ಮೃತ ಪತಿಯ ಹೆಸರಲ್ಲಿ ₹3 ಕೋಟಿ ವಂಚನೆ ಕೇಸ್​; ಆರೋಪಿ ಮಹಿಳೆಗೆ ಮತ್ತೊಂದು ಶಾಕ್


ಇದಬೆಂಗಳೂರು: ಮೃತ ಗಂಡನ ನಕಲಿ ದಾಖಲೆ ನೀಡಿ ಮೂರು ಕೋಟಿ ವಿಮೆ ಕ್ಲೈಮ್ ಮಾಡಿಕೊಂಡ ಪತ್ನಿ ವಿರುದ್ಧ ಇನ್ಶ್ಯೂರೆನ್ಸ್​​ ಕಂಪನಿ ದೂರು ನೀಡಿದ್ದ ಬಗ್ಗೆ ಹಿಂದೆ ನ್ಯೂಸ್​ಫಸ್ಟ್​ ವರದಿ ಮಾಡಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತುಂದು ವಿಷಯ ತಿಳಿದು ಬಂದಿದೆ.

ಮೃತ ಕೃಷ್ಣ ಪ್ರಸಾದ್ ಗಾರಲಪಟ್ಟಿ ಎಂಬುವವರು ಟಾಟಾ ಎಐಎ ಲೈಫ್​ ಇನ್ಶ್ಯೂರೆನ್ಸ್ ಕಂಪನಿಯಲ್ಲಿ ವರ್ಷಕ್ಕೆ 51,777 ರೂಗಳನ್ನು ಕಟ್ಟುವ ಪಾಲಿಸಿ ಪಡೆದಿದ್ದರು. ಆದರೆ ಮೂರು ವರ್ಷ ಪಾಲಿಸಿ ಕಟ್ಟುವ ಮುನ್ನವೇ ಸುಪ್ರಿಯಾ ಪತಿ ಮೃತಪಟ್ಟಿದ್ದರು. ಹೆಂಡತಿ ಸುಪ್ರಿಯಾರನ್ನ ನಾಮಿನಿ‌ ಮಾಡಿದ್ದ ಕಾರಣ, ಅದನ್ನೇ ದುರುಪಯೋಗ ಪಡಿಸಿಕೊಂಡ ಪತ್ನಿ ತನ್ನ ಗಂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅನ್​ಲೈನ್​ ಮೂಲಕ ವಿಮೆ ಹಣಕ್ಕಾಗಿ ಕ್ಲೈಮ್ ಮಾಡಿ 3 ಕೋಟಿ ಹಣವನ್ನು ಪಡೆದಿದ್ದರು.

ಸುಪ್ರಿಯಾ ಅಕೌಂಟ್ ಫ್ರೀಜ್
ಸುಳ್ಳು ಮಾಹಿತಿ ಹಾಗೂ ನಕಲಿ ದಾಖಲೆ ನೀಡಿ 3 ಕೋಟಿ ಕ್ಲೈಮ್ ಮಾಡಿದ್ದಾರೆ ಎಂಬುದು ಇನ್ಶ್ಯೂರೆನ್ಸ್​ ಕಂಪನಿಗೆ ತಡವಾಗಿ ತಿಳಿದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಮೃತನ ಪತ್ನಿಯ ವಿರುದ್ಧ ಇನ್ಶ್ಯೂರೆನ್ಸ್​ ಕಂಪನಿ ಕೋರಮಂಗಲ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಕುರಿತು ತನಿಖೆ ಚುರುಕುಗೊಳಿಸಿರುವ ಕೋರಮಂಗಲ ಪೊಲೀಸರು, ಸದ್ಯ ಆರೋಪಿತೆ ಅಕೌಂಟ್​​​ನಲ್ಲಿರುವ ಹಣವನ್ನು ಫ್ರೀಜ್​ ಮಾಡಿದ್ದಾರೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಇನ್ಶ್ಯೂರೆನ್ಸ್​ ಕಂಪನಿಯಿಂದ ಪಡೆದಿದ್ದ ಮೂರು ಕೋಟಿ ಹಣದ ಪೈಕಿ ಇದುವರೆಗೆ ಸುಮಾರು 45 ಲಕ್ಷ ಹಣವನ್ನು ಸುಪ್ರಿಯಾ ಡ್ರಾ ಮಾಡಿರುವುದು ತಿಳಿದು ಬಂದಿದೆ. ಮೂರು ಕೋಟಿ ಹಣದ ಪೈಕಿ, ಸುಪ್ರಿಯಾಳ HDFC ಅಕೌಂಟ್ ನಿಂದ 2.55 ಕೋಟಿ ಹಣವನ್ನು ಫ್ರೀಜ್ ಮಾಡಲಾಗಿದೆ. ಹೆಚ್ಚಿನ ಹಣ ಆರೋಪಿತೆಯ ಕೈಗೆ ಸಿಗದ ರೀತಿ ತಡೆಯಲೆಂದೇ ಪೊಲೀಸರು ಸುಪ್ರಿಯಾಳ ಅಕೌಂಟ್​ ಫ್ರೀಜ್ ಮಾಡಿದ್ದಾರೆ.

News First Live Kannada


Leave a Reply

Your email address will not be published.