ಮೆಂಥಾಲ್ ಪ್ಲಸ್ ಕ್ಯಾಪ್​ ನುಂಗಿದ ಮಗು.. ಹೊರತೆಗೆದಿದ್ದು ಹೇಗೆ ಗೊತ್ತಾ..?

ಮೆಂಥಾಲ್ ಪ್ಲಸ್ ಕ್ಯಾಪ್​ ನುಂಗಿದ ಮಗು.. ಹೊರತೆಗೆದಿದ್ದು ಹೇಗೆ ಗೊತ್ತಾ..?

ಕೊಪ್ಪಳ: ಮೆಂಥಾಲ್ ಪ್ಲಸ್ ಕ್ಯಾಪ್ ನುಂಗಿ ಮಗು ಸಾವು-ಬದುಕಿನ ನಡುವೆ ಒದ್ದಾಡಿದ ಘಟನೆ ಜಿಲ್ಲೆಯ ಯಲಬುರ್ಗಾದ ಬೇವೂರಿನ ಹುಣಿಸಿಹಾಳ ಗ್ರಾಮದಲ್ಲಿ ನಡೆದಿದೆ.

ನಿಂಗಪ್ಪ ಹಾಗೂ ಅಕ್ಕಮ್ಮ ದಂಪತಿಗಳ ಮಗು ಮಹಾಂತೇಶ್ ಬೆಳಿಗ್ಗೆ ಆಟವಾಡುವಾಗ ಕ್ಯಾಪ್ ನುಂಗಿತ್ತು. ಇದರಿಂದ ಪರದಾಡುತ್ತಾ ಜೋರಾಗಿ ಅಳುತ್ತಿತ್ತು, ಹೊಲದ ಕೆಲಸದಿಂದ ಮನೆಗೆ ಬಂದ ತಂದೆ ನಿಂಗಪ್ಪ ಮಗುವನ್ನ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಕೂಡಲೇ ದಾಖಲಿಸಿಕೊಂಡ ಇಎನ್​ಟಿ ತಜ್ಞ ಮಲ್ಲಿಕಾರ್ಜುನ ಕ್ಯಾಪ್​ನ್ನ ಲ್ಯಾರಿಂಗೋಸ್ಕೋಪ್ ಮಾಡಿ ಫಾರಸೆಪ್ಸ್ ವಿಧಾನದಿಂದ ಹೊರತೆಗೆದು ಮಗುವಿನ ಜೀವ ಉಳಿಸಿದ್ದಾರೆ.

The post ಮೆಂಥಾಲ್ ಪ್ಲಸ್ ಕ್ಯಾಪ್​ ನುಂಗಿದ ಮಗು.. ಹೊರತೆಗೆದಿದ್ದು ಹೇಗೆ ಗೊತ್ತಾ..? appeared first on News First Kannada.

Source: newsfirstlive.com

Source link