ಮೈಸೂರು: ದಕ್ಷಿಣ ಭಾರತದ ಪುಣ್ಯಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ಕಾಣಿಕೆ ಹುಂಡಿಯ ಎಣಿಕೆ ಕಾರ್ಯ ನಡೀತು. ಆಗ ತಾಯಿಗೆ ಬರೋಬ್ಬರಿ 1.39 ಕೋಟಿ ರೂಪಾಯಿ ಸಂಗ್ರಹವಾಗಿರೋದು ತಿಳಿದು ಬಂದಿದೆ. ಇದು ಬರೋಬ್ಬರಿ 2 ತಿಂಗಳ ಕಾಣಿಕೆ ಹುಂಡಿ ಅಷ್ಟೇ. ಇದಷ್ಟೇ ಅಲ್ಲದೇ, ಚಿನ್ನ, ಬೆಳ್ಳಿ, ಕೂಡಾ ಭಕ್ತರು ತಾಯಿಗೆ ಅರ್ಪಿಸಿರುವ ಲೆಕ್ಕ ಸಿಕ್ಕಿದೆ.
ಮೂಕಾಂಬಿಕೆ ‘ಕೋಟಿ’ ಒಡತಿ
ಈ ವರ್ಷದ ಅಕ್ಟೋಬರ್‌ನಲ್ಲಿ 615 ಗ್ರಾಂ ಚಿನ್ನ ಹಾಗೂ 3,500 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಇನ್ನೂ ಕಳೆದ ವರ್ಷ ನವರಾತ್ರಿ ವೇಳೆ ನಡೆದ ಎಣಿಕೆಯಲ್ಲಿ 92 ಲಕ್ಷ ರೂಪಾಯಿ ಸಂಗ್ರಹವಾಗಿದ್ದು, 585 ಗ್ರಾಂ ಚಿನ್ನ ಹಾಗೂ 6,400 ಗ್ರಾಂ ಬೆಳ್ಳಿ ಸಂಗ್ರಹವಾಗಿತ್ತು. 3 ವರ್ಷಗಳ ಹಿಂದೆ 3 ತಿಂಗಳ ಆದಾಯ 1.11ಕೋಟಿ ರೂಪಾಯಿಯಷ್ಟಿತ್ತು. ಆದ್ರೆ, ಈ ಬಾರಿ ಕೇವಲ 52 ದಿನಗಳಲ್ಲೇ 1.36 ಕೋಟಿ ರೂಪಾಯಿ ಕಾಣಿಕೆ ಹಣ ಸಂಗ್ರಹವಾಗಿದ್ದು, ಇದು ದಾಖಲೆಯಾಗಿದೆ.
ಚಾಮುಂಡಿ ಹುಂಡಿಗೂ ಬಂತು ‘ಕೋಟಿ’ ಕಾಣಿಕೆ
ಇನ್ನೂ ಚಾಮುಂಡಿ ಬೆಟ್ಟದ ಚಾಮುಂಡಿತಾಯಿಯ ಹುಂಡಿಗೂ ಕೋಟಿ ಕೋಟಿ ಕಾಣಿಕೆ ಬಂದಿದೆ. ಸೆಪ್ಟೆಂಬರ್ 23ರಿಂದ ನವೆಂಬರ್ 10ರವರೆಗೆ ಒಟ್ಟು 1.77 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದರ ಜೊತೆಗೆ ಬೆಳ್ಳಿ ಮತ್ತು ಚಿನ್ನವೂ ತಾಯಿಯ ಹುಂಡಿಗೆ ಕಾಣಿಕೆ ರೂಪದಲ್ಲಿ ಹರಿದು ಬಂದಿದೆ ಅಂತಾ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋವಿಡ್ ಹಿನ್ನೆಲೆ ದೇವಸ್ಥಾನಕ್ಕೆ ಬರೋ ಭಕ್ತರು ಕಡಿಮೆಯಾಗಿದ್ದಾರೆ. ಆದ್ರೂ, ಆದಾಯದಲ್ಲಿ ಮಾತ್ರ ಕೋಟಿ ಕೋಟಿ ರೂಪಾಯಿ ದೇವರ ಹುಂಡಿಗೆ ಬಂದಿದೆ. ದಸರಾ ಮತ್ತು ನವರಾತ್ರಿ ಕೂಡಾ ದೇವಸ್ಥಾನದ ಆದಾಯದಲ್ಲಿ ಕೊಂಚ ಸುಧಾರಣೆ ತಂದಿದೆ. ಅದರ ಫಲವೇ ಈ ದೃಶ್ಯಗಳು.