ಬೆಂಗಳೂರು: ನಟ ಚಾಲೆಂಜಿಂಗ್ ದರ್ಶನ್​​​​ ವಿರುದ್ಧ ನಿರ್ದೇಶಕ ಇಂದ್ರಜಿತ್​​ ಲಂಕೇಶ್​​ ಮತ್ತೊಮ್ಮೆ ಕಿಡಿಕಾರಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಇಂದ್ರಜಿತ್​​ ಲಂಕೇಶ್​​, ಕೊಚ್ಚೆಗೆ ಕಲ್ಲು ಎಸೆಯೋಕೆ ಇಷ್ಟ ಇಲ್ಲ ಎಂದು ಹೇಳಿದ್ದಾರೆ.

ನಾನು ವಕೀಲರ ಮೂಲಕ ಎಲ್ಲವನ್ನು ಎದುರಿಸುತ್ತೇನೆ. ದರ್ಶನ್​​ ಸಂಬಂಧಿಸಿದ ಆಡಿಯೋ ಎಲ್ಲಿ ಕೊಡಬೇಕೋ ಅಲ್ಲಿ ಕೊಡ್ತೀನಿ. ಮೆಂಟಲೀ ಡಿಸ್ಟರ್ಬ್​ ಆಗಿರೋ ದರ್ಶನ್​​ ಚಿಕಿತ್ಸೆ ತೆಗೆದುಕೊಳ್ಳೋದು ಉತ್ತಮ ಎಂದು ಇಂದ್ರಜಿತ್​ ಲಂಕೇಶ್ ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ‘ದರ್ಶನ್ ಹೀರೋಯಿಸಂನ್ನ ಸಿನಿಮಾಗಳಲ್ಲಿ ಇಟ್ಟುಕೊಳ್ಳಲಿ’.. ದರ್ಶನ್ ಸವಾಲ್​ಗೆ ಇಂದ್ರಜಿತ್ ಉತ್ತರ

ದರ್ಶನ್​​ ಅವರೇ ನಾನು ಮೂರು ಬಿಟ್ಟವನು ಎಂದು ಹೇಳಿಕೊಂಡಿದ್ದಾರೆ. ಮೂರು ಬಿಟ್ಟವರ ಹತ್ತಿರ ನಾನೇನು ಮಾತಾಡೋದು. ನಾನು ಕಾನೂನಾತ್ಮಕ ಹೋರಾಟ ಮಾಡ್ತೀನಿ. ಇವರ ಬಗ್ಗೆ ಒಂದಲ್ಲ ಎರಡಲ್ಲ ಸಾಕಷ್ಟು ಉದಾಹರಣೆಗಳು ನನ್ನ ಬಳಿ ಇವೆ ಎಂದು ದರ್ಶನ್​​ ವಿರುದ್ಧ ಕೌಂಟರ್ ಅಟ್ಯಾಂಕ್ ಮಾಡಿದರು.​​

The post ‘ಮೆಂಟಲೀ ಡಿಸ್ಟರ್ಬ್​ ಆಗಿರೋ ದರ್ಶನ್​​ ಚಿಕಿತ್ಸೆ ತೆಗೆದುಕೊಳ್ಳೋದು ಉತ್ತಮ’ ಮತ್ತೆ ಇಂದ್ರಜಿತ್​ ಕಿಡಿ appeared first on News First Kannada.

Source: newsfirstlive.com

Source link