ನಾವು ಎಷ್ಟೋ ವಿಚಾರಗಳನ್ನ ಕಲ್ಪನೆ ಮಾಡಿಕೊಂಡೇ ಖುಷಿ ಪಟ್ಟುಕೊಳ್ತೀವಿ.. ನಾವಿಷ್ಟಪಟ್ಟ ಯಾವುದೋ ಜಾಗಕ್ಕೆ ಹೋಗಲು ಆಗದೇ ಇದ್ರೂ, ಆ ಜಾಗದಲ್ಲಿ ನಾವಿದ್ದಂತೆಯೇ ಭಾವಿಸಿಕೊಳ್ತೀವಿ.. ಬಟ್, ನಮ್ಮ ಕಲ್ಪಿಸಿಕೊಳ್ಳೋ ವಿಚಾರಗಳು ನಿಜವಾಗುತ್ತಾ? ಪ್ರಶ್ನೆ ಮಾಡುವ ಹಾಗಿಯೇ ಇಲ್ಲ, ಕೂತಲ್ಲೇ ನೀವು ಬೇರೊಂದು ಜಾಗಕ್ಕೆ ಪ್ರಯಾಣಿಸುವಂತೆ ಮಾಡುವ ಹೈಟೆಕ್ ಟೆಕ್ನಾಲಜಿ ಕೆಲವೇ ದಿನಗಳಲ್ಲಿ ನಿಮ್ಮ ಕೈಗೆ ಸಿಗಲಿದೆ..
ನಾವ್ ನಿಮಗೆ ಇವತ್ತು ಈ ಸ್ಟೋರಿಯನ್ನ ಹೇಳುವ ಮುಂಚೆ ಕೆಲವು ಕಲ್ಪನೆಗಳನ್ನ ನಿಮ್ಮ ಮುಂದೆ ಬಿಚ್ಚಿಡ್ತೀವಿ ನೋಡಿ..ನೀವು ಕೆಲಸ ಮಾಡೋ ಸಂಸ್ಥೆಯ ಮ್ಯಾನೇಜರ್ ನಿಮ್ಮನ್ನ ಎಮರ್ಜೆನ್ಸಿ ಮೀಟಿಂಗ್ಗೆ ಕರೀತಾರೆ ಅಂತಾ ಇಟ್ಕೊಳ್ಳಿ, ಆದ್ರೆ, ನೀವು ಯಾವುದೋ ಬೇರೆ ಜಾಗದಲ್ಲಿರ್ತಾರಾ, ಮೀಟಿಂಗ್ಗೆ ಬರೋದಕ್ಕೆ ಆಗೋದಿಲ್ಲ. ಬಟ್ ನೀವು ಎಲ್ಲೇ ಇದ್ರೂ ನಿಮ್ಮ ಉಪಸ್ಥಿತಿ ಆ ತುರ್ತು ಸಭೆಯಲ್ಲಿರುವಂತೆ ಮಾಡುತ್ತೆ ಮೆಟಾವರ್ಸ್..
ಇದಷ್ಟೇ ಅಲ್ಲ, ನಿಮ್ಮ ಬಾಸ್ ಕರೆದ ಮೀಟಿಂಗ್ಗೆ ಒಂದು ಇಂತಹದ್ದೇ ಬಟ್ಟೆ ಹಾಕ್ಬೇಕು ಅನ್ನೋ ಸೂಚನೆ ಕೂಡ ಇರುತ್ತೆ.. ನೀವು ಅವರು ಹೇಳಿದ್ದ ಬಟ್ಟೆಯನ್ನೇ ಧರಿಸಿಯೇ ಮೀಟಿಂಗ್ಗೆ ಹೋಗಬಹುದು.. ನೀವೆಲ್ಲೇ ಇದ್ರೂ ವರ್ಚುವಲಿ ಆ ಮೀಟಿಂಗ್ನಲ್ಲಿ ಭಾಗವಹಿಸುವಂತೆ ಮಾಡುವ ಅಮೋಘ ಟೆಕ್ನಾಲಜಿಯೇ ಮೆಟಾವರ್ಸ್..
