ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಿಭಾಗದ ICUನಲ್ಲಿ ಬೆಂಕಿ ಅವಘಡ.. ರೋಗಿಗಳ ಪರದಾಟ


ಶಿವಮೊಗ್ಗ: ಶಾರ್ಟ್ ಸೆರ್ಕ್ಯೂಟ್​​​ನಿಂದಾಗಿ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಿಭಾಗದ ಒಬಿಜಿಯಲ್ಲಿನ ಐಸಿಯುಗೆ ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿದೆ.

ಶಸ್ತ್ರ ಚಿಕಿತ್ಸೆ ಮೂಲಕ ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯರು ಹಾಗೂ ಮಕ್ಕಳಿಗೆ ಒಬಿಜಿ ಐಸಿಯು ವಾರ್ಡ್ ನಲ್ಲಿ ಶುಶ್ರೂಷೆ ಮಾಡಲಾಗುತ್ತದೆ. ಆ ವಾರ್ಡ್ ನಲ್ಲಿದ್ದ ಐಸಿಯಲ್ಲಿ ಶಾರ್ಟ್ ಸೆರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಗೆ ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದು, ಬೆಂಕಿ ಕಾಣಿಸಿಕೊಂಡ ಕೂಡಲೇ ಮೆಗ್ಗಾನ್ ಮಕ್ಕಳ ಕಟ್ಟಡದ ಬಹುತೇಕ ವಾರ್ಡ್ ನಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಸದ್ಯ ಒಬಿಜಿ ವಾರ್ಡ್ ನಲ್ಲಿದ್ದ ಇಬ್ಬರು ಮಹಿಳೆಯರು ಮತ್ತು ಮಕ್ಕಳನ್ನ ಬೇರೆಡೆ ಶಿಫ್ಟ್ ಮಾಡಲಾಗಿದೆ. ಬೆಂಕಿ ಅತೋಟಿಗೆ ತರಲಾಗಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಅಪಾಯ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿದ್ದು, ಒಬಿಜಿಯಲ್ಲಿದ್ದ ಉಳಿದ ಉಪಕರಣಗಳನ್ನ ಹೊರಗೆ ತರುವ ಕಾರ್ಯ ಮಾಡಲಾಗುತ್ತಿದೆ. ಘಟನೆ ಬಗ್ಗೆ ಮಾಹಿತಿ ಲಭಿಸಿದ ಕೂಡಲೇ ಮೆಗ್ಗಾನ್ ಅಧೀಕ್ಷಕ ಶ್ರೀಧರ್ ಭೇಟಿ ನೀಡಿದ್ದಾರೆ. ಅಂದಹಾಗೇ, 2019ರಲ್ಲಿ ಇದೇ ಮಕ್ಕಳ ವಾರ್ಡ್​ನಲ್ಲಿ ಸಂಭವಿಸಿದ್ದ ಅಗ್ನಿ ಆಕಸ್ಮಿಕವಾಗಿ ಘಟನೆಯಲ್ಲಿ ನಿರ್ದೇಶಕ ಡಾ.ಲೇಪಾಪಕ್ಷಿ ಅವರ ತಲೆದಂಡವಾಗಿತ್ತು.

News First Live Kannada


Leave a Reply

Your email address will not be published.