ಮೆಗಸ್ಟಾರ್​ಗೂ ‘ರಶ್ಮಿ’ ಮೇಲೆ ಕಣ್ಣು.. ಚಿರಂಜೀವಿ ಸಿನಿಮಾದಲ್ಲಿ ಕುಣಿಯೋಕೆ ಅವ್ರು ರೆಡಿ..!

ಟಾಲಿವುಡ್​ ಮೆಗಾಸ್ಟಾರ್​ ಚಿರಂಜೀವಿ ನಟನೆಯ ‘ಭೋಲಾಶಂಕರ್’​ ಸಿನಿಮಾ ದಿನಕ್ಕೊಂದು ವಿಷಯವಾಗಿ ಸದ್ದು ಮಾಡುತ್ತಲೇ ಇದೆ. ”ಭೋಲಾಶಂಕರ್” ಸಿನಿಮಾಗಾಗಿ ಚಿರಂಜೀವಿ ತಂಗಿ ಪಾತ್ರದಲ್ಲಿ ಕೀರ್ತಿ ಸುರೇಶ್​ ನಟಿಸುತ್ತಿರುವ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಇದಾದ ನಂತರ ಚಿರುಗೆ ಜೋಡಿಯಾಗಿ ಮಿಲ್ಕಿ ಬ್ಯೂಟಿ ತಮನ್ನ ಆಯ್ಕೆ ಆದಾಗ ಆ ಕಾಡ್ಗಿಚ್ಚು ಮತ್ತಷ್ಟು ಹೆಚ್ಚಾಗಿತ್ತು. ಈಗ ”ಭೋಲಾಶಂಕರ್”​ ಸಿನಿಮಾ ಮತ್ತೊಂದು ವಿಚಾರವಾಗಿ ಸಾಕಷ್ಟು ಚರ್ಚೆಗೆ ಬಂದಿದೆ.

ಹೌದು, ”ಭೋಲಾಶಂಕರ್”​ ಸಿನಿಮಾದ ಐಟಂ ಹಾಡೊಂದಕ್ಕೆ ಟಾಲಿವುಡ್​ ಕಿರುತರೆ ಕಲವಾವಿದೆ ಮತ್ತು ಬ್ಯುಸಿಯೆಸ್ಟ್​ ಟಿ ವಿ ಆ್ಯಂಕರ್​ ರಶ್ಮಿಯನ್ನು ಆಯ್ಕೆ ಮಾಡಿರುವುದು ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದೆ. ಕಾರಣ ಚಿರಂಜೀವಿ ಸಿನಿಮಾ ಅಂದಮೇಲೆ ಅಲ್ಲಿ ಹೀರೋಯಿನ್​ಗಳು ಆಯ್ಕೆಯ ಬಗ್ಗೆ ನಿರ್ದೇಶಕ ಮತ್ತು ನಿರ್ಮಾಪಕರು ಬಹಳ ಮುತುವರ್ಜಿ ವಹಿಸುತ್ತಾರೆ.

ಆದರೆ ”ಭೋಲಾಶಂಕರ” ಸಿನಿಮಾದ ಚಿರು ಜೊತೆ ಸ್ಟೆಪ್​ ಹಾಕುವ ಅವಕಾಶವನ್ನು ರಶ್ಮಿ ಪಾಲಾಗಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರವಾಗಿದೆ. ಇನ್ನು ಚಿತ್ರಕ್ಕೆ ಮೆಹರ್​ ರಮೇಶ್​ ಆ್ಯಕ್ಷನ್​ ಕಟ್​ ಹೇಳಿದ್ದು, ಇದು ತಮಿಳಿನಲ್ಲಿ ಅಜಿತ್​ ನಟಿಸಿದ್ದ ವೇಧಾಳಂ ಸಿನಿಮಾದ ರಮೇಕ್​ ಆಗಿದೆ.

ಇದನ್ನೂ ಓದಿ: BREAKING: ರಾಕಿಂಗ್​​ ಸ್ಟಾರ್​​ ಯಶ್​​ ಕ್ಷಮೆ ಕೇಳಿದ ಆಮೀರ್​​ ಖಾನ್; ಇದರ ಹಿಂದಿದೆ ಒಂದು ಕಾರಣ

The post ಮೆಗಸ್ಟಾರ್​ಗೂ ‘ರಶ್ಮಿ’ ಮೇಲೆ ಕಣ್ಣು.. ಚಿರಂಜೀವಿ ಸಿನಿಮಾದಲ್ಲಿ ಕುಣಿಯೋಕೆ ಅವ್ರು ರೆಡಿ..! appeared first on News First Kannada.

News First Live Kannada

Leave a comment

Your email address will not be published. Required fields are marked *