ಹಾಲಿವುಡ್ನಲ್ಲಿ ಸ್ವಲ್ಪ ಹಿಂದೆ ತೆರೆಕಂಡ ಈ ಸಿನಿಮಾವನ್ನ ನೋಡಿದ್ದೀರಾ..ಒಂದು ತಂತ್ರಜ್ಞಾನದಿಂದ ಕೆಲವೊಂದು ಜೀವಿಗಳನ್ನ ಕ್ರಿಯೇಟ್ ಮಾಡೋದು. ಆ ಜೀವಿಗಳಿಂದ ಈ ಪ್ರಪಂಚವನ್ನ ಮಣಿಸಿ ತಾನೇ ಹೀರೋ ಎನಿಸಿಕೊಳ್ಳಲು ಬೇರೆ ಯಾರದ್ದೋ ರೂಪದಲ್ಲಿ ಬರುವ ವ್ಯಕ್ತಿಯಿಂದ ಅಲ್ಲೋಲ ಕಲ್ಲೋಲವೇ ಆಗಿಬಿಡುತ್ತೆ. ಮತ್ತೊಂದು ಕಡೆ, ಇನ್ನೊಂದು ತಂತ್ರಜ್ಞಾನದಿಂದ ಮುಂದೆ ನಡೆಯುವ ದಾಳಿಗಳ ಬಗ್ಗೆ ಮುಂಚಿತವಾಗಿಯೇ ವಿಡಿಯೋ ಮಾಹಿತಿಗಳು ಸಿಕ್ತಾ ಇರ್ತಾವೆ..
ಮಗದೊಂದು ಕಡೆ ಜನರಿಗೆ ಅಪಾಯ ಮಾಡ್ತಿರುವವನ ಜೊತೆಗೆ ಹೀರೋ ಆದಂತಹ ಸ್ಪೈಡರ್ ಮ್ಯಾನ್ ಗುದ್ದಾಟಕ್ಕಿಳಿದಾಗ, ವಿಲನ್ ಫೈಟ್ ಮಾಡುವ ರೀತಿಯೇ ಇಲ್ಯೂಷನ್.. ಅಂದ್ರೆ, ಒಂದು ಭ್ರಮಾಲೋಕವನ್ನೇ ಸೃಷ್ಟಿ ಮಾಡಿ, ಆ ಜಗತ್ತಿನಲ್ಲಿ ನಾಯಕನ ಜೊತೆಗೆ ಹೊಡೆದಾಟ ಮಾಡೋ ಸೀನ್ಗಳು ನಿಜಕ್ಕೂ ತಂತ್ರಜ್ಞಾನದ ಭವಿಷ್ಯದ ಅಚ್ಚರಿಗಳನ್ನ ಜನರ ಕಣ್ಣಿಗೆ ಕಟ್ಟಿಕೊಡುವಂತೆ ಮಾಡಿತ್ತು..
