ಚಾಮರಾಜನಗರ: ಮೃತ ಕೊರೊನಾ ಸೋಂಕಿತೆಯ ಕುಟುಂಬಸ್ಥರು ಶವ ಇಟ್ಟುಕೊಂಡು ಅಂತ್ಯಸಂಸ್ಕಾರಕ್ಕೆ ಗಂಟೆಗಟ್ಟಲೆ ಕಾದ ಘಟನೆ ಜಿಲ್ಲೆಯ ಜ್ಯೋತಿಗೌಡನಪುರದಲ್ಲಿ ನಡೆದಿದೆ.

ಕೊರೊನಾ ಪಾಸಿಟಿವ್ ಆಗಿದ್ದ ಜ್ಯೋತಿಗೌಡನಪುರದ ನಾಗಮ್ಮ ಎಂಬವರಿಗೆ ಕಿಡ್ನಿ ವೈಫಲ್ಯ ಉಂಟಾಗಿತ್ತು. ಅವರನ್ನ ಮೈಸೂರಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದರು. ಈ ವೇಳೆ, ಮನೆಯವರ ಕೋರಿಕೆ ಮೇರಿಗೆ ಮೃತ ಸೋಂಕಿತೆಯ ಶವವನ್ನ ವಾಪಸ್ ತೋಟದ ಮನೆಗೆ ಆ್ಯಂಬುಲೆನ್ಸ್​ ಚಾಲಕ ತಂದಿಟ್ಟು ಹೋಗಿದ್ದಾರೆ.

ತೋಟದ ಮನೆಗೆ ಮೃತದೇಹ ತರಲಾಗಿದೆ ಅನ್ನೋ ಬಗ್ಗೆ ಗ್ರಾಮಸ್ಥರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಂತ್ಯಸಂಸ್ಕಾರಕ್ಕೆ ಯಾರೂ ಇಲ್ಲದೆ ಕುಟುಂಬದವರು ಪರದಾಟ ನಡೆಸಿದ್ರು. ಬಳಿಕ ಸ್ವಯಂ ಸೇವಕರ ನೆರವಿನಿಂದ ಅಂತ್ಯಸಂಸ್ಕಾರಕ್ಕೆ ಕ್ರಮ ಮಾಡಲಾಗಿದೆ.

The post ಮೃತ ಸೋಂಕಿತೆಯ ಶವ ಇಟ್ಟುಕೊಂಡು ಗಂಟೆಗಟ್ಟಲೆ ಕಾದ ಕುಟುಂಬಸ್ಥರು appeared first on News First Kannada.

Source: newsfirstlive.com

Source link