ಮುಹೂರ್ತದಲ್ಲಿದ್ದ ‘ಪುಟ್ಟಕ್ಕನ ಮಕ್ಕಳು’ ಪ್ರೊಮೋದಲ್ಲಿಲ್ಲ ಯಾಕೆ? ಅಸಲಿ ಕಾರಣವೇನು?


ಪುಟ್ಟಕ್ಕನ ಮಕ್ಕಳು.. ಹಿರಿಯ ನಟಿ ಉಮಾಶ್ರೀ ಅವರು ಕಿರುತೆರೆಗೆ ಕಮ್​ ಬ್ಯಾಕ್ ಮಾಡುತ್ತಿರುವ ಬಹು ನಿರಿಕ್ಷಿತ ಧಾರಾವಾಹಿ. ಪ್ರೋಮೊನಿಂದಲೇ ದೊಡ್ಡ ಸದ್ದು ಮಾಡಿದ್ದ ಸೀರಿಯಲ್​ ಬಗ್ಗೆ ನಾವೂ ನಿಮಗೆ ಮಾಹಿತಿ ನೀಡ್ತಾನೆ ಬಂದಿದ್ದಿವಿ. ಸದ್ಯ ಈ ಸೀರಿಯಲ್​ನ ಹೊಸ ಪ್ರೋಮೊ ಒಂದು ರಿಲೀಸ್​ ಆಗಿದ್ದು, ಮೂಹರ್ತದಲ್ಲಿ ಇದ್ದ ನಟಿಯರು ಮಾಯವಾಗಿದ್ದಾರೆ.

ಹೌದು, ಈಗಾಗಲೆ ಧಾರಾವಾಹಿ ಚಿತ್ರಿಕರಣದಲ್ಲಿ ಬ್ಯುಸಿಯಾಗಿದ್ದು, ಮೂವರು ಹೆಣ್ಣುಮಕ್ಕಳ ತಾಯಿ ಪುಟ್ಟಕ್ಕಳನ್ನ ಗಂಡ ಬಿಟ್ಟ ಹೋಗಿರುತ್ತಾನೆ. ಬಡತನದ ನಡುವೆ ಮಕ್ಕಳನ್ನ ಪುಟ್ಟಕ್ಕ ಒಳ್ಳೆಯ ಸ್ಥಾನಕ್ಕೆ ತರಲು ಕಷ್ಟ ಪಡುತ್ತಿರುತ್ತಾಳೆ. ಅವಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಾ? ಅನ್ನೋದೇ ಕತೆಯ ಎಳೆಯಾಗಿದ್ದು, ಈ ಮೂವರು ಹೆಣ್ಣುಮಕ್ಕಳ ಪಾತ್ರಕ್ಕೆ ಮೊದಲು ಬಣ್ಣ ಹಚ್ಚಿದ ನಟಿಯರು ಈಗ ಬದಲಾಗಿದ್ದಾರೆ.

ಈ ಸೀರಿಯಲ್​ನ್ನ ಜೊತೆಜೊತೆಯಲಿ ಸೀರಿಯಲ್​ ನಿರ್ದೇಶಕ ಆರೂರು ಜಗದೀಶ್​ ಅವರು ನಿರ್ದೇಶಿಸುತ್ತಿದ್ದು, ಈ ಹಿಂದೆ ಪುಟ್ಟಕ್ಕನ ಮಕ್ಕಳು ಧಾರವಾಹಿಯ ಪ್ರಮುಖ ಲೀಡ್​ ನಟಿ ಅಮಿತಾ ಸದಾಶಿವ ಅವರು ಧಾರಾವಾಹಿಯಿಂದ ಹೊರನಡೆದಿದ್ದ ಬಗ್ಗೆ ನಿಮಗೆ ಮಾಹಿತಿ ನೀಡಿದ್ವಿ. ಈಗ ಆ ಪಾತ್ರವನ್ನ ಸಂಜನಾ ಬುರ್ಲಿ ಅವರು ನಿರ್ವಹಿಸುತ್ತಿದ್ದಾರೆ. ಅಂದ್ಹಾಗೆ ಸಂಜನಾ ಅವರು ಈ ಹಿಂದೆ ಲಗ್ನಪತ್ರಿಕೆ ಎಂಬ ಧಾರಾವಾಹಿಯಲ್ಲಿ ಲೀಡ್​ ಆಗಿ ಅಭಿನಯಿಸಿದ್ದರು. ಈಗ ಪುಟ್ಟಕ್ಕನ ಮಕ್ಕಳು ಸೀರಿಯಲ್​ನ ಸ್ನೇಹಾ ಪಾತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಇನ್ನೂ ಮೂವರು ಮಕ್ಕಳಲ್ಲಿ ದೊಡ್ಡ ಮಗಳು ಸಹನಾ ಪಾತ್ರದಲ್ಲಿ ಅಮ್ಮನೂರು ಸೀರಿಯಲ್​ ಖ್ಯಾತಿಯ ಅಕ್ಷರ ಕಾಣಿಸಿಕೊಳ್ಳುತ್ತಿದ್ದು, ಹೆಸರಿಗೆ ತಕ್ಕ ಹಾಗೇ ಸೌಮ್ಯ ಸ್ವಭಾವದ ಅಮ್ಮನಿಗೆ ತಕ್ಕ ಮಗಳು ಸಹನಾ. ಮತ್ತೊಂದು ಹೊಸ ಸಮಾಚಾರ ಅಂದ್ರೇ ಮೂಹರ್ತದಲ್ಲಿ ಕಾಣಿಸಿಕೊಂಡಿದ್ದ ಪುಟ್ಟ ಹುಡುಗಿ ಪ್ರತಿಮಾ ಈಗ ಬದಲಾಗಿದ್ದು, ಮೂರನೇ ಮಗಳು ಸುಮಾ ಪಾತ್ರಕ್ಕೆ ಹೊಸ ಪ್ರತಿಭೆ ಶಿಲ್ಪಾ ಸಾವಸೆರೆ ಕಾಣಿಸಿಕೊಳ್ಳುತ್ತಿದ್ದಾರೆ.

ದೊಡ್ಡ ತಾರಾಬಳಗವನ್ನ ಹೊಂದಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ತಂಡ ಸದ್ಯ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದು, ವಿಭಿನ್ನ ಕತೆಯ ಮೂಲಕ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.

The post ಮುಹೂರ್ತದಲ್ಲಿದ್ದ ‘ಪುಟ್ಟಕ್ಕನ ಮಕ್ಕಳು’ ಪ್ರೊಮೋದಲ್ಲಿಲ್ಲ ಯಾಕೆ? ಅಸಲಿ ಕಾರಣವೇನು? appeared first on News First Kannada.

News First Live Kannada


Leave a Reply

Your email address will not be published.