ಮೂರು ನಾಯಿಗಳು ಮತ್ತು ನಾಗರ ಹಾವಿನ ನಡುವೆ ಕಾಳಗ, ಮೈ ಜುಮ್​ ಎನ್ನಿಸುವ ದೃಶ್ಯ | Fight between three dogs and a snake in ballari watch video


ಬಳ್ಳಾರಿ: ಮೂರು ನಾಯಿಗಳು ಮತ್ತು ನಾಗರ ಹಾವಿನ ಮಧ್ಯೆ ನಡೆದ ಕಾದಾಟ ಮೈ ಜುಮ್​ ಅನ್ನುವಂತಿದೆ. ನಾಗರ ಹಾವಿನ ಮೇಲೆ ಮೂರು ನಾಯಿಗಳು ದಾಳಿ ನಡೆಸಿರುವ ಘಟನೆ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ‌ ಬಲಕುಂದಿ ಗ್ರಾಮದ ಬಳಿ ನಡೆದಿದೆ. ಹಾವು‌ ಮತ್ತು ನಾಯಿಗಳ ಕಾಳಗ ಮೊಬೈಲ್‌ನಲ್ಲಿ ಸೆರೆಯಾಗಿದ್ದು ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಮೂರು ನಾಯಿಗಳಿಂದ ತಪ್ಪಿಸಿಕೊಳ್ಳಲು ನಾಗರಹಾವು ಹರಸಾಹಸ ಪಡುತ್ತಿದ್ದು ನಾಯಿಗಳು ಹಾವು ತಪ್ಪಿಸಿಕೊಂಡು ಹೋಗದಂತೆ ಅದರ ಜೊತೆ ಕಾದಾಡಿವೆ.

TV9 Kannada


Leave a Reply

Your email address will not be published. Required fields are marked *