ಬೆಂಗಳೂರು: ಭಾರತ್ ಎಲೆಕ್ಟ್ರಾನಿಕ್ಸ್​​ ಲಿಮಿಟೆಡ್ (ಬಿಇಎಲ್​​) ಸಂಸ್ಥೆಯು ಮೃತ ಉದ್ಯೋಗಿಗಳ ಕುಟುಂಬಗಳಿಗೆ ಹಣಕಾಸು, ವೈದ್ಯಕೀಯ, ಶಿಕ್ಷಣ ಮತ್ತು ವೃತ್ತಿಪರ ತರಬೇತಿಯನ್ನು ನೀಡಲು ಹೊಸ ಯೋಜನೆ ಘೋಷಣೆ ಮಾಡಿದೆ.

ಭಾರತ ಎಲೆಕ್ಟ್ರಾನಿಕ್ಸ್​​ ಸ್ಕೀಮ್​ ಫಾರ್​ ಅಸಿಸ್ಟನ್ಸ್​ ಟು ಫ್ಯಾಮಿಲಿ ಆಫ್ ಡಿಸೀಸ್ಡ್​​​ ಎಂಪ್ಲಾಯಿಸ್ -ಬಿಇಎಸ್​ಎಎಫ್​​ಇ ಅಂದರೆ ಮೃತ ಉದ್ಯೋಗಿಗಳ ಪತಿ ಅಥವಾ ಪತ್ನಿ/ ಮಕ್ಕಳ ಜೀವನೋದ್ದಾರಕ್ಕೆ ಬೇಕಾದ ತರಬೇತಿ, ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿಗೆ ಬೆಂಬಲ ನೀಡುವುದಾಗಿದೆ. ಜೊತೆಗೆ ಕುಟುಂಬ ನಿರ್ವಹಿಸಲು ಮಾಸಿಕ ಹಣಕಾಸಿನ ಪಾವತಿಯನ್ನು ಕೂಡ ಮಾಡುವ ಉದ್ದೇಶವನ್ನ ಹೊಂದಿದೆ. ಈ ಯೋಜನೆಯಡಿ ಹಿತಲಾಭವು 1ನೇ ಏಪ್ರಿಲ್ 2021 ಅಥವಾ ತದನಂತರ ಕೋವಿಡ್​ನಿಂದ ಮತ್ತು ಕೋವಿಡ್ ಅಲ್ಲದ ಮೃತಪಟ್ಟ ಉದ್ಯೋಗಿಗಳ ಕುಟುಂಬಗಳಿಗ ಅನ್ವಿಸುತ್ತದೆ.

ಸಂಕಷ್ಟಕ್ಕೆ ಸ್ಪಂದಿಸಿದ ಬಿಇಎಲ್
ಕೋವಿಡ್ 19 ಎರಡನೇ ಅಲೆಯ ಮಾರಣಾಂತಿಕವಾಗಿದೆ. ಕೋವಿಡ್ ಪ್ರಕರಣಗಳು ಕಲ್ಪನೆಗೂ ಮೀರಿ ಉದ್ಭವಗೊಂಡು ಕಂಪನಿಯಲ್ಲಿ ಹೆಚ್ಚು ಸಾವು-ನೋವನ್ನ ಉಂಟುಮಾಡಿದೆ. ಅಕಾಲ ಮೃತ್ಯು, ಮಹಾಮಾರಿ ರೋಗಕ್ಕೆ ಸಂಬಂಧವಲ್ಲದ್ದೂ ಕೂಡ ವರದಿಯಾಗಿದೆ. ಆದ್ದರಿಂದ ಬಿಇಎಲ್​​ ಆಡಳಿತ ವರ್ಗವು ಈ ಮೃತ ಉದ್ಯೋಗಿಗಳ ಕುಟುಂಬಗಳು ಎದುರಿಸುವ ಕಷ್ಟದ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿ ಅವರಿಗೆ ಸಹಾಯ ಮಾಡುವುದಲ್ಲದೇ ಜೀವನವನ್ನು ಕಟ್ಟಿಕೊಳ್ಳಲು ಕೂಡ ಒಂದು ಹೆಜ್ಜೆ ಮುಂದೆ ಹೋಗಲು ನಿರ್ಧರಿಸಿದೆ ಎಂದು ಬಿಇಎಲ್​ ನಿರ್ದೇಶಕರು (ಮಾ.ಸಂ) ಕುಮಾರನ್ ಕೆಎಂ ತಿಳಿಸಿದ್ದಾರೆ.