ಅಂದಹಾಗೇ, ಇವೆಲ್ಲಾ ರೋಮಾಂಚನಕಾರಿ ದೃಶ್ಯಗಳು, ಹಾಲಿವುಡ್ನ ಸೂಪರ್ ಹೀರೋಸ್ ಸಿನಿಮಾ ಸರಣಿಗಳ ಪಟ್ಟಿಯಲ್ಲಿರುವ ಸ್ಪೈಡರ್ಮ್ಯಾನ್ ಫಾರ್ ಫ್ರಮ್ ಹೋಮ್ ಚಿತ್ರದ ದೃಶ್ಯಗಳು, ಹಾಗೂ ಕಲ್ಪನೆಗಳು.. ನೀವೆಲ್ಲೇ ಇದ್ರೂ ನಿಮ್ಮ ಬಾಸ್ ಕರೆದ ಮೀಟಿಂಗ್ಗೆ ಹೋಗುವಂತೆ ಮಾಡೋದು, ಸ್ಪೈಡರ್ ಮ್ಯಾನ್ ಚಿತ್ರಗಳು ನಿಜವಾಗೋದು, ಇವೆಲ್ಲಾ ಸಾಧ್ಯನಾ.. ಯಸ್ ಮತ್ತೆ ಮತ್ತೆ ನನ್ನಿಂದ ಸಾಧ್ಯ ಅಂತಿದೆ ಮೆಟಾವರ್ಸ್
ಕೈಯಲ್ಲಿ ಸ್ಮಾರ್ಟ್ಫೊನ್ ಇದ್ರೆ ಸಾಕು ಜನರು ಜಗತ್ತನ್ನೇ ಮರೆಯೋ ಕಾಲ ಇದು.. ಅದ್ಯಾವ ಪ್ರಪಂಚದಲ್ಲಿ ಮುಳುಗಿ ಹೋಗಿದ್ದಾನೋ ಅಂತಾ ಮನೆಯವರು ಮೊಬೈಲ್ನಲ್ಲಿ ಮಗ್ನನಾಗಿರೋ ಮಗನ ಬೈಯೋದನ್ನ ನಾವೆಲ್ಲಾ ನೋಡಿದ್ದೀವಿ. ಅದೆಲ್ಲಾ, ಕಣ್ಣಿಗೆ ಕಾಣಿಸೋ ಪ್ರಪಂಚ.. ನಾವು ಮೊಬೈಲ್ನಲ್ಲಿ ಒಳ್ಳೊಳ್ಳೆ ಸ್ಥಳದ ದೃಶ್ಯಗಳನ್ನ ನೋಡ್ತಾ ಎಂಜಾಯ್ ಮಾಡಬಹುದಷ್ಟೇ.. ಆದ್ರೆ, ಆ ಸ್ಥಳಗಳಿಗೆ ಹೋಗೋಕ್ಕಾಗಲ್ವಲ್ಲಾ ಅನ್ನೋ ಕೊರಗು ತುಂಬಾ ಜನಕ್ಕಿರುತ್ತೆ..
ಬಟ್, ಭವಿಷ್ಯದಲ್ಲಿ ಆ ರೀತಿಯ ಕೊರಗು ಇರೋದಿಲ್ಲ.. ಯಾವುದೋ ಸ್ಕೀನ್ ಮೇಲೆ ಬರೋದನ್ನ ಪಿಳಿಪಿಳಿ ಕಣ್ಣು ಬಿಟ್ಟು ನೋಡೋ ಬದ್ಲು.. ಆ ಪ್ರಪಂಚಕ್ಕೆ ನಾವೇ ಹೋದಂತಹ ಅನುಭವ ಪಡೆದುಕೊಳ್ಳೋದು ಹೇಗಿರುತ್ತೆ.. ಜಸ್ಟ್ ಇಮ್ಯಾಜಿನ್.. ಇಂತಹದ್ದೊಂದು ಟೆಕ್ನಾಲಜಿ, ಇನ್ನೇನು ಕೆಲವೇ ದಿನಗಳಲ್ಲಿ ನಮ್ಮೆಲ್ಲರ ಕೈಗೆ ಸಿಗೋ ಚಾನ್ಸಸ್ ದಟ್ಟವಾಗಿದೆ..
