ಚಿಕ್ಕಮಗಳೂರು: ಭೀಕರ ರಸ್ತೆ ಅಪಘಾತದಲ್ಲಿ ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ (6) ನಿನ್ನೆ ಸಾವನ್ನಪ್ಪಿದ್ದಾರೆ. ಈ ಮುಗ್ಧ ಕಂದನ ಸಾವಿನ ವಿಷಯವನ್ನು ಇನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಕಿರುತರೆ ರಿಯಾಲಿಟಿ ಶೋ ಸಮನ್ವಿ ನಿಧನದ ಹಿನ್ನೆಲೆಯಲ್ಲಿ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅರಣ್ಯ ಇಲಾಖೆಯ ಸ್ಥಳ ಜಿಂಕೆ ವನದಲ್ಲಿ ಸಸಿ ನೆಡಲಾಗಿದೆ. ಕೆಎಫ್ಡಿಸಿ ಅಧ್ಯಕ್ಷೆ ಹಾಗೂ ರಿಯಾಲಿಟಿ ಶೋನಾ ಮುಖ್ಯ ತೀರ್ಪುಗಾರರಾಗಿರುವ ನಟಿ ತಾರಾ ಸಮನ್ವಿ ಹೆಸರಲ್ಲಿ ಸಸಿ ನೆಟ್ಟಿದ್ದಾರೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ತಾರಾಗೆ ಸಾಥ್ ನೀಡಿದ್ದಾರೆ.
ಸಮನ್ವಿ ಸಾವಿನ ನೋವನ್ನು ನ್ಯೂಸ್ ಫಸ್ಟ್ ಜೊತೆಗೆ ಹಂಚಿಕೊಂಡ ತಾರಾ ಪುಟ್ಟ ಕಂದನನ್ನು ನೆನೆದು ಕಣ್ಣೀರಿಟ್ಟಿದ್ದಾರೆ.