ಬಾಗಲಕೋಟೆ: ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ನೇಕಾರ ಷಣ್ಮುಖ ಮುರಗುಂಡಿ ಅವರ ಮನೆಗೆ ಮಾಜಿ ಸಚಿವೆ ಉಮಾಶ್ರಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಜೊತೆಗೆ 10 ಸಾವಿರ ರೂಪಾಯಿ ಆರ್ಥಿಕ ಸಹಾಯ ಮಾಡಿದರು.

ಮಂಗಳವಾರದಂದು ನೇಕಾರ ಷಣ್ಮುಖ ಸಾಲಬಾಧೆ ತಾಳಲಾರದೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಮನೆಗೆ ಭೇಟಿ ನೀಡಿದ ಉಮಾಶ್ರೀ ಸರ್ಕಾರ ನೇಕಾರರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಕೋವಿಡ್ ಹಿನ್ನೆಲೆ ನೇಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆ ಕಾರಣ ಅವರ ಸಾಲದ ಬಡ್ಡಿ ಮನ್ನಾ ಮಾಡಬೇಕು, ವಿದ್ಯುತ್ ಬಿಲ್ ಮನ್ನಾ ಮಾಡಬೇಕೆಂದು ಆಗ್ರಹ ಮಾಡಿದರು.

The post ಮೃತ ನೇಕಾರನ ಮನೆಗೆ ಉಮಾಶ್ರೀ ಭೇಟಿ, ₹10 ಸಾವಿರ ಪರಿಹಾರ ವಿತರಣೆ appeared first on News First Kannada.

Source: newsfirstlive.com

Source link