ಇಂಟರ್ನೆಟ್ನಲ್ಲಿ ರೆಡಿಯಾಗ್ತಿದೆ ಕನಸ್ಸಿನ ಜಗತ್ತು
ಮುಂದಿನ ಪೀಳಿಗೆಯ ಅಡಿಕ್ಷನ್ ಆಗಲಿದೆ ಮೆಟಾವರ್ಸ್
ಹೌದು… ಮನುಷ್ಯನ ಭೌತಿಕ ಶಕ್ತಿ ಪ್ರಬಲವಾದಂತೆಲ್ಲಾ, ಟೆಕ್ನಾಲಜಿಯೂ ಸಾಕಷ್ಟು ಸ್ಟ್ರಾಂಗ್ ಆಗ್ತಾ ಹೋಗ್ತಿದೆ. ತಂತ್ರಜ್ಞಾನದ ವಿಚಾರದಲ್ಲಿ ನಾವೀಗ ಏನ್ ಅನುಭವ ಪಡೆದುಕೊಳ್ತಿದ್ದೀವೋ? ಅದೂ ಕೂಡ ಕಾಲ ಕಾಲಕ್ಕೂ ಬದಲಾಗ್ತಾನೆ ಹೋಗ್ತಿದೆ.. ಟೆಕ್ನಾಲಜಿ ವಿಚಾರದಲ್ಲಿ ಒಂದೇ ರೀತಿಯಂತೂ ಮನುಷ್ಯನಿದ್ದದ್ದು ಗೊತ್ತೇ ಇಲ್ಲ.. ಅದ್ರಲ್ಲೂ ಕೆಲವೇ ಕೆಲವು ವರ್ಷಗಳಲ್ಲಿ, ಸ್ಮಾರ್ಟ್ ವಿಚಾರದಲ್ಲಿ ತಂತ್ರಜ್ಞಾನ ಕ್ಷೇತ್ರ ಮಾಡಿದ ಕ್ರಾಂತಿ ನಮ್ಮ ಕಣ್ಮುಂದೆಯೇ ಇದೆ..
ಇದಷ್ಟೇ ಅಲ್ಲ, ಸಿನಿಮಾ, ಗೇಮಿಂಗ್ ವಿಚಾರದಲ್ಲೂ ಮಾನವ ಮತ್ತೊಂದು ಹಂತದ ಸಾಧನೆಗೈದು ಆಗಿದೆ. ಅದರಲ್ಲೂ ತ್ರಿಡಿ ತಂತ್ರಜ್ಞಾನ ಇವತ್ತಿಗೂ ಸಖತ್ ಫೇಮಸ್. ಒಂದು ಕನ್ನಡಕ ಹಾಕೊಂಡು ನೀವು ಯಾವುದೋ ಯುದ್ಧದ ಸಿನಿಮಾ ನೋಡ್ತಾ ಕುಳಿತಿದ್ರೆ, ಆ ಯುದ್ಧ ನಿಮ್ಮಕಣ್ಮುಂದೆ ನಡೀತಿದೆಯೇನೋ ಅನ್ನೋ ಅನುಭವ ಕೊಡೋದೇ ತ್ರಿಡಿ ತಂತ್ರಜ್ಞಾನ.. ಅದೇ, ರೀತಿ ಆನ್ಲೈನ್ ಗೇಮಿಂಗ್ ವಿಚಾರದಲ್ಲೂ ಅಷ್ಟೇ ಈಗಾಗಲೇ, ವರ್ಚುವಲ್ ಗೇಮಿಂಗ್ ಪ್ಲಾಟ್ಫಾರ್ಮ್ ಸಖತ್ ಫೇಮಸ್ ಆಗಿದ್ದು, ಕುಳಿತಲ್ಲೇ ಆ ಆಟದ ಮೈದಾನದ ಒಳ ಹೋಗಿ ಆಡ್ತಿದ್ದಾರೆ. ಇದೆಲ್ಲಾ ಓಕೆ, ಇದನ್ನೆಲ್ಲಾ ಭ್ರಮಾಲೋಕ ಅಂತಲೂ ಕರೀಬಹುದು.. ಆದ್ರೆ. ಈ ವರ್ಚುವಲ್ ಜಗತ್ತಿನಲ್ಲಿ, ಇನ್ಯಾವುದೋ ವೇಷದಲ್ಲಿ ಆಟ ಆಡೋ ಬದಲು ನಿಮ್ಮದ್ದೇ ರೂಪವಿದ್ರೆ ಹೇಗಿರುತ್ತೆ..ಮೆಟಾವರ್ಸ್ ಅನ್ನೋ ಹೆಸ್ರು ಸಂಚಲನ ಸೃಷ್ಟಿ ಮಾಡಿದ್ಮೇಲಿಂದ ಶುರುವಾಗಿರೋ ಕನಸಿದು..
