ಮೆಗಸ್ಟಾರ್​​ ಮುಂದಿನ ಚಿತ್ರಕ್ಕೆ ಇವರೇ ಡೈರೆಕ್ಟರ್​​​: ಅಚ್ಚರಿಗೆ ಕಾರಣವಾಯ್ತು ಚಿರಂಜೀವಿ ಡಿಸಿಷನ್​​​


​ಮೆಗಾ ಸ್ಟಾರ್​ ಚಿರಂಜೀವಿ ಅವರ ಮುಂದಿನ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುವ ಅವಕಾಶ ಟಾಲಿವುಡ್​ನ ಯುವ ನಿದೇರ್ಶಕನ ಪಾಲಾಗಿದೆ.

ಹೌದು ರಶ್ಮಿಕಾ ಮಂದಣ್ಣ ಮತ್ತು ನಾಗಶೌರ್ಯ ನಟನೆಯ ”ಛಲೋ” ಮತ್ತು ನಿತಿನ್​, ರಶ್ಮಿಕಾ ಮಂದಣ್ಣ ನಟನೆಯ ”ಭೀಷ್ಮ” ಸಿನಿಮಾವನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡ  ವೆಂಕಿ ಕುಡುಮುಲ ಚಿರುಗೆ ಆ್ಯಕ್ಷನ್​ ಕಟ್​ ಹೇಳುವ ಅವಕಾಶವನ್ನು ಪಡೆದ ಯುವ ನಿರ್ದೇಶಕ.

ಸಾಮಾನ್ಯವಾಗಿ ಚಿರು ಹೊಸ ನಿರ್ದೇಶಕರಿಗೆ ಅಷ್ಟು ಸುಲಭವಾಗಿ ಅವಕಾಶ ನೀಡುವುದಿಲ್ಲ. ಆದರೆ ಎರಡೇ ಸಿನಿಮಾಗಳ ಮೂಲಕ ಗಮನ ಸೆಳೆದ ಯುವ ನಿದೇರ್ಶಕನಿಗೆ ಚಿರು ಯೆಸ್​ ಅಂದಿರುವುದು ಅಚ್ಚರಿಗೆ ಕಾರಣವಾಗಿದೆ. ಸದ್ಯ ಚಿರಂಜೀವಿ ‘ಗಾಡ್‌ಫಾದರ್’, ‘ಭೋಲಾ ಶಂಕರ್’, ‘ವಾಲ್ಟೇರ್ ವೀರಯ್ಯ’ ಸಿನಿಮಾಗಳಲ್ಲಿ ಫುಲ್​ ಬ್ಯುಸಿಯಾಗಿದ್ದಾರೆ. ಈ ಮೂರು ಸಿನಿಮಾಗಳು ಮುಗಿದ ನಂತರ  ವೆಂಕಿ ಕುಡುಮುಲ ನಿರ್ದೇಶನದಲ್ಲಿ ಚಿರು ಕಾಣಿಸಿಕೊಳ್ಳಲಿದ್ದಾರೆ. ಇನ್ನು ಚಿರುರವರ ಮುಂದಿನ ಸಿನಿಮಾಗೆ ಟಾಲಿವುಡ್​ನ ದೊಡ್ಡ ಸಿನಿಮಾ ಸಂಸ್ಥೆಯಾದ ಡಿವಿವಿ ಎಂಟರ್​ಪ್ರೈಸಸ್​ ಬಂಡವಾಳ ಹೂಡಲಿದೆ.

News First Live Kannada


Leave a Reply

Your email address will not be published. Required fields are marked *