ಮೆಟ್ರಿಕ್ ಪಾಸಾಗಲಾರೆ ಎಂದು ಜರಿಯುತ್ತಿದ್ದ ಪಾಲಕರಿಗೆ ಪಾಸಾಗಿ ತೋರಿಸಿದ ಕೊಪ್ಪಳ ಹುಡುಗ ಖುಷಿಯಿಂದ ಮಳೆಯಲ್ಲಿ ಹುಚ್ಚೆದ್ದು ಕುಣಿದ | Koppal: He might have cleared SSLC in pass class, but his joy was of a rank achiever ARBಅವನಿಗೆ ಶ್ರೇಣಿಗಳ ಪರಿವೆ ಇಲ್ಲ. ಬರೀ ಪಾಸಾಗಿರುವುದಕ್ಕೆ ಪಿಯು ವ್ಯಾಸಂಗಕ್ಕೆ ಯಾವ ಕಾಲೇಜು ಪ್ರವೇಶ ನೀಡೀತು ಎಂಬ ಯೋಚನೆಯೂ ಅವನಗಿಲ್ಲ. ಅದನ್ನೆಲ್ಲ ಅವನು ಈ ಜನ್ಮದಲ್ಲಿ ಪಾಸಾಗಲಾರೆ ಎಂದು ಜರಿಯುತ್ತಿದ್ದ ಪಾಲಕರಿಗೆ ಬಿಟ್ಟಿದ್ದಾನೆ.

TV9kannada Web Team


| Edited By: Arun Belly

May 19, 2022 | 9:59 PM
Koppal: ಖುಷಿ ಅಂದ್ರೆ ಇದು ಮಾರಾಯ್ರೇ! 16-ವರ್ಷದ ಬಾಲಕ ಸಂತೋಷ ತಾಳಲಾರದೆ ಕುಣಿಯುತ್ತಿದ್ದಾನೆ. ಕಾರಣವೇನು ಗೊತ್ತಾ? ಅವನು ಎಸ್ ಎಸ್ ಎಲ್ ಸಿ (SSLC) ಪರೀಕ್ಷೆಯಲ್ಲಿ ಪಾಸಾಗಿದ್ದಾನೆ! ಬರೀ ಪಾಸಾಗಿದ್ದಕ್ಕೆ ಅಷ್ಟು ಸಂತೋಷವಾ ಅಂತ ಪ್ರಶ್ನಿಸಬೇಡಿ. ‘ನೀನು ಈ ಜನ್ಮದಲ್ಲಿ ಮೆಟ್ರಿಕ್ ಪರೀಕ್ಷೆ ಪಾಸಾಗಲಾರೆ!’ ಅಂತ ಅವನ ಮನೆಯವರೆಲ್ಲ ಹೇಳುತ್ತಿದ್ದರಂತೆ. ಕೋವಿಡ್ ಪಿಡುಗಿನ (pandemic) ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಮಕ್ಕಳು ಹೇಗೆ ಓದತ್ತಿದ್ದಾರೆ, ಎಷ್ಟು ಓದುತ್ತಿದ್ದಾರೆ ಅಂತ ಎಲ್ಲರಿಗೂ ಗೊತ್ತಿರುವ ವಿಷಯವೇ. ಅನೇಕ ಮಕ್ಕಳು ಈ ವರ್ಷ ಪಾಸಾಗಲಾರೆವು ಎಂಬ ಮನೋಭಾವದಂದಲೇ ಪರೀಕ್ಷೆಗಳಿಗೆ ಹಾಜರಾಗಿದ್ದರು. ಅಂಥವರಲ್ಲಿ ಈ ಹುಡುಗ ಕೊಪ್ಪಳ ಜಿಲ್ಲೆಯ ಕಾತರಕಿ ಗ್ರಾಮದ ಶಿವಕುಮಾರ (Shuvakumar) ಕೂಡ ಒಬ್ಬ.

ನಮಗೆ ಗೊತ್ತಿದೆ. ಕೆಲ ಮಕ್ಕಳು 625 ಕ್ಕೆ 620 ಅಂಕ ಪಡೆದರೂ ದುಃಖಿಸುತ್ತಾರೆ. ರ್ಯಾಂಕ್ ಕೈತಪ್ಪಿದ್ದಕ್ಕೆ ಪರಿತಪಿಸುತ್ತಾರೆ. ಕೆಲವರು ಡಿಸ್ಟಿಂಕ್ಷನ್ ಬರಲಿಲ್ಲ ಅಂತ ಗೋಳಾಡುತ್ತಾರೆ. ಪ್ರಥಮ ದರ್ಜೆಯಲ್ಲಿ ಪಾಸಾಗಲಿಲ್ಲ ತಮ್ಮನ್ನು ತಾವು ಶಪಿಸಿಕೊಳ್ಳುವವರೂ ಇದ್ದಾರೆ.

ಆದರೆ ನಮ್ಮ ಹೀರೋ ನೋಡಿ ಮಾರಾಯ್ರೇ. ಅವನಿಗೆ ಶ್ರೇಣಿಗಳ ಪರಿವೆ ಇಲ್ಲ. ಬರೀ ಪಾಸಾಗಿರುವುದಕ್ಕೆ ಪಿಯು ವ್ಯಾಸಂಗಕ್ಕೆ ಯಾವ ಕಾಲೇಜು ಪ್ರವೇಶ ನೀಡೀತು ಎಂಬ ಯೋಚನೆಯೂ ಅವನಗಿಲ್ಲ. ಅದನ್ನೆಲ್ಲ ಅವನು ಈ ಜನ್ಮದಲ್ಲಿ ಪಾಸಾಗಲಾರೆ ಎಂದು ಜರಿಯುತ್ತಿದ್ದ ಪಾಲಕರಿಗೆ ಬಿಟ್ಟಿದ್ದಾನೆ.

ಅದೇನೆ ಇರಲಿ ಅವನ ಬದುಕಿನ ಧೋರಣೆ ಇಷ್ಟವಾಗುತ್ತದೆ. ನಮಗಿರುವಷ್ಟರಲ್ಲಿ ಸಂತೃಪ್ತಿ ಕಂಡುಕೊಳ್ಳುವ ಧೋರಣೆ. ಸುರಿಯುತ್ತಿರುವ ಮಳೆ ಲೆಕ್ಕಿಸದೆ ಮೈ ಮರೆತು ಕುಣಿಯುತ್ತಿರುವ ಶಿವಕುಮಾರನ ಮುಂದಿನ ಬಾಳು ಹಸನಾಗಲಿ.

TV9 Kannada


Leave a Reply

Your email address will not be published. Required fields are marked *