ನೀವು ಇಲ್ಲೇ ಇರ್ತೀರಾ, ಅಲ್ಲಿಗೂ ಹೋಗ್ತೀರಾ
ನೀವೇ ಬೇರೆ ಕಡೆ ಇರುವಂತೆ ಮಾಡುತ್ತೆ ಮೆಟಾವರ್ಸ್
ಹೌದು ಇಂತಹದ್ದೊಂದು ಕ್ರಾಂತಿಗೆ ಇಂಟರ್ನೆಟ್ ಮುಂದಾಗ್ತಿದೆ.. ಅದ್ರಲ್ಲೂ ಫೇಸ್ಬುಕ್ನಂತಹ ದೈತ್ಯ ಸಂಸ್ಥೆಗಳು ಮೆಟಾವರ್ಸ್ ತಂತ್ರಜ್ಞಾನವನ್ನ ಜನರಿಗೆ ಮುಟ್ಟಿಸುವಂತೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಮೈಕ್ರೊಸಾಫ್ಟ್ ಕೂಡ ಮೆಟಾವರ್ಸ್ನತ್ತ ಒಲವು ತೋರಿದ್ದು, ಪ್ರಪಂಚದ ಖ್ಯಾ ತ ಟೆಕ್ ದಿಗ್ಗಜ ಕಂಪನಿಗಳ ನಡುವೆ ಭರ್ಜರಿ ಪೈಪೋಟಿ ಆರಂಭವಾಗಿದೆ. ಅಷ್ಟಕ್ಕೂ ಮೆಟಾವರ್ಸ್ ಅಂದ್ರೆ ಏನು ಅನ್ನೋದು ತಾನೇ ನಿಮ್ಮ ಪ್ರಶ್ನೆ..
ಮೆಟಾವರ್ಸ್ ಅನ್ನೋದು ನಿಜವಾದ ಮಾಯಾಲೋಕ
ಕುಳಿತಲ್ಲೇ ಅನುಭವಿಸಬಹುದು ಮತ್ತೊಂದು ಪ್ರಪಂಚ
ನಾವು ಮೊದಲೇ ಹೇಳಿದಂತೆ, ಇಲ್ಲಿದ್ದರೂ ಬೇರೆಯ ಜಗತ್ತಿಗೆ ಹೋದ ಅನುಭವಪಡೆದುಕೊಳ್ಳುವಂತಹ ಟೆಕ್ನಾಲಜಿಯೇ ಮೆಟಾವರ್ಸ್.. ಆನ್ಲೈನ್ ಆರ್ಡರ್ ಮಾಡಿದ ಬಟ್ಟೆ ಮನೆಗೆ ಬಂದ್ಮೇಲೆ, ಅದನ್ನ ಟ್ರೈ ಮಾಡಿ ಮತ್ತೆ ಸೈಜ್ ಸರಿ ಹೋಗದೇ ಇದ್ರೆ ವಾಪಸ್ ಕಳುಹಿಸೋದು ಒಂದು ದೊಡ್ಡ ತಲೆನೋವಾಗಿತ್ತು. ಆದ್ರೆ, ಮೆಟಾವರ್ಸ್ ತಂತ್ರಜ್ಞಾನದಲ್ಲಿ ನೀವು ಕುಳಿತಲ್ಲೇ ಬಟ್ಟೆ ಶಾಪಿಂಗ್ ಮಾಡಿ, ಅದನ್ನ ಟ್ರೈ ಕೂಡ ಮಾಡಬಹುದು.. ಇದೊಂದು ಸಣ್ಣ ಉದಾಹರಣೆಯಷ್ಟೇ.. ನೀವೆಲ್ಲೇ ಇರ್ತೀರಾ.. ಬಟ್ ಮೆಟಾವರ್ಸ್ ಮೂಲಕ ಬೇರೆ ಪ್ರಪಂಚಕ್ಕೂ ಹೋಗಿ ಬರ್ತೀರಾ..
