ಬಳ್ಳಾರಿ: ಕೊರೊನಾ ದೂರವಾಗಲಿ ಅಂತ ಜನರು ಮೂಢನಂಬಿಕೆಯ ಮೊರೆಹೋಗ್ತಿರೋದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಕೊರೊನಾ ಎರಡನೇ ಅಲೆ ಹಳ್ಳಿ ಹಳ್ಳಿಗೂ  ಹಬ್ಬುತ್ತಿರೋ ಹಿನ್ನೆಲೆ ಗ್ರಾಮೀಣ ಭಾಗದ ಜನರು ಮೌಢ್ಯದ ಕಡೆ ಮುಖ ಮಾಡಿದ್ದಾರೆ.

ಬಳ್ಳಾರಿ ತಾಲೂಕಿನ ಡಿ. ಕಗ್ಗಲ್ಲು ಗ್ರಾಮದಲ್ಲಿ ಮೌಢ್ಯದಿಂದ ಜನರು ನೂರಾರು ಕೆ.ಜಿ ಅನ್ನವನ್ನ ಮಣ್ಣು ಪಾಲು ಮಾಡಿದ್ದಾರೆ. ಕೊರೊನಾ ದೂರವಾಗಲಿ ಅಂತ ಇಲ್ಲಿನ ನಿವಾಸಿಗಳೆಲ್ಲರೂ ಮನೆ ಮನೆಯಲ್ಲಿ ಅನ್ನ ತಯಾರಿಸಿ ರಾತ್ರಿ ಊರ ಆಚೆ ಚೆಲ್ಲಿ ಬಂದಿದ್ದಾರೆ.

ಪ್ರತಿ ಮನೆಯಲ್ಲಿ ತಲಾ 5 ಕೆ.ಜಿ ಅನ್ನ ತಯಾರಿಸಿ ಒಂದು ಕಡೆ ಸಂಗ್ರಹ ಮಾಡಿದ್ದಾರೆ. ಬಳಿಕ ಗ್ರಾಮದ ಹೊರಭಾಗದಲ್ಲಿ ಹೋಗಿ ನೆಲಕ್ಕೆ ಸುರಿದು ಬಂದಿದ್ದಾರೆ.

ಒಂದು ಕಡೆ ತುತ್ತು ಅನ್ನಕ್ಕಾಗಿ ಎಷ್ಟೋ ಜನ ಪರದಾಡುವ ಪರಿಸ್ಥಿತಿ ಇರುವಾಗ ಹೀಗೆ ರಾಶಿ ರಾಶಿ ಅನ್ನವನ್ನ ಟ್ರ್ಯಾಕ್ಟರ್​​​ಗಳಲ್ಲಿ ತುಂಬಿಕೊಂಡು ಹೋಗಿ ಎಸೆದಿದ್ದಾರೆ. ಇದನ್ನ ನೋಡಿ ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

The post ಮೂಢನಂಬಿಕೆಯಿಂದ ನೂರಾರು ಕೆ.ಜಿ ಅನ್ನ ಮಣ್ಣುಪಾಲು ಮಾಡಿದ ಜನ appeared first on News First Kannada.

Source: newsfirstlive.com

Source link