ಬಳ್ಳಾರಿ: ಜಗತ್ತಿನಾದ್ಯಂತ ಜನರು ಕೊರೊನಾದಿಂದ ಸಂಕಷ್ಟಕ್ಕೊಳಗಾಗಿದ್ರೆ ಇದೊಂದು ಗ್ರಾಮದಲ್ಲಿ ಮಾತ್ರ ಕ್ಯಾನ್ಸರ್ ತನ್ನ ಅಟ್ಟಹಾಸ ಮೆರೆದಿದೆ. ಬಳ್ಳಾರಿ ತಾಲೂಕಿನ ಹರಗಿನದೊಣಿ ಗ್ರಾಮಸ್ಥರನ್ನ ಕ್ಯಾನ್ಸರ್​ನಿಂದಾಗುತ್ತಿರುವ ಸಾವುಗಳು ಬೆಚ್ಚಿಬೀಳಿಸಿವೆ.

ಕೇವಲ 3 ತಿಂಗಳ ಅವಧಿಯಲ್ಲಿಯೇ ಒಂದೇ ಗ್ರಾಮದ 20 ಕ್ಕೂ ಜನ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ. ಜನವರಿ 15 ರಿಂದ ಗ್ರಾಮದಲ್ಲಿ ಸಾವಿನ ಸಂಖ್ಯೆ ಅಧಿಕವಾಗಿದ್ದು ಗ್ರಾಮಸ್ಥರು ಕಂಗಾಲಾಗಿದ್ದಾರೆ. ಅಲ್ಲದೇ ಗ್ರಾಮದಲ್ಲಿ ಸದ್ಯ 14 ಕ್ಕೂ ಅಧಿಕ ಕ್ಯಾನ್ಸರ್ ಅಕ್ಟೀವ್ ಕೇಸ್​ಗಳಿವೆ. ಕ್ಯಾನ್ಸರ್ ಸೋಂಕಿತರಿಗೆ ಬಳ್ಳಾರಿ, ಬೆಂಗಳೂರು, ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಕ್ಯಾನ್ಸರ್ ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಕಲುಷಿತ ವಾತಾವರಣ ಕಾರಣ ಎನ್ನಲಾಗುತ್ತಿದೆ.

ಪಾರ್ಶ್ವ ವಾಯು, ಟಿಬಿ ಕಾಯಿಲೆಗಳ ಸಂಖ್ಯೆಯೂ ಹೆಚ್ಚಳವಾಗಿದ್ದು 10 ಕ್ಕೂ ಅಧಿಕ ಮಹಿಳೆಯರಿಗೆ ಗರ್ಭಪಾತವೂ ಆಗಿದೆ. ಗ್ರಾಮದ ಸುತ್ತ ಮುತ್ತ ಇರೋ ಸ್ಪಾಂಜ್ ಐರನ್ ಕಾರ್ಖಾನೆಗಳ ವಿಷಯುಕ್ತ ಗಾಳಿಯಿಂದ ಈ ಸಮಸ್ಯೆಗಳಾಗ್ತಿವೆ ಅಂತಾ ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮದ ಒಂದೂವರೆ ಕಿಮೀ ಅಂತರದಲ್ಲಿ 8 ಕ್ಕೂ ಅಧಿಕ ಸ್ಪಾಂಜ್ ಐರನ್ ಕಾರ್ಖಾನೆಗಳಿವೆ. ಇನ್ನು ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

The post ಮೂರೇ ತಿಂಗಳಲ್ಲಿ 20 ಕ್ಕೂ ಹೆಚ್ಚು ಮಂದಿ ಕ್ಯಾನ್ಸರ್​ಗೆ ಬಲಿ.. ಬಳ್ಳಾರಿಯ ಈ ಗ್ರಾಮದಲ್ಲಿ ಆಗ್ತಿರೋದಾದ್ರೂ ಏನು..? appeared first on News First Kannada.

Source: newsfirstlive.com

Source link