ಮೆಕ್ಸಿಕೋದಲ್ಲಿ ತೀರ್ಥಯಾತ್ರೆಯ ಬಸ್​ ಅಪಘಾತ; 9 ಭಕ್ತರು ಸಾವು, 40 ಜನರಿಗೆ ಗಾಯ | Accident: 9 Dead and 40 Injured In Mexico Pilgrimage Bus Crash


ಮೆಕ್ಸಿಕೋದಲ್ಲಿ ತೀರ್ಥಯಾತ್ರೆಯ ಬಸ್​ ಅಪಘಾತ; 9 ಭಕ್ತರು ಸಾವು, 40 ಜನರಿಗೆ ಗಾಯ

ಮೆಕ್ಸಿಕೋದಲ್ಲಿ ಬಸ್ ಅಪಘಾತ

Image Credit source: Times of India

ದಕ್ಷಿಣ ಮೆಕ್ಸಿಕೋದಲ್ಲಿ ಧಾರ್ಮಿಕ ಯಾತ್ರೆಗೆ ಜನರನ್ನು ಕೊಂಡೊಯ್ಯುತ್ತಿದ್ದ ಬಸ್ ಪಲ್ಟಿಯಾದ ಪರಿಣಾಮವಾಗಿ ಸುಮಾರು 9 ಜನರು ಸಾವನ್ನಪ್ಪಿದ್ದಾರೆ.

ಮೆಕ್ಸಿಕೋ ಸಿಟಿ: ಧಾರ್ಮಿಕ ಯಾತ್ರೆಗೆ ಪ್ರಯಾಣಿಸುತ್ತಿದ್ದ ಬಸ್​ (Bus Accident) ಒಂದು ಇದ್ದಕ್ಕಿದ್ದಂತೆ ಅಪಘಾತಕ್ಕೀಡಾದ ಆಘಾತಕಾರಿ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ದಕ್ಷಿಣ ಮೆಕ್ಸಿಕೋದಲ್ಲಿ (southern Mexico) ಧಾರ್ಮಿಕ ಯಾತ್ರೆಗೆ ಜನರನ್ನು ಕೊಂಡೊಯ್ಯುತ್ತಿದ್ದ ಬಸ್ ಪಲ್ಟಿಯಾದ ಪರಿಣಾಮವಾಗಿ ಸುಮಾರು 9 ಜನರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ 40 ಮಂದಿ ಗಾಯಗೊಂಡಿದ್ದಾರೆ.

ತಿಲಾ ಟೌನ್‌ಶಿಪ್‌ನಲ್ಲಿ ಶುಕ್ರವಾರ ಬೆಳಗಿನ ಜಾವ ಈ ಅಪಘಾತ ಸಂಭವಿಸಿದೆ ಎಂದು ದಕ್ಷಿಣ ರಾಜ್ಯ ಚಿಯಾಪಾಸ್‌ನಲ್ಲಿರುವ ನಾಗರಿಕ ರಕ್ಷಣಾ ಕಚೇರಿ ತಿಳಿಸಿದೆ. ಬಸ್​ನಲ್ಲಿದ್ದ ಪ್ರಯಾಣಿಕರು ಫೀಸ್ಟ್ ಆಫ್ ಕಾರ್ಪಸ್ ಕ್ರಿಸ್ಟಿ ಎಂಬ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರು ತಬಾಸ್ಕೊದಲ್ಲಿರುವ ತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದಾಗ ಬಸ್ ಪಲ್ಟಿಯಾಗಿದೆ.

TV9 Kannada


Leave a Reply

Your email address will not be published.