ಬೇಕಾಗುವ ಪದಾರ್ಥಗಳು

 • ಮೂಲಂಗಿ- 1
 • ಒಣಗಿದ ಮೆಣಸಿನಕಾಯಿ- 1-2
 • ದನಿಯಾ- 1/4 ಚಮಚ
 • ತೆಂಗಿನ ತುರಿ- 1/4 ಬಟ್ಟಲು
 • ಹುಣಸೆಹಣ್ಣು- ಸ್ವಲ್ಪ
 • ಉಪ್ಪು- ರುಚಿಗೆ ತಕ್ಕಷ್ಟು
 • ಎಣ್ಣೆ- 1 ಚಮಚ
 • ಸಾಸಿವೆ- ಸ್ವಲ್ಪ
 • ಕರಿಬೇವು-ಸ್ವಲ್ಪ

ಮಾಡುವ ವಿಧಾನ…

 • ಮೊದಲು ಮೂಲಂಗಿಯನ್ನು ಚೆನ್ನಾಗಿ ತೊಳೆದು ತುರಿದಿಟ್ಟುಕೊಳ್ಳಿ. ಮಿಕ್ಸಿ ಜಾರ್'ಗೆ ತೆಂಗಿನ ತುರಿ, ಮೆಣಸಿನಕಾಯಿ, ದನಿಯಾ, ಉಪ್ಪು ಹಾಗೂ ಹುಣಸೆಹಣ್ಣು, ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
 • ಬಳಿಕ ಇದೇ ಜಾರ್'ಗೆ ತುರಿದ ಮೂಲಂದಿ ಹಾಕಿ 5 ನಿಮಿಷ ಹಾಕಿ ರುಬ್ಬಿಕೊಳ್ಳಿ. ಬಳಿಕ ರುಬ್ಬಿಕೊಂಡ ಚಟ್ನಿಯನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ.
 • ನಂತರ ಒಂದು ಪ್ಯಾನ್'ಗೆ ಎಣ್ಣೆ, ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಂಡು ಚಟ್ನಿಗೆ ಹಾಕಿದರೆ ರುಚಿಕರವಾದ ಮೂಲಂಗಿ ಚಟ್ನಿ ಸವಿಯಲು ಸಿದ್ಧ.

Kannadaprabha – ಆಹಾರ-ವಿಹಾರ – https://www.kannadaprabha.com/food/
Read More