ಇವತ್ತು ನಾವೇನು ಬಳಕೆ ಇಂಟರ್ನೆಟ್ ವ್ಯವಸ್ಥೆಯನ್ನ ಬಳಕೆ ಮಾಡ್ತಿದ್ದೇವೋ ಆ ಅಂತರ್ಜಾಲವೇ ಭವಿಷ್ಯದಲ್ಲಿ ಮೆಟಾವರ್ಸ್ ರೂಪಕ್ಕೆ ಚೇಂಜ್ ಆಗೋದು ಪಕ್ಕಾ.. ಅಲ್ಲದೇ, ಫೇಸ್ಬುಕ್ನಂತಹ ದೈತ್ಯ ಸಂಸ್ಥೆಗಳು ಈ ಮೆಟಾವರ್ಸ್ ಪರಿಕಲ್ಪನೆಯ ಮೇಲೆಯೇ, ತಮ್ಮ ಸಂಸ್ಥೆಯನ್ನ ಮೆಟಾ ಅಂತಲೇ ಮರುನಾಮಕರಣ ಮಾಡಿದ್ದಾರೆ ಅಂದ್ರೆ, ತಪ್ಪಾಗಲ್ಲ. ಜೊತೆಗೆ ದೊಡ್ಡ ದೊಡ್ಡ ದಿಗ್ಗಜ ಸಂಸ್ಥೆಗಳು ಮೆಟಾವರ್ಸ್ ಪ್ರಾಜೆಕ್ಟ್ ಮೇಲೆ ದಿನೇ ದಿನೇ ಹಾಕ್ತಿರೋ ಹೂಡಿಕೆ ಪ್ರಮಾಣ ಕೂಡ ಜಾಸ್ತಿಯಾಗ್ತಿದ್ದು, ಸ್ಲೋ ಆಗಿ ಪ್ರಪಂಚ ವರ್ಚುವಲ್ ಜಗತ್ತಾಗಿ ಬದಲಾಗ್ತಿದೆ ಅಂದ್ರೆ ತಪ್ಪಾಗಲ್ಲ.
ತಂತ್ರಜ್ಞಾನದ ತಾಕತ್ತೇ ಅಂತಹದ್ದು ಅಲ್ವಾ? ವಾಸ್ತವದಲ್ಲಿ ಇರುವ ವಸ್ತುಗಳ ಜೊತೆ ಜೊತೆಗೆ ಅದಕ್ಕೆ ಸ್ವಲ್ಪ ಮಸಾಲೆ ಸೇರಿಸಿ ಊಹಿಸಲು ಅಸಾಧ್ಯವಾಗಿ ಕಾಣುವಂತೆ ಮಾಡಿರುವ ಎಷ್ಟೋ ಉದಾಹರಣೆಗಳಿವೆ. ಆನ್ಲೈನ್ ಚೆನ್ನಾಗಿ ಕಾಣುವ ಗೃಹಪಯೋಗಿ ವಸ್ತುಗಳು, ನಮ್ಮ ಮನೆಯಲ್ಲಿ ಹೇಗೆ ಕಾಣ್ತವೆ ಅಂತಾ ನೋಡಲೂ ತಂತ್ರಜ್ಞಾನ ಬಹಳಷ್ಟು ಸಹಾಯಕವಾಗಿದೆ. ಆದ್ರೆ, ಮೆಟಾವರ್ಸ್ ಇದೆಲ್ಲಾವನ್ನೂ ಮೀರಿದ ಎಕ್ಸ್ಟೆಂಡೆಡ್ ರಿಯಾಲಿಟಿ ಅಂದ್ರೆ ತಪ್ಪಾಗಲ್ಲ.. ಎಲ್ಲೋ ಇರೋ ಜಗತ್ತನ್ನ ಜಸ್ಟ್ ಮೊಬೈಲ್ ಸ್ಕ್ರೀನ್ ಮೇಲೆ ನೋಡಿ ಕಣ್ತುಂಬಿಕೊಳ್ಳೊ ಬದಲು.. ಆ ಜಗತ್ತಿನ ನಾವೇ ಎಂಟ್ರಿಯಾಗಿ ಆನಂದಿಸೋದು ಒಂಥರಾ ಮಜಾನೇ ಇಲ್ವಾ..
ಮೆಟಾವರ್ಸ್ ಈಗಾಗಲೇ ಎಷ್ಟು ಸಂಚಲನ ಮೂಡಿಸಿದೆ, ಬಾಲಿವುಡ್ ಸ್ಟಾರ್ಗಳೂ ಈ ವರ್ಚುವಲ್ ಪ್ರಪಂಚದ ಸವಿ ಅನುಭವಿಸಲು ಕಾತರರಾಗಿದ್ದಾರೆ.. ಅದಕ್ಕೆ ಖ್ಯಾತ ಸೆಲೆಬ್ರಿಟಿ ದೀಪಿಕಾ ಪಡುಕೋಣೆ ಹಾಕಿರೋ ಈ ವಿಡಿಯೋನೇ ಸಾಕ್ಷಿ..
ಮೆಟಾವರ್ಸ್ ಇಲ್ಯೂಷನ್ ಹಾಗೂ ರಿಯಾಲಿಟಿ ಎರಡರ ಕಾಂಬಿನೇಷನ್.. ಅಂದ್ರೆ, ಭ್ರಮಾ ಮತು ಭೌತಿಕ ಲೋಕದ ಸಮ್ಮಿಲನ. ಹಾಗಂತ ಇಲ್ಲಿ ಕಾಲ್ಪನಿಕ ವಿಚಾರಗಳು ರಿಯಾಲಿಟಿ ಆಗೋದಿಲ್ಲ. ಬದಲಾಗೇ ಮನುಷ್ಯನೇ ಆ ರಿಯಾಲಿಟಿ ಭಾಗವಾಗಿರ್ತಾನೆ. ಇಲ್ಲಿ ಕುಳಿತು ಮತ್ತೊಂದು ಪ್ರಪಂಚದ ಅಂದವ ಅನುಭವಿಸುವ ಅದೃಷ್ಟ ಹೊಂದಿರ್ತಾನೆ.. ಒಟ್ಟಾರೆ, ಮೆಟಾವರ್ಸ್ನ ಫ್ಯೂಚರ್ ಆಫ್ ದಿ ಇಂಟರ್ನೆಟ್ ಆಂತಾ ಕರೆದ್ರೆ ತಪ್ಪಾಗಲ್ಲ.
ಮನುಷ್ಯ ತಾನು ಬೆಳೆದಂತೆಲ್ಲಾ ತಾನು ಬೆಳೆಸಿದ ತಂತ್ರಜ್ಞಾನವನ್ನೂ ಹಂತ ಹಂತವಾಗಿ ಮುಂದಕ್ಕೆ ಕೊಂಡೊಯ್ಯುತ್ತಿದ್ದಾನೆ. ಚಂದ್ರನ ಅಂಗಳಕ್ಕೆ ಕಾಲಿಡುವ ತಾಕತ್ತು ಹೊಂದಿರುವ ಮಾನವ, ಈಗ ವರ್ಚುವಲ್ ಪ್ರಪಂಚದ ಕ್ರಾಂತಿಗೆ ಮುನ್ನಡಿ ಬರೆಯಲು ಹೊರಟಿದ್ದಾನೆ. ಇದೆಲ್ಲಾ ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತೆ ಅನ್ನೋದೇ ಈಗಿರೋ ಲೆಕ್ಕಾಚಾರ. ಮೆಟಾವರ್ಸ್ ಬಂದ್ರಂತೂ ಎಲ್ಲರೂ ಸಾಮಾಜಿಕ ಜಾಲತಾಣಗಳಿಂದ ಆ ಪ್ರಪಂಚಕ್ಕೆ ವಲಸೆ ಹೋಗೋದ್ರಲ್ಲಿ ಡೌಟೇ ಇಲ್ಲ..
ವಿಶೇಷ ವರದಿ: ಸುಧಾಕರ್, ಸ್ಪೆಷಲ್ ಡೆಸ್ಕ್