ಮೆಟ್ರೋ ಪ್ರಯಾಣಿಕರೇ; ಸೋಮವಾರದಿಂದ ಮೆಟ್ರೋ ಸಂಚಾರ ಆರಂಭ.. ಆದ್ರೆ..!?

ಮೆಟ್ರೋ ಪ್ರಯಾಣಿಕರೇ; ಸೋಮವಾರದಿಂದ ಮೆಟ್ರೋ ಸಂಚಾರ ಆರಂಭ.. ಆದ್ರೆ..!?

ಬೆಂಗಳೂರು: ನಮ್ಮ ಮೆಟ್ರೋ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಜೂನ್ 21(ಸೋಮವಾರ) ದಿಂದ ನಮ್ಮ ಮೆಟ್ರೋ ಕಾರ್ಯಾರಂಭವಾಗಲಿದ್ದು  ಪ್ರಯಾಣಿಕರ ಸೇವೆಗೆ ಲಭ್ಯವಿರಲಿದೆ. ವಾರದ ಐದು ದಿನಗಳಲ್ಲಿ ಓಡಾಟ ನಡೆಸಲಿದೆ.

ಎರಡು ಹಂತಗಳಲ್ಲಿ ಮೆಟ್ರೋ ರೈಲು ಪ್ರಯಾಣ ನಡೆಸಲಿದೆ.. ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 11 ಗಂಟೆಯವರೆಗೆ ಹಾಗೂ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಂಚಾರ ನಡೆಸಲಿದೆ. ಈ ಅವಧಿಯಲ್ಲಿ ಪ್ರತಿ ಐದು‌ ನಿಮಿಷಕ್ಕೆ ಒಂದರಂತೆ ರೈಲುಗಳು ಸಂಚರಿಸಲಿವೆ.

ಇನ್ನು ವೀಕ್ ಎಂಡ್ ಕರ್ಫ್ಯೂ ಸಂದರ್ಭದಲ್ಲಿ ಇರಲ್ಲ ಮೆಟ್ರೋ ಸಂಚಾರ ಇರೋದಿಲ್ಲ. ಪ್ರತಿ ಶುಕ್ರವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೂ ಮೆಟ್ರೋ ಸೇವೆ ಪ್ರಯಾಣಿಕರಿಗೆ ಲಭ್ಯವಿರೋದಿಲ್ಲ. ಇನ್ನು ಮೆಟ್ರೋ ಸಂಚಾರದ ವೇಳೆ ಶೇಕಡಾ 50 ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಟಿಕೆಟ್ ಕೌಂಟರ್​ಗಳಲ್ಲಿ ಟಿಕೆಟ್ ಲಭ್ಯವಿರುವುದಿಲ್ಲ.. ಕೇವಲ ಮೆಟ್ರೋ ಕಾರ್ಡ್ ರೀಚಾರ್ಜ್ ಮಾಡಿಸಿ ಮೆಟ್ರೋದಲ್ಲಿ ಪ್ರಯಾಣಿಸಬಹುದು.

The post ಮೆಟ್ರೋ ಪ್ರಯಾಣಿಕರೇ; ಸೋಮವಾರದಿಂದ ಮೆಟ್ರೋ ಸಂಚಾರ ಆರಂಭ.. ಆದ್ರೆ..!? appeared first on News First Kannada.

Source: newsfirstlive.com

Source link