ಮೂಲ ನಕ್ಷತ್ರದಲ್ಲಿ ಮಗು ಹುಟ್ಟಿದ್ದಕ್ಕೆ ಪತ್ನಿಯನ್ನೇ ತೊರೆದ ಪತಿ, ಈ ಮೂಲ ನಕ್ಷತ್ರ ಅಷ್ಟೊಂದು ಕೆಟ್ಟದ್ದೇ? – A Man quits Wife For Son Born In moola nakshatra, complaint registered In Ramanagara


ಮೂಢನಂಬಿಕೆಗೆ ಜೋತುಬಿದ್ದ ಪತಿರಾಯನೊಬ್ಬ ಕಟ್ಟಿಕೊಂಡ ಹೆಂಡತಿ ಜೊತೆಗೆ ಮುದ್ದಾದ ಮಗುವನ್ನೂ ಸಹ ಮನೆಯಿಂದ ಹೊರಹಾಕಿರುವ ಘಟನೆ ನಡೆದಿದೆ.

ರಾಮನಗರ:  ಮೂಲ ನಕ್ಷತ್ರವು 27 ನಕ್ಷತ್ರಗಳ ಸಾಲಿನಲ್ಲಿ 19ನೇ ನಕ್ಷತ್ರ. ಮೂಲ ನಕ್ಷತ್ರದಲ್ಲಿ ಸ್ತ್ರೀ ಜನನವಾದರೆ ವಿವಾಹ ವಿಳಂಬ. ಮಾವನಿಗೆ ದೋಷವಿದೆ ಎಂಬೆಲ್ಲ ಮಾತುಗಳು ಇವೆ. ಇನ್ನು ಈ ನಕ್ಷತ್ರದಲ್ಲಿ ಗಂಡು ಮಗು ಜನಿಸಿದರೆ ಆರೋಗ್ಯವು ತುಂಬಾ ಸೂಕ್ಷ್ಮವಾಗಿರುತ್ತದೆ. ಹಾಗೇ ಕೆಲ ಪೂಜೆ-ಪುನಸ್ಕಾರಗಲೊಂದಿಗೆ ಮೂಲ ನಕ್ಷತ್ರದ ಪರಿಹಾರವಾಗುವವರೆಗೆ ತಂದೆ ಮಗುವಿನ ಮುಖವನ್ನು ನೋಡಬಾರದು ಎಂದು ನಂಬಲಾಗಿದೆ. ಆದ್ರೆ, ಇಲ್ಲೊಬ್ಬ ತಂದೆ ಮೂಲ ನಕ್ಷತ್ರದಲ್ಲಿ ಮಗು ಹುಟ್ಟಿದ್ದಕ್ಕೆ ಪತ್ನಿಯನ್ನೇ ತೊರೆದಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಹೌದು….ಮೂಲ ನಕ್ಷತ್ರದಲ್ಲಿ ಮಗು ಹುಟ್ಟಿದ್ರೆ ಅಪಶಕುನವೆಂದು ಮೂಢನಂಬಿಕೆ ಜೋತುಬಿದ್ದಿರುವ ಪತಿರಾಯನೊಬ್ಬ ಮಗು, ಪತ್ನಿಯನ್ನು ಹೊರಹಾಕಿದ ಆರೋಪ ಕೇಳಿಬಂದಿದೆ. ಮೂಲ ನಕ್ಷದ ಮಗು ಹುಟ್ಟಿದೋದ್ರಿಂದ ಮನೆಗೆ ತೊಂದರೆ ಆಗುತ್ತೆ ಎಂದು ಪತ್ನಿಯನ್ನು ತೊರೆದಿದ್ದಾನೆ. ಈ ಸಂಬಂಧ ಪತ್ನಿ ತನ್ನ ಪತಿ ವಿರುದ್ಧ ರಾಮನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೂರು ವರ್ಷದ ಹಿಂದೆ ನವೀನ್​-ಶೃತಿ ಮದುವೆ ಆಗಿತ್ತು . 2020, ಜನವರಿ 22ರಂದು ದಂಪತಿಗೆ ಮಗು ಹುಟ್ಟಿತ್ತು. ಮೂಲ ನಕ್ಷತ್ರದಲ್ಲಿ ಮಗು ಹುಟ್ಟಿದ್ದಕ್ಕೆ ನವೀನ್​ ಪತ್ನಿಯನ್ನು ತೊರೆದಿದ್ದಾನೆ. ಅದರ ಜತೆಗೆ ವರದಕ್ಷಿಣೆ ತರುವಂತೆ ಕಿರುಕುಳ, ಹಲ್ಲೆ ಮಾಡಿದ್ದಾರೆ ಎಂದು ಚನ್ನಪಟ್ಟಣದ ಮಂಜುನಾಥ ಬಡಾವಣೆ ನಿವಾಸಿ ಪತಿ ನವೀನ್ ಹಾಗೂ ಕುಟುಂಬಸ್ಥರ ವಿರುದ್ದ ಶೃತಿ ದೂರಿನಲ್ಲಿ ಆರೋಪಿಸಿದ್ದಾಳೆ.

ಮದುವೆ ಆಗಿ ಮೂರುವರೆ ವರ್ಷ ಆಗಿದೆ, ಯತ್ವಿಕ್ ಎರಡೂವರೆ ವರ್ಷದ ಮಗು 22.01-2020 ಮಧ್ಯಾಹ್ನ 12.42 ಮೂಲ ನಕ್ಷತ್ರದಲ್ಲಿ ಜನನವಾಗಿದೆ. ಆದ್ರೆ, ಮೂಲ ನಕ್ಷತ್ರದಲ್ಲಿ ಜನಿಸಿದೆ ಎಂದು ಹುಟ್ಟಿದಾಗಿಲಿನಿಂದ ಮಗು ಬಗ್ಗೆ ನಿರ್ಲಕ್ಷ್ಯ ಮಾಡಿದ್ದಾರೆಂದು ಶೃತಿ ಆರೋಪಿಸಿದ್ದಾಳೆ. ಅಲ್ಲದೇ ಮೂಲ ನಕ್ಷತ್ರದಲ್ಲಿ ಹುಟ್ಟಿರುವ ಮಗುವನ್ನು ಪೆಟ್ರೋಲ್ ಹಾಕಿ ಸುಟ್ಟು ಬಿಡುವಂತೆ ಅತ್ತೆ ಹೇಳಿದ್ದಾರೆ. ಹಿಂದಿನಿಂದಲೂ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ. ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಶೃತಿ ಆರೋಪ ಮಾಡಿದ್ದಾಳೆ.

ಸಮಸ್ಯೆಗೆ ಪರಿಹಾರ ಇದ್ದೇ  ಇರುತ್ತೆ

ಈ ಮೂಲ ನಕ್ಷತ್ರದಲ್ಲಿ ಜನಿಸಿದ ಜನರ ಮೇಲೆ ನೇರ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಋಣಾತ್ಮಕ ಪರಿಣಾಮಗಳನ್ನು ಅಥವಾ ಕೆಲವೊಮ್ಮೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತಾನೆ ಎನ್ನುವುದು ಜ್ಯೋತಿಷ್ಯರ ವಿಶ್ಲೇಷಣೆ. ಇದು ಎಷ್ಟು ಸತ್ಯನೋ ಏನೋ ಗೊತ್ತಿಲ್ಲ. ಆದ್ರೆ, ಒಂದು ಸಮಸ್ಯೆ ಪರಿಹಾರ ಇದ್ದೇ ಇರುತ್ತೆ. ಆ ಪರಿಹಾರ ಕಂಡುಕೊಳ್ಳುವುದು ಒಳಿತು. ಹಾಗೇ ಹೆಂಡ್ತಿಯನ್ನು ತೊರೆದ ಈ ಪತಿರಾಯ ಸಹ ಖ್ಯಾತ ಜ್ಯೋತಿಷ್ಯರ ಬಳಿ ಪರಿಹಾರ ಕೇಳಿಕೊಂಡು ಏನು ಮಾಡಬೇಕು ಅದನೆಲ್ಲ ಮಾಡಬೇಕು.

ಒಟ್ಟಿನಲ್ಲಿ ಮೂಢನಂಬಿಕೆ ಜೋತುಬಿದ್ದ ಪತಿರಾಯನೊಬ್ಬ ಕಟ್ಟಿಕೊಂಡ ಹೆಂಡತಿ ಜೊತೆಗೆ ಮುದ್ದಾದ ಮಗುವನ್ನೂ ಸಹ ಹೊರಹಾಕಿರುವುದು ವಿಪರ್ಯಾಸ.

ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.