ಮೆಗಾಸ್ಟಾರ್​​​​ ಮಗಳ ಡಿವೋರ್ಸ್​​ ವದಂತಿ: ಶ್ರೀಜಾ ಫೋಟೋ ಪೋಸ್ಟ್​ ಮಾಡಿ ಕಲ್ಯಾಣ್​​​ ಹೇಳಿದ್ದೇನು?


ಟಾಲಿವುಡ್​ ಅಂಗಳದಲ್ಲಿ ಸಮಂತಾ ನಾಗ ಚೈತನ್ಯ ವಿಚ್ಛೇದನದ ನಂತರ ಮೆಗಾ ಸ್ಟಾರ್​ ಕಿರಿಯ ಪುತ್ರಿ ಶ್ರೀಜಾ ತಮ್ಮ ಪತಿ ನಟ ಕಲ್ಯಾಣ್ ದೇವ್ ಅವರಿಂದ ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು . ಆದರೆ ಒಂದೇ ಒಂದು ಪೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡುವ ಮೂಲಕ ಶ್ರೀಜಾ, ಕಲ್ಯಾಣ್ ದೇವ್ ಜೋಡಿ ಈ ವದಂತಿಗೆ ಬ್ರೇಕ್​ ಹಾಕಿದ್ದಾರೆ.

ಸಾಮಾನ್ಯವಾಗಿ ಮೆಗಾ ಫ್ಯಾಮಿಲಿಯಲ್ಲಿ ನಡೆಯುತ್ತಿದ್ದ ಎಲ್ಲಾ ಆಚರಣಗಳಿಗೂ ಹಾಜರಾಗುತ್ತಿದ ಕಲ್ಯಾಣ್​ ದೇವ್​ ಕೆಲ ದಿನಗಳಿಂದ ಚಿರಂಜೀವಿ ಕುಟುಂಬದ ಯಾವುದೇ ಫಂಕ್ಷನ್ಸ್​ಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇನ್ನು ಕಲ್ಯಾಣ್​ ದೇವ್​ ಹಾಗೂ ಶ್ರೀಜಾ ಇಬ್ಬರು ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತಿತ್ತು. ಹೀಗಾಗಿ ಇಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎಂದು ಸುದ್ದಿ ಹಬ್ಬಿತ್ತು.

ಸದ್ಯ ಕಲ್ಯಾಣ್​ ದೇವ್​ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಶ್ರೀಜಾ ಜೊತೆಗಿನ ಪೋಟೋವನ್ನು ಹಂಚಿಕೊಂಡು ಅವರಿಗೆ ‘ಹ್ಯಾಪಿ ಬರ್ತ್ ಡೇ ಸ್ವೀಟೂ’ ಎಂದು ಬರ್ತ್​ಡೇ ವಿಶ್ ತಿಳಿಸಿದ್ದಾರೆ. ಈ ಮೂಲಕ ಕಲ್ಯಾಣ್​ ದೇವ್​ , ಶ್ರೀಜಾ ಜೋಡಿ ಡೈವೋರ್ಸ್​ ವದಂತಿಗಳಿಗೆ ಬ್ರೇಕ್​ ಹಾಕಿದ್ದಾರೆ.

ಇನ್ನು ಶ್ರೀಜಾ 2007ರಲ್ಲಿ ಸಿರೀಷ್​ ಭಾರದ್ವಾಜ್​ ಅವರನ್ನು ವಿವಾಹವಾಗಿ ನಂತರ ಅವರಿಂದ ವಿಚ್ಛೇದನ ಪಡೆದು 2016 ಮಾರ್ಚ್​ 28 ರಂದು ಕಲ್ಯಾಣ್​ ದೇವ್ ಅವರನ್ನು ಎರಡನೇ ಬಾರಿಗೆ ಶ್ರೀಜಾ ಮದುವೆಯಾಗಿದ್ದರು.

View this post on Instagram

A post shared by Kalyaan Dhev (@kalyaan_dhev)

The post ಮೆಗಾಸ್ಟಾರ್​​​​ ಮಗಳ ಡಿವೋರ್ಸ್​​ ವದಂತಿ: ಶ್ರೀಜಾ ಫೋಟೋ ಪೋಸ್ಟ್​ ಮಾಡಿ ಕಲ್ಯಾಣ್​​​ ಹೇಳಿದ್ದೇನು? appeared first on News First Kannada.

News First Live Kannada


Leave a Reply

Your email address will not be published.