ಬಿಇಎಸ್​ಎಎಫ್​ಇ ಅಡಿಯಲ್ಲಿ ನೀಡುತ್ತಿರುವ ಹಣಕಾಸಿನ ನೆರವು ಮೃತ ಉದ್ಯೋಗಿಗಳು ಕೊನೆಯದಾಗಿ ಪಡೆದ ಮೂಲ ವೇತನ ಜೊತೆಗೆ ತುಟ್ಟಿ ಭತ್ಯೆಯ ಶೇಕಡ 50 ರಷ್ಟಿಗೆ ಸಮನಾದ ಎಕ್ಸ್​ಗ್ರೇಷಿಯಾ ಪಾವತಿಯನ್ನು ಮರಣ ಹೊಂದಿದ ದಿನಾಂಕದಿಂದ ನೀವೃತ್ತರಾಗುವವರೆಗೆ ಅಥವಾ ಐದು ವರ್ಷಗಳ ಅವಧಿಗೆ ಇದರಲ್ಲಿ ಯಾವುದೇ ಪತಿ ಅಥವಾ ಪತ್ನಿ / ಮಕ್ಕಳು/ ಪೋಷಕರಿಗೆ ಮಾಸಿಕ ಕಂತಿನಲ್ಲಿ ಪಾವತಿಸಲಾಗುವುದು.

ವೈದ್ಯಕೀಯ ವಿಮೆ
ಮರಣ ಹೊಂದಿದ ದಿನಾಂಕದಂದು 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದಂತ ಮೃತಪಟ್ಟ ಉದ್ಯೋಗಿಗಳ ಪತಿ ಅಥವಾ ಪತ್ನಿಯು ಭಾರತ್ ಎಲೆಕ್ಟ್ರಾನಿಕ್ಸ್​ ನಿವೃತ್ತ ಉದ್ಯೋಗಿಗಳ ವಂತಿಗೆ ಆರೋಗ್ಯ ಯೋಜನೆಯ ವ್ಯಾಪ್ತಿಯಲ್ಲಿ ಒಳಪಡುತ್ತಾರೆ.
ಘೋಷಿತ ಅವಲಂಬಿತ ಪೋಷಕರು ಮತ್ತು ಅಥವಾ ಮಕ್ಕಳು ರೂಪಾಯಿ 5 ಲಕ್ಷಗಳು ಪ್ರತಿ ವರ್ಷಕ್ಕೆ ಐದು ವರ್ಷಗಳ ಅವಧಿಗೆ ಒಳ ರೋಗಿ ಚಿಕಿತ್ಸೆಯನ್ನ ಪಡೆಯಲು ವೈದ್ಯಕೀಯ ವಿಮೆ ವ್ಯಾಪ್ತಿಯನ್ನು ಪಡೆದುಕೊಳ್ಳಬಹುದಾಗಿದೆ.

1 ಲಕ್ಷ ಪಾವತಿ
ಈ ಯೋಜನೆಯು ಮೃತ ಉದ್ಯೋಗಿಗಳ ಮಕ್ಕಳಿಗೆ ಪ್ರಾಥಮಿಕ ಹಂತದಿಂದ ವಿದ್ಯಾಭಾಸ ಪಡೆಯುವುದಕ್ಕಾಗಿ ವಾರ್ಷಿಕ 25 ಸಾವಿರದಿಂದ 40 ಸಾವಿರವರೆಗೆ ಪ್ರತಿ ಮಗುವಿಗೆ ವಿದ್ಯಾಭಾಸ್ಯ ಶುಲ್ಕವನ್ನ ಮರುಪಾವತಿಸುವ ಅವಕಾಶವನ್ನ ಕಲ್ಪಿಸಿದೆ. ವೃತ್ತಿಪರ ಅಧ್ಯಯನಗಳಾದ ಬಿಇ, ಬಿಟೆಕ್ ಎಂಬಿಬಿಎಸ್ ಇತ್ಯಾದಿಗಳಿಗೆ ಒಂದು ಮಗುವಿಗೆ ವಾರ್ಷಿಕ 1 ಲಕ್ಷ ರೂಪಾಯಿ ಪಾವತಿಸಲಾಗುತ್ತದೆ. ವಿಕಲಚೇತನ ಮಕ್ಕಳಿಗೆ ವಿದ್ಯಾಭ್ಯಾಸದ ಅವಧಿಯಲ್ಲಿ ವರ್ಷಕ್ಕೆ 25 000 ನೀಡಲಾಗುವುದು ಬಿಇಲೆ್​ ಸಂಸ್ಥೆಯಲ್ಲಿ ಓದುತ್ತಿರುವ ಮೃತ ಉದ್ಯೋಗಿಗಳ ಮಕ್ಕಳಿಗೆ ಪದವಿ ತನಕ ಶುಲ್ಕವಾಗಿ ವಿದಯ್ಭ್ಯಾಸ ಒದಗಿಸಲಾಗುವುದು.

ಇದನ್ನೂ ಓದಿ: ಕೊರೊನಾ ಸಂಕಷ್ಟದಲ್ಲಿ ನೌಕರರ ಬೆನ್ನಿಗೆ ನಿಂತ BEL; ಶೇ.90 ರಷ್ಟು ವ್ಯಾಕ್ಸಿನೇಷನ್

ವಿಕಲಚೇತನ ಮಕ್ಕಳಿಗೆ ಅವರ ವಿದ್ಯಾಭ್ಯಾಸದ ಅವಧಿಯಲ್ಲಿ ವರ್ಷಕ್ಕೆ ರೂಪಾಯಿ 25 ಸಾವಿರ ನೀಡಲಾಗುವುದು. ಬಿಇಎಲ್ ಸಂಸ್ಥೆಯಲ್ಲಿ ಓದುತ್ತಿರುವ ಮೃತ ಉದ್ಯೋಗಿಗಳ ಮಕ್ಕಳಿಗೆ ಪದವಿ ತನಕ ಶುಲ್ಕವಾಗಿ ವಿದ್ಯಾಭ್ಯಾಸ ಒದಗಿಸಲಾಗುವುದು. ಮೃತ ಉದ್ಯೋಗಿಗಳ ಪತಿ / ಪತ್ನಿ ಹಾಗೂ ಮಕ್ಕಳಿಗೆ ಉದ್ಯೋಗ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೌಶಲ ವಿಕಾಸ ಪಠ್ಯಕ್ರಮಗಳಿಗೆ ರೂ 50 ಸಾವಿರ ಮರು ಪಾವತಿಸಲಾಗುವುದು. ಮೃತ ಉದ್ಯೋಗಿಗಳ ಕಟುಂಬವು ಒದು ವರ್ಷದ ಅವಧಿಗೆ ಕಂಪನಿಯ ಕ್ವಾರ್ಟಸ್​​ನಲ್ಲಿ ನಿವಾಸ ಮಾಡಲು ಅನುಮತಿ ನೀಡಲಿದೆ.

ಇದನ್ನೂ ಓದಿ: BEL ಸಂಸ್ಥೆಯಿಂದ ಸಮರೋಪಾದಿಯಲ್ಲಿ ವ್ಯಾಕ್ಸಿನೇಷನ್​: ಡಿವಿಎಸ್, ಕೃಷ್ಣ ಭೈರೇಗೌಡ ಶ್ಲಾಘನೆ

The post ಮೃತ ಉದ್ಯೋಗಿಗಳ ಕುಟುಂಬದ ಜೀವನೋದ್ದಾರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿದ BEL appeared first on News First Kannada.

Source: newsfirstlive.com

Source link