ಟಾಲಿವುಡ್​ ಸ್ಟೈಲಿಶ್​ ಸ್ಟಾರ್​​ ಅಲ್ಲು ಅರ್ಜುನ್​ ಬಹು ನಿರೀಕ್ಷಿತ ಸಿನಿಮಾ ಪುಷ್ಪ ಕಳೆದ ನವೆಂಬರ್​ನಿಂದ ಶೂಟಿಂಗ್​ ಶುರು ಮಾಡಿ ಬಹುತೇಕ ಕಂಪ್ಲೀಟ್​ ಮಾಡಿದೆ. ಆಗಸ್ಟ್​​ನಲ್ಲಿ ಬಿಡುಗಡೆಯೂ ಡೇಟ್​ ಫಿಕ್ಸ್​ ಮಾಡಿದೆ. ಆದ್ರೀಗ ಕೊರೊನಾ ಎರಡನೇ ಅಲೆಯ ಹಿನ್ನಲೆ ಶೂಟಿಂಗ್​ ಕೂಡ ಸ್ಥಗಿತವಾಗಿದ್ದು, ಆಗಸ್ಟ್​ಗೇ ಸಿನಿಮಾ ತೆರೆ ಕಾಣುತ್ತಾ ಇಲ್ಲ ಮುಂದೂಡುತ್ತಾರಾ ಅನ್ನೋದು ಪ್ರಶ್ನೆಯಾಗಿದೆ. ಈ ಮಧ್ಯೆ ಅಲ್ಲು ಅರ್ಜುನ್​ ಜೊತೆ ಹೆಜ್ಜೆ ಹಾಕಲು ಬಾಲಿವುಡ್​ ಬೆಡಗಿಯೊಬ್ಬರು ಓಕೆ ಅಂದಿದ್ದಾರೆ ಅನ್ನೋದು ಕೇಳಿ ಬರ್ತಿದೆ.

ಹೌದು.. ಬಾಲಿವುಡ್​ ಬೆಡಗಿ ದಿಶಾ ಪಟಾನಿ, ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್​​ ಜೊತೆ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತ ಮಾಹಿತಿ ಬಿಚ್ಚಿಟ್ಟಿಲ್ಲವಾದ್ರೂ, ಬಹುತೇಕ ಕನ್ಫರ್ಮ್​ ಅಂತಿವೆ ಟಾಲಿವುಡ್​ ಸಿನಿ ಮೂಲಗಳು. ಲಾಕ್​ಡೌನ್​ ತೆರವು ಮಾಡಿ, ಚಿತ್ರೀಕರಣಕ್ಕೆ ಅವಕಾಶ ಕೊಟ್ಟ ನಂತರ ಇದೇ ಹಾಡಿನ ಚಿತ್ರೀಕರನ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆಯಂತೆ. ಈ ಹಾಡಿನ ಮತ್ತೊಂದು ವಿಶೇಷತೆ ಏನಂದ್ರೆ, ನಟ ಮೆಗಾಸ್ಟಾರ್​ ಚಿರಂಜೀವಿ ಸಿನಿಮಾದ ಕೆಲವು ಹಾಡುಗಳನ್ನ ಮತ್ತೆ ರೀ-ಕ್ರೀಯೇಟ್​ ಇಲ್ಲಿ ಮಾಡಲಾಗ್ತಿದೆ.

ಹೌದು.. ನಟ ಚಿರಂಜೀವಿ ಅವರ ಖ್ಯಾತ ಹಾಡುಗಳನ್ನ ಆಯ್ದುಕೊಂಡು ಅದೇ ಹಾಡುಗಳಿಗೆ ಪುಷ್ಪರಾಜ್​​ ಸ್ಟೆಪ್​​ ಹಾಕಿಲಿದ್ದಾರೆ ಅನ್ನೋದು ಕನ್ಫರ್ಮ್​ ಮಾಹಿತಿ. ಆದ್ರೆ ಈ ಹಾಡಿನಲ್ಲಿ ಪುಷ್ಪನಿಗೆ ದಿಶಾ ಪಟಾನಿಯೇ ಜೋಡಿಯಾಗ್ತಾರಾ ಇಲ್ಲಾ ಬೇರೆ ನಟಿ ಎಂಟ್ರಿ ಕೊಡ್ತಾರಾ ನೋಡಬೇಕು. ಅಂದ್ಹಾಗೇ, ನಟಿ ದಿಶಾ ಪಟಾನಿ ತಮ್ಮ ಸಿನಿ ಜರ್ನಿ ಶುರು ಮಾಡಿದ್ದೇ ಟಾಲಿವುಡ್​​ನಿಂದ. 2015ರಲ್ಲಿ ತೆರೆ ಕಂಡ ಲೋಫರ್​ ಸಿನಿಮಾದಲ್ಲಿ ದಿಶಾ ಪಟಾನಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು.

ಅಲ್ಲು ಅರ್ಜುನಿಗೆ ನಾಯಕಿಯಾಗಿ ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಮುಖ್ಯ ಪಾತ್ರದಲ್ಲಿ ನಟ ಡಾಲಿ ಧನಂಜಯ ನಟಿಸಿದ್ದು, ಮಲಯಾಳಂ ನಟ ಫಹಾದ್​ ಫಾಸಿಲ್​​ ವಿಲನ್​ಆಗಿ ನಟಿಸ್ತಿದ್ದಾರೆ ಅನ್ನೋ ಮಾಹಿತಿ ಇದೆ. ಈಗಾಗಲೇ ರಿಲೀಸ್​ ಆದ ಪುಷ್ಪ ಟೀಸರ್​ ಎಲ್ಲಡೆ ಮೆಚ್ಚುಗೆಗೆ ಪಾತ್ರವಾಗಿದೆ.

The post ಮೆಗಾಸ್ಟಾರ್​ ಹಾಡುಗಳಿಗೆ ಅಲ್ಲು ಅರ್ಜುನ್​ ಡ್ಯಾನ್ಸ್​; ಪುಷ್ಪನಿಗೆ ಜೊತೆಯಾಗ್ತಿದ್ದಾರಾ ಬಾಲಿವುಡ್​ ಸ್ಟಾರ್.? appeared first on News First Kannada.

Source: newsfirstlive.com

Source link

Leave a comment