ಮೆಗಾ ಲಾಟರಿಯಲ್ಲಿ ಬರೋಬ್ಬರಿ ₹44 ಕೋಟಿ ಗೆದ್ದ ಮಹಿಳೆ.. ಹೇಗೆ ಗೊತ್ತಾ?


ಅಬುಧಾಬಿಯಲ್ಲಿ ನೆಲೆಸಿರುವ ಭಾರತೀಯ ಮೂಲದ ಮಹಿಳೆಯೊಬ್ಬರು, ಅಲ್ಲಿಯ ಮೆಗಾ ಲಾಟರಿಯಲ್ಲಿ ಬರೋಬ್ಬರಿ 44 ಕೋಟಿ ರೂಪಾಯಿಯನ್ನು ಗೆದ್ದುಕೊಂಡು ಅಚ್ಚರಿಗೆ ಕಾರಣವಾಗಿದ್ದಾರೆ.

ಲೀನಾ ಜಲಾಲ್ ಎಂಬ ಕೇರಳದ ತ್ರಿಶೂರ್​ ಮೂಲದ ಈ ಮಹಿಳೆ, ಅಬುಧಾಬಿಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಫೆಬ್ರವರಿ 3 ರಂದು ಬಿಗ್​ ಟಿಕೆಟ್​ ಲಾರಿಯನ್ನು ಪಡೆದಿದ್ದು, ಸದ್ಯ ವಾರಾಂತ್ಯದ ಲಕ್ಕಿ ಡ್ರಾನಲ್ಲಿ ಅವರ ಲಾಟರಿ ನಂಬರ್​ಗೆ ಅದೃಷ್ಟ ಖುಲಾಯಿಸಿದೆ. ಪರಿಣಾಮ ಅವರು ಬರೋಬ್ಬರಿ 44 ಕೋಟಿ ರೂಪಾಯಿ (20 million dirhams ) ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಇಷ್ಟೊಂದು ಹಣವನ್ನು ಅವರು ಇತರೆ 10 ಜನರೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಜತೆಗೆ ಸಾಧ್ಯವಾದ ಮಟ್ಟಿಗೆ ಇದರಲ್ಲಿನ ಒಂದಿಷ್ಟು ಭಾಗದ ಹಣವನ್ನು ಸಮಾಜ ಕಾರ್ಯಕ್ಕೆ ವಿನಿಯೋಗಿಸುವುದಾಗಿ ತಿಳಿಸಿದ್ದಾರೆ. ಇನ್ನು ಕಳೆದ ವರ್ಷ ಅಬುಧಾಬಿಯಲ್ಲಿ ಡ್ರೈವರ್​ ಆಗಿರುವ ಕೇರಳ ಮೂಲದ ವ್ಯಕ್ತಿಯೊಬ್ಬರು ಲಾಟರಿಯಲ್ಲಿ 40 ಕೋಟಿ ಗೆದ್ದು ಅಚ್ಚರಿ ಮೂಡಿಸಿದ್ದರು.

News First Live Kannada


Leave a Reply

Your email address will not be published.