ್ರದ ಮೊದಲ ಪೋಸ್ಟರ್​​ ಇಂದಿಗೂ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುತ್ತದೆ. ಚಿತ್ರಕ್ಕೆ ಅಗ್ನಿ ಶ್ರೀಧರ್​ ಕಥೆ ರಚಿಸಿದ್ದಾರೆ.

 

The post ಮುಹೂರ್ತಕ್ಕೂ ಮುನ್ನ ಮೊದಲ ಹಂತದ ಚಿತ್ರೀಕರಣ ಮುಗಿಸಿದ ಡಾಲಿಯ ‘ಹೆಡ್​​ ಬುಷ್’​ appeared first on News First Kannada.

Source: newsfirstlive.com

Source link