ಮೈಸೂರು: ಮಿಷನ್ ಆಸ್ಪತ್ರೆ ಮುಂದೆ ಮೃತ ರೋಗಿಯೋರ್ವನ ಸಂಬಂಧಿಕರು ಕಲ್ಲುಗಳ ರಾಶಿ ಹಾಕಿ ಕಲ್ಲು ತೂರೋದಾಗಿ ಬೆದರಿಕೆ ಹಾಕಿದ ಘಟನೆ ನಡೆದಿದೆ.

ಕೊರೊನಾದಿಂದ ಸೋಂಕಿತನೋರ್ವ ಸಾವನ್ನಪ್ಪಿದ್ದು ಮೃತದೇಹ ನೀಡಲು ಹಣ ಕೇಳುತ್ತಿದ್ದಾರೆಂದು ಆರೋಪಿಸಿರುವ ಮೃತ ರೋಗಿಯ ಸಂಬಂಧಿಕರು ಹಣ ನೀಡಲು ನಿರಾಕರಿಸಿದ್ದಾರೆ. ಅಲ್ಲದೇ ಆಸ್ಪತ್ರೆಗೆ ಗೇಟ್​ಗೆ ಕಾಲಿನಿಂದ ಒದ್ದು, ಕಲ್ಲು ತೂರುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಮಂಡಿ ಪೊಲೀಸರು ಆಗಮಿಸಿದ್ದಾರೆ.

ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಹೆಸರು ವಾಜೀದ್ ಪಾಷ ಎನ್ನಲಾಗಿದ್ದು ಈತ ಮೈಸೂರಿನ ಗೌಸಿಯಾ ನಗರದ ನಿವಾಸಿ ಎಂದು ಹೇಳಲಾಗಿದೆ. ಕಳೆದ ಒಂದು ವಾರದ ಹಿಂದೆ ಕೊರೊನಾ ಸೋಂಕಿತ ಮಿಷನ್ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಿಸದೆ ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ನಾವು ಬಡವರು ಸರ್, ಇಷ್ಟೊಂದು ದುಡ್ ನಾವೆಲ್ಲಿಂದ ತರೋದು.. ಆಸ್ಪತ್ರೆಯವ್ರು ಎಲ್ರನ್ನೂ ಸಾಯಿಸ್ತಿದ್ದಾರೆ. ಇಲ್ಲಿ ಯಾವ ಚಿಕಿತ್ಸೆನೂ ಕೊಡಲ್ಲ. ಈ ಆಸ್ಪತ್ರೆಯವ್ರು, ಸರ್ಕಾರದವ್ರು ಎಲ್ರೂ ಹಣ ಮಾಡೋಕೆ ಈ ತರಾ ಮಾಡ್ತಿದ್ದಾರೆ. ಕೊರೊನಾ ಪಾಸಿಟಿವ್ ಅಂತಾ ಹೇಳಿದ್ರು, ಈಗ ನಮ್ಮ ಹುಡುಗ ಸತ್ತೋಗಿದ್ದಾನೆ ಎಂದು ಮೃತನ ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ.

The post ಮೃತದೇಹ ನೀಡಲು ಹಣಕ್ಕೆ ಡಿಮ್ಯಾಂಡ್.. ಆಸ್ಪತ್ರೆಗೆ ಕಲ್ಲು ತೂರುತ್ತೇವೆಂದ ಸಂಬಂಧಿಕರು appeared first on News First Kannada.

Source: newsfirstlive.com

Source link