ಹಾವೇರಿ: ಜಿಲ್ಲೆಯ ಜಿ್ಲಾಸ್ಪತ್ರೆಯಲ್ಲಿ ಯಡವಟ್ಟೊಂದು ನಡೆದಿದೆ. ಇಲಾಖೆ ಸಿಬ್ಬಂದಿ ಸೋಂಕಿತ ಮೃತ ಮಹಿಳೆಯ ಶವ ಅದಲು ಬದಲು ಮಾಡಿದ್ದಾರೆ. ಹೀಗಾಗಿ ಮೃತ ಮಹಿಳೆಯ ಅಂತ್ಯಕ್ರಿಯೆಯನ್ನ ಬೇರೊಂದು ಸಮುದಾಯದ ಕುಟುಂಬದವರು ಮಾಡಿ ಮುಗಿಸಿದ್ದಾರೆ.

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಘಟನೆ ನಡೆದಿದೆ. ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇದ್ದಕ್ಕಿದ್ದಂತೆ ಗದಿಗೆಮ್ಮ ಕಾಯಕದ ಎಂಬ (64) ವರ್ಷದ ಮಹಿಳೆಯ ಮೃತದೇಹ ಕಾಣೆಯಾಗಿದೆ. ಈಕೆ ನಿನ್ನೆ ರಾತ್ರಿ ಸಾವನ್ನಪ್ಪಿದ್ದರು. ಇಂದು ಶವಗಾರದ ಬಳಿ ನೋಡಿದಾಗ ಮೃತದೇಹ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ನಡೆದಿದ್ದೇನಂದರೆ ಆಸ್ಪತ್ರೆಯ ಸಿಬ್ಬಂದಿ ರೋಜಾನಬಿ ಎಂಬ ಮಹಿಳೆಯ ಮೃತದೇಹದ ಬದಲಿಗೆ ಗದಿಗೆಮ್ಮ ಕಾಯಕದ ಅವರ ಮೃತದೇಹವನ್ನಆಲದಕಟ್ಟಿ ಗ್ರಾಮದವರಿಗೆ ಅಂತ್ಯಕ್ರಿಯೆಗೆ ಕೊಟ್ಟಿದ್ದಾರೆ.

ರೋಜಾನಬಿ ಸಂಬಂಧಿಕರು ತಮಗೆ ಸಿಕ್ಕ ಮೃತದೇಹವನ್ನ ರೋಜಾನಬಿ ಮೃತದೇಹವೆಂದು ತಿಳಿದು ಮುಸ್ಲಿಂ ಸಮುದಾಯದ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ. ಇನ್ನು ಆರೋಗ್ಯ ಇಲಾಖೆ ಸಿಬ್ಬಂದಿಯ ಈ ಯಡವಟ್ಟಿಗೆ ಗದಿಗೆಮ್ಮ ಕಾಯಕದ ಮೃತ ಮಹಿಳೆಯ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನೋಡಲ್ ಅಧಿಕಾರಿ ಎಲ್ ಎಲ್ ರಾಥೋಡ್ ದೌಡಾಯಿಸಿದ್ದಾರೆ. ಈ ವೇಳೆ ಹೂತು ಹಾಕಿರುವ ಮೃತದೇಹವನ್ನ ಹೊರತೆಗೆಯೊದಾಗಿ ಸಿಬ್ಬಂದಿ ಹೇಳಿದ್ದಾರೆ. ಇತ್ತ ನಮ್ಮ ತಾಯಿಗೆ ಅನ್ಯಾಯ ಮಾಡಿದ್ರು ಸರ್..ಇದಕ್ಕೆ ಅರೋಗ್ಯ ಇಲಾಖೆಯೇ ಕಾರಣ ಎಂದು ಮೃತ ಮಹಿಳೆಯ ಮಗ ಶಂಕ್ರು ಕಣ್ಣೀರಿಟ್ಟಿದ್ದಾರೆ. ಹಾವೇರಿ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

The post ಮೃತದೇಹ ಅದಲುಬದಲು.. ಮುಸ್ಲಿಂ ಕುಟುಂಬದಿಂದ ಹಿಂದೂ ಮೃತ ಮಹಿಳೆಯ ಅಂತ್ಯಸಂಸ್ಕಾರ appeared first on News First Kannada.

Source: newsfirstlive.